Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಉಪ್ಪಿಟ್ಟು ಬೇಡ ಅಂದೋರು ಕೂಡ ಮತ್ತೊಮ್ಮೆ ಸವಿಯೋದು ಖಚಿತ: ಈ ರೀತಿ ಮಾಡಿ ತರಕಾರಿ ಉಪ್ಪಿಟ್ಟು!
ಬೆಳಗ್ಗೆ ತಿಂಡಿಯ ಸಮಯದಲ್ಲಿ ನೀವು ಬಹಳಷ್ಟು ಬಾರಿ ರುಚಿ ರುಚಿಯ ತಿಂಡಿಯನ್ನು ಮಾಡಲು ಬಯಸುತ್ತೀರಿ. ಅದ್ರಲ್ಲು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ರುಚಿ ರುಚಿಯ ತಿಂಡಿಗಳು ಅಂದ್ರೆ ಇಷ್ಟವಾಗುತ್ತೆ. ಹಾಗೆ ಮಧ್ಯಾಹ್ನದ ಬಾಕ್ಸ್‌ಗಾಗಿಯೂ ನೀವು ತಿಂಡಿ ಮಾಡಬೇಕಾಗಿದ್ದರೆ ಎರಡು ಸಮಯದಲ್ಲಿ ಸವಿಯಲು ಇಷ್ಟವಾಗುವ ತಿಂಡಿಗಳ ಮಾಡುವುದು ಸಹಜ.
ಇಂತಹ ತಿಂಡಿಗಳಲ್ಲಿ ಉಪ್ಪಿಟ್ಟು ಕೂಡ ಒಂದು. ನೀವು ತಿಂಡಿಯ ಸಮಯದಲ್ಲಿ ಮಾಡುವ ಉಪ್ಪಿಟ್ಟನ್ನು ಮಧ್ಯಾಹ್ನದ ಊಟದ ಸಮಯಕ್ಕೆ ಬಾಕ್ಸ್‌ನಲ್ಲಿ ಸವಿಯಬಹುದು. ಆದ್ರೆ ಕೆಲವರಿಗೆ ಉಪ್ಪಿಟ್ಟು ಸವಿಯೋದು ಅಂದ್ರೆ ಇಷ್ಟವಾಗಲ್ಲ. ಉಪ್ಪಿನಲ್ಲಿ ಹಲವು ಬಗೆಗಳಿವೆ. ನೀವು ವಿಶೇಷ ರೀತಿಯ ಉಪ್ಪಿಟ್ಟು ಮಾಡಿದ್ರೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ.
ಆದ್ರೆ ಉಪ್ಪಿಟ್ಟನ್ನು ಎಲ್ಲರಿಗೂ ಇಷ್ಟವಾಗುವಂತೆ ರುಚಿ ರುಚಿಯಾಗಿ ಮಾಡಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ತರಕಾರಿ ಉಪ್ಪಿಟ್ಟು ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಪಲಾವ್‌ನಂತೆ ಉಪ್ಪಿಟ್ಟಿಗೂ ಕೂಡ ರುಚಿ ರುಚಿಯಾದ ತರಕಾರಿಗಳ ಬಳಸಿಕೊಂಡು ಮಾಡಬಹುದು. ಹಾಗಾದ್ರೆ ತರಕಾಿ ಉಪ್ಪಿಟ್ಟು ಮಾಡುವ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ತರಕಾರಿ ಉಪ್ಪಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ತರಕಾರಿ ಉಪ್ಪಿಟ್ಟು ಮಾಡಲು ಅಗತ್ಯ ವಸ್ತುಗಳಿವು
- ಉಪ್ಪಿಟ್ಟು ರವೆ
- ಬಟಾಣಿ
- ಕ್ಯಾರೆಟ್
- ಬೀನ್ಸ್
- ಉದ್ದಿನ ಬೇಳೆ
- ಕಡಲೆ ಬೇಳೆ
- ನಿಂಬೆ ರಸ
- ತೆಂಗಿನ ಕಾಯಿ ತುರಿ
- ತುಪ್ಪ
- ಎಣ್ಣೆ
- ಕರಿಬೇವು
- ಸಾಸಿವೆ
- ಉಪ್ಪು
- ಹಸಿ ಮೆಣಸು
ತರಕಾರಿ ಉಪ್ಪಿಟ್ಟು ಮಾಡಲು ಅಗತ್ಯ ವಸ್ತುಗಳಿವು
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಗೋಡಂಬಿ ಇದ್ದರೆ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 1 ನಿಮಿಷದ ಬಳಿಕ ಹಸಿ ಮೆಣಸು, ಶುಂಠಿ, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಚಿಟಿಕೆ ಇಂಗು ಹಾಕಿ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿ ಫ್ರೈ ಮಾಡಿ.
ಈಗ ಕತ್ತರಿಸಿಕೊಂಡಿರುವ ತರಕಾರಿ ಹಾಕಬೇಕು. ಕ್ಯಾರೆಟ್, ಬೀನ್ಸ್, ಬಟಾಣಿ, ಹಾಗೆ ನಿಮಗೆ ಇಷ್ಟವಾಗುವ ತರಕಾರಿಗಳನ್ನು ಈ ಉಪ್ಪಿಟ್ಟು ಮಾಡುವಾಗ ಬಳಸಬಹುದು. ಈ ತರಕಾರಿಗಳು ಚೆನ್ನಾಗಿ ಫ್ರೈ ಆಗಬೇಕು. ಈಗ ಒಂದು ಕಪ್‌ನಲ್ಲಿ ಉಪ್ಪಿಟ್ಟು ರವೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಬೇಯಿಸಿಕೊಳ್ಳಿ.
4ರಿಂದ 5 ನಿಮಿಷ ಹುರಿದ ಬಳಿಕ ಅಳತೆ ಕಪ್‌ನಲ್ಲಿ ಮೂರು ಕಪ್ ಬಿಸಿ ಬೀರು ಹಾಕಬೇಕು. ನೀರು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಕಾಯಿ ತುರಿ, ನಿಂಬೆ ರಸ, ತುಪ್ಪ ಹಾಕಿ ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ. ನಿಧಾನಕ್ಕೆ ಗಟ್ಟಿಯಾಗುವಾಗ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬಿಡಿ.
ಇದು ಮೃದುವಾಗಿದ್ದಾಗಲೇ ಒಲೆ ಆಫ್ ಮಾಡಿ ಆದ್ರೆ ಮುಚ್ಚಳ ತೆಗೆಯದೆ ಇಟ್ಟುಬಿಡಿ. 1 ನಿಮಿಷ ಹಾಗೆಯೇ ಬಿಟ್ಟು ಮುಚ್ಚಳ ತೆರೆದು ಒಮ್ಮೆ ಮಿಕ್ಸ್ ಮಾಡಿ ಸವಿಯಲು ಬೀಡಿ. ಇದು ಬಿಸಿ ಬಿಸಿ ಇದ್ದಾಗಲೇ ಸವೊಯಲು ಬಹಳ ರುಚಿ ನೀಡಲಿದೆ. ನೀವು ಸಹ ಈ ವಿಧಾನದಲ್ಲಿ ಉಪ್ಪಿಟ್ಟು ಮಾಡಿ ಸವಿದು ನೋಡಿ. ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು. ಹಾಗೆ ಎಲ್ಲರು ಈ ಉಪ್ಪಿಟ್ಟು ಸವಿಯಲು ಇಷ್ಟಪಡುತ್ತಾರೆ.



Click it and Unblock the Notifications
