Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಬಾಯಾಲ್ಲಿ ನೀರೂರಿಸುತ್ತೆ ಈ ಗರಿಗರಿಯಾದ ಆಲೂಗಡ್ಡೆ ದೋಸೆ
ಆಲೂಗಡ್ಡೆ ಪರೋಟ, ಸಾಗು, ಪಲ್ಯ ಇನ್ನಿತರ ಖಾದ್ಯಗಳನ್ನು ಸವಿದಿರುತ್ತೀರಿ, ಆದರೆ ಆಲೂಗಡ್ಡೆ ದೋಸೆಯನ್ನ ಎಂದಾದರೂ ಟೇಸ್ಟ್ ಮಾಡಿದ್ದೀರಾ?.. ಅರೇ.. ಆಲೂಗಡ್ಡೆಯಿಂದ ದೋಸೆನಾ ಅಂತ ಆಶ್ಚರ್ಯ ಪಡ್ತೀದ್ದೀರಾ? ಹೌದು, ಡೈಲಿ ಅದೇ ಮಾಮೂಲಿ ದೋಸೆ ತಿಂದು ಸಾಕಾಗಿದ್ರೆ, ಈ ಆಲೂಗಡ್ಡೆ ದೋಸೆಯನ್ನೊಮ್ಮೆ ಟ್ರೈ ಮಾಡಿ.. ರುಚಿ ಹೇಗಿತ್ತು ಅಂತ ನಮಗೆ ತಿಳಿಯೋದನ್ನ ಮರೀಬೇಡಿ..

Recipe By: Shreeraksha
Recipe Type: Vegetarian
Serves: 3 ಜನ
-
ಬೇಕಾಗುವ ಸಾಮಾಗ್ರಿಗಳು:
3 ಬೇಯಿಸಿದ ಆಲೂಗಡ್ಡೆ
1½ ಕಪ್ ಅಕ್ಕಿ ಹಿಟ್ಟು
¼ ಕಪ್ ರವೆ
1 ಚಮಚ ಉಪ್ಪು
1 ಈರುಳ್ಳಿ
2 ಚಮಚ ಕೊತ್ತಂಬರಿ ಸೊಪ್ಪು
2 ಮೆಣಸಿನಕಾಯಿ
ಕರಿಬೇವಿನ ಎಲೆಗಳು
1 ಚಮಚ ಜೀರಿಗೆ
ಎಣ್ಣೆ
ನೀರು
-
ತಯಾರಿಸುವ ವಿಧಾನ:
ಮೊದಲಿಗೆ, ಮಿಕ್ಸಿ ಜಾರ್ ಗೆ 3 ಬೇಯಿಸಿದ ಆಲೂಗಡ್ಡೆಯನ್ನು ಕತ್ತರಿಸಿ, ಹಾಕಿ. ಅದಕ್ಕೆ 1 ಕಪ್ ನೀರು ಸೇರಿಸಿ, ನಯವಾದ ಪೇಸ್ಟ್ ತಯಾರಿಸಿ, ಬಟ್ಟಲಿಗೆ ಹಾಕಿಕೊಳ್ಳಿ.
ಅದಕ್ಕೆ 1½ ಕಪ್ ಅಕ್ಕಿ ಹಿಟ್ಟು, ¼ ಕಪ್ ರವೆ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ, 5 ಕಪ್ ನೀರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
ಮಿಶ್ರಣದಲ್ಲಿ ಗಂಟಿಲ್ಲ ಎಂಬುದನ್ನು ಸರಿಯಾಗಿ ಗಮನಿಸಿ, ಮತ್ತಷ್ಟು ಮಿಶ್ರಣ ಮಾಡಿ.
ಮುಂದೆ ಇದಕ್ಕೆ 1 ಈರುಳ್ಳಿ, ಕೊತ್ತಂಬರಿ ಸೊಪ್ಪು, 2 ಮೆಣಸಿನಕಾಯಿ, ಕರಿಬೇವು ಮತ್ತು 1 ಟೀಸ್ಪೂನ್ ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ರವೆ ಚೆನ್ನಾಗಿ ನೆನೆಯಲು 10 ನಿಮಿಷಗಳ ಕಾಲ ಹಾಗೆಯೇ ಬಿಡಿ.
10 ನಿಮಿಷಗಳ ನಂತರ, ಅಗತ್ಯವಿದ್ದರೆ ನೀರನ್ನು ಸೇರಿಸಿ, ಹಿಟ್ಟು ನೀರು ದೋಸೆಯ ಹದದಲ್ಲಿರಲಿ.
ನಂತರ ಪ್ಯಾನ್ ಬಿಸಿಗಿಟ್ಟು, ಹಿಟ್ಟನ್ನು ಪ್ಯಾನ್ ಮೇಲೆ ಸುರಿಯಿರಿ.
ಅದರ ಮೇಲೆ 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, 2 ನಿಮಿಷಗಳ ಕಾಲ ಅಥವಾ ದೋಸೆ ಗರಿಗರಿಯಾಗುವವರೆಗೆ ಹುರಿಯಲು ಬಿಡಿ.
ಕೊನೆಯದಾಗಿ ಚಟ್ನಿಯೊಂದಿಗೆ ಸವಿಯಲು ಗರಿಗರಿಯಾದ ಆಲೂ ದೋಸೆ ಸವಿಯಲು ಸಿದ್ಧ.
- People - 3
- ಕ್ಯಾಲೋರಿ: - 56 ಕೆ.ಸಿ.ಎಲ್
- ಕೊಬ್ಬು - 1 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 12 ಗ್ರಾಂ
- ಪ್ರೋಟೀನ್ - 1 ಗ್ರಾಂ



Click it and Unblock the Notifications
