For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿ ಸ್ಪೆಷಲ್ ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ

Posted By:
|

ಇನ್ನೇನು ಮಕರ ಸಂಕ್ರಾಂತಿ ಬರ್ತಾ ಇದೆ. ಇದರ ಜೊತೆಗೆ ಸಂಕ್ರಾಂತಿ ಸ್ಪೆಷಲ್ ಖಾದ್ಯಗಳು ಹಬ್ಬದ ಸಂಭ್ರಮಕ್ಕೆ ಮತಷ್ಟು ಕಳೆಕಟ್ಟಲಿವೆ. ಸಂಕ್ರಾಂತಿ ಹಬ್ಬದ ಪ್ರಮುಖ ಭಕ್ಷ್ಯ ಅಂದ್ರೆ ಅದು ಖಾರಾ ಪೊಂಗಲ್..

Pongal Recipe In Kannada

ಹೌದು, ದಕ್ಷಿಣ ಭಾರತದ ಸಾಂಪ್ರದಾಯಿಕ ಪಾಕವಿಧಾನವನ್ನು ಸಂಕ್ರಾಂತಿ ಹಬ್ಬದ ಆಚರಣೆಗೆ ವಿಶೇಷವಾಗಿ ತಯಾರಿಸಲಾಗುವುದು. ತಮಿಳು ನಾಡಿನಲ್ಲಿ ಮುಂಜಾನೆಯ ಉಪಹಾರವಾಗಿಯೂ ಇದನ್ನು ಸೇವಿಸುತ್ತಾರೆ. ಸಮೃದ್ಧವಾಗಿ ಹೆಸರು ಬೇಳೆ, ಅಕ್ಕಿ, ತೆಂಗಿನ ತುರಿ, ತುಪ್ಪ ಹಾಗೂ ಕೆಲವು ವಿಶೇಷ ಮಸಾಲೆ ಪದಾರ್ಥಗಳನ್ನು ಬಳಸುವುದರ ಮೂಲಕ ಇದನ್ನು ತಯಾರಿಸುತ್ತಾರೆ.

ಪೊಂಗಲ್ ಅಲ್ಲಿ ಖಾರ ಹಾಗೂ ಸಿಹಿ ಪೊಂಗಲ್ ಎನ್ನುವ ಎರಡು ವಿಧಗಳಿವೆ. ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ಕೂಡಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಹೆಸರು ಬೇಳೆ, ತೆಂಗಿನ ತುರಿ ಹಾಗೂ ಅನ್ನಗಳ ಮಿಶ್ರಣವು ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯದ ಪೋಷಣೆಯನ್ನು ಸಹ ಮಾಡುವುದು. ಚಳಿಗಾಲದ ಸಮಯದಲ್ಲಿ ಬಿಸಿಬಿಸಿಯಾದ ಪೊಂಗಲ್ ಸವಿಯಲು ಹೆಚ್ಚು ಆಹ್ಲಾದವನ್ನು ನೀಡುವುದು. ಹಾಗಾದ್ರೆ ಬನ್ನಿ ಈ ಪೊಂಗಲ್ ಅನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಸಂಕ್ರಾಂತಿ ಸ್ಪೆಷಲ್ ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ
ಸಂಕ್ರಾಂತಿ ಸ್ಪೆಷಲ್ ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ
Prep Time
5 Mins
Cook Time
20M
Total Time
25 Mins

Recipe By: Shreeraksha

Recipe Type: Pongal

Serves: 3

Ingredients
  • ಬೇಕಾಗುವ ಸಾಮಾಗ್ರಿಗಳು:

    1 ಕಪ್‌ ಅಕ್ಕಿ

    1/2 ಕಪ್‌ ಹೆಸರು ಬೇಳೆ

    1 ಕಪ್‌ ಹಾಲು

    1 ಕಪ್‌ ತುರಿದ ತೆಂಗಿನಕಾಯಿ

    5 ಚಮಚ ತುಪ್ಪ

    ಅಗತ್ಯಕ್ಕೆ ತಕ್ಕಷ್ಟು ಇಂಗು

    ಅಗತ್ಯಕ್ಕೆ ತಕ್ಕಷ್ಟು ಉಪ್ಪು

    ಒಗ್ಗರಣೆಗೆ:

    1 ಚಮಚ ಜೀರಿಗೆ

    1 ಇಂಚು ಶುಂಠಿ

    ಹಸಿಮೆಣಸಿನ ಕಾಯಿ

    ಗೋಡಂಬಿ

    ಕರಿಬೇವು

    ಕಾಳು ಮೆಣಸು

    ಅರಿಶಿಣ

Red Rice Kanda Poha
How to Prepare
  • ತಯಾರಿಸುವ ವಿಧಾನ:

    1. ಹೆಸರು ಬೇಳೆ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಬೆಚ್ಚಗೆ ಆಗುವ ಹಾಗೆ ಸ್ವಲ್ಪ ಹುರಿದುಕೊಳ್ಳಿ. ನಂತರ ಒಂದೆಡೆ ಆರಲು ಬಿಡಿ.
    2. ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಗೋಡಂಬಿಯನ್ನು ಸೇರಿಸಿ, ಹುರಿದುಕೊಳ್ಳಿ.
    3. ಆರಿದ ಹೆಸರು ಬೇಳೆ ಹಾಗೂ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿ, ಚೆನ್ನಾಗಿ ತೊಳೆಯಿರಿ. ನಂತರ ಕುಕ್ಕರ್ ಪಾತ್ರೆಗೆ ವರ್ಗಾಯಿಸಿ. ಇದಕ್ಕೆ 2 1/2 ಕಪ್ ಗಳಷ್ಟು ನೀರು, ಹಾಲು ಮತ್ತು ತೆಂಗಿನ ತುರಿಯನ್ನು ಸೇರಿಸಿ, 4-5 ಸೀಟಿಯನ್ನು ಕೂಗಿಸಿಕೊಳ್ಳಿ. ಅಕ್ಕಿ ಮತ್ತು ಬೇಳೆಯು ಮೃದುವಾಗಿ ಬೆಂದಿರಬೇಕು. ( ಹಳೆ ಅಕ್ಕಿ ಆಗಿದ್ದರೆ 3 ಕಪ್ ನೀರನ್ನು ಸೇರಿಸಬೇಕು.)
    4. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ನಂತರ ಇದಕ್ಕೆ ಮೆಣಸು ಮತ್ತು ಜೀರಿಗೆ ಹಾಕಿ ಹುರಿಯಿರಿ. ಬಳಿಕ ಹೆಚ್ಚಿಕೊಂಡ ಶುಂಠಿ, ಕರಿಬೇವಿನ ಎಲೆ, ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ, ಅರಿಶಿನ, ಇಂಗು ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ. ನಂತರ ಈ ಮೊದಲೆ ಹುರಿದುಕೊಂಡ ಗೋಡಂಬಿಯನ್ನು ಸೇರಿಸಿ, ಮಿಶ್ರಗೊಳಿಸಿ.
    5. ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿಕೊಂಡ ಅಕ್ಕಿ ಬೇಳೆ ಮತ್ತು ಒಗ್ಗರಣೆಯ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರನ್ನು ಅಥವಾ ಹಾಲನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, 2-3 ನಿಮಿಷಗಳ ಕಾಲ ಪುನಃ ಕುದಿಸಿ.
    6. ರುಚಿಕರವಾದ ಖಾರಾ ಪೊಂಗಲ್ ಅನ್ನು ಬಿಸಿ ಬಿಸಿ ಇರುವಾಗಲೇ ಹಸಿರು ಚಟ್ನಿ ಅಥವಾ ರೈತಾದೊಂದಿಗೆ ಸವಿಯಲು ನೀಡಿ. ನಿಮ್ಮ ಆಯ್ಕೆಗೆ ಅನುಗುಣವಾಗಿ ಖಾರಾ ಪೊಂಗಲ್ ಜೊತೆಗೆ ಸಿಹಿ ಪೊಂಗಲ್ಅನ್ನು ಸವಿಯಬಹುದು.
Instructions
  • ಚಳಿಗಾಲದ ಸಮಯದಲ್ಲಿ ಬಿಸಿಬಿಸಿಯಾದ ಪೊಂಗಲ್ ಸವಿಯಲು ಹೆಚ್ಚು ಆಹ್ಲಾದವನ್ನು ನೀಡುವುದು. ಹಾಗಾದ್ರೆ ಬನ್ನಿ ಈ ಪೊಂಗಲ್ ಅನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ನೋಡೋಣ.
Nutritional Information
  • ಬಡಿಸುವ ಪ್ರಮಾಣ - 3
  • ಕೊಬ್ಬು - ೮.೨ ಗ್ರಾಂ
  • ಪ್ರೋಟೀನ್ - ೫.೫ ಗ್ರಾಂ
  • ಕಾರ್ಬೋಹೈಡ್ರೇಟ್ಸ್ - ೨೯ಗ್ರಾಂ
  • ಫೈಬರ್ - ೨.೨ ಗ್ರಾಂ
[ 4.5 of 5 - 57 Users]
Story first published: Friday, January 8, 2021, 16:11 [IST]
X
Desktop Bottom Promotion