Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ರೆ, ಈ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಮಾಡಿ
Recipes
oi-Shreeraksha
Posted By: Shreeraksha
ಅದೇ ಮಾಮೂಲಿ ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ದರೆ, ಈ ಅವಲಕ್ಕಿ ರೊಟ್ಟಿಯನ್ನೊಮ್ಮೆ ಪ್ರಯತ್ನ ಮಾಡಿ. ಅವಲಕ್ಕಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ರುಚಿ ನೀಡುವುದು. ಬೆಳಿಗ್ಗೆ ತಿಂಡಿಗೆ, ಸಂಜೆ ಸ್ನಾಕ್ ಗೆ ಕೂಡ ಈ ರೊಟ್ಟಿ ಮಾಡಬಹುದು. ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ಹಂತಹಂತವಾಗಿ ನೋಡೋಣ.

ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ರೆ,
ಈ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಮಾಡಿ
ಅಕ್ಕಿ ರೊಟ್ಟಿ ತಿಂದು
ಬೇಜಾರಾಗಿದ್ರೆ, ಈ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಮಾಡಿ
Prep Time
5 Mins
Cook Time
15M
Total Time
20 Mins
Recipe By: Shreeraksha
Recipe Type: Vegetarian
Serves: 3
Ingredients
-
ಬೇಕಾಗುವ ಪದಾರ್ಥಗಳು:
- 1 ಕಪ್ ತೆಳು ಅವಲಕ್ಕಿ
- 1 ಕಪ್ ಅಕ್ಕಿ ಹಿಟ್ಟು
- 1 ಈರುಳ್ಳಿ (ನುಣ್ಣಗೆ ಕತ್ತರಿಸಿದ)
- ಕರಿಬೇವಿನ ಎಲೆಗಳು (ನುಣ್ಣಗೆ ಕತ್ತರಿಸಿದ)
- 2 ಚಮಚ ಕೊತ್ತಂಬರಿ ಸೊಪ್ಪು
- 1 ಇಂಚಿನ ಶುಂಠಿ (ನುಣ್ಣಗೆ ಕತ್ತರಿಸಿದ)
- 2 ಮೆಣಸಿನಕಾಯಿ (ನುಣ್ಣಗೆ ಕತ್ತರಿಸಿದ)
- 1 ಚಮಚ ಜೀರಿಗೆ
- ½ ಚಮಚ ಉಪ್ಪು
- ಬಿಸಿ ನೀರು
- ಎಣ್ಣೆ
How to Prepare
-
ತಯಾರಿಸುವ ವಿಧಾನ:
- ಮೊದಲಿಗೆ, ಒಂದು ಬಟ್ಟಲಿನಲ್ಲಿ 1 ಕಪ್ ಅವಲಕ್ಕಿ ತೆಗೆದುಕೊಂಡು ನೀರು ಹಾಕಿ ತೊಳೆದು, ಮತ್ತೊಂದು ಬಟ್ಟಲಿಗೆ ವರ್ಗಾಯಿಸಿ.
- ಈಗ ಅದಕ್ಕೆ 1 ಕಪ್ ಅಕ್ಕಿ ಹಿಟ್ಟು, 1 ಈರುಳ್ಳಿ, ಕರಿಬೇವು ಮತ್ತು 2 ಚಮಚ ಕೊತ್ತಂಬರಿ ಸೇರಿಸಿ, ಬೆರೆಸಿ.
- ನಂತರ ಶುಂಠಿ, 2 ಮೆಣಸಿನಕಾಯಿ, 1 ಚಮಚ ಜೀರಿಗೆ ಮತ್ತು ರುಚಿಗೆ ಉಪ್ಪು ಸೇರಿಸಿ, ಚೆನ್ನಾಗಿ ಹಿಸುಕುತ್ತಾ ಮಿಕ್ಸ್ ಮಾಡಿ.
- ಈಗ ಇದಕ್ಕೆ ಬಿಸಿ ನೀರನ್ನು ಸೇರಿಸಿ, ತಟ್ಟಲು ಸರಿಹೊಂದುವಷ್ಟು ಪ್ರಮಾಣ ಹಿಟ್ಟನ್ನು ತಯಾರಿಸಿ.
- ನಂತರ ಬಾಳೆ ಎಲೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ಬಾಳೆ ಎಲೆ ಮೃದುವಾಗಿರದಿದ್ದರೆ, ಸ್ವಲ್ಪ ಬಿಸಿ ಮಾಡಿ ನಂತರ ಎಣ್ಣೆ ಹಚ್ಚಿ.
- ಅದರ ಮೇಲೆ ಉಂಡೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ತೆಳುವಾಗಿ ತಟ್ಟುತ್ತಾ ಬನ್ನಿ.
- ಇದರಲ್ಲಿ 3 ರಂಧ್ರಗಳನ್ನು ಮಾಡಿ, ಏಕೆಂದರೆ ಇದರಲ್ಲಿ ಎಣ್ಣೆ ಹಾಕಿ, ಚೆನ್ನಾಗಿ ಹುರಿಯಬಹುದು.
- ಈಗ ತಟ್ಟಿದ ರೊಟ್ಟಿಯನ್ನು ಬಿಸಿ ತವಾದ ಮೇಲೆ ಹಾಕಿ, ನಿಧಾನವಾಗಿ ಒತ್ತಿರಿ. ಒಂದು ನಿಮಿಷದ ನಂತರ, ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ.
- ಒಂದು ಕಡೆ ಬೆಂದ ನಂತರ ಮತ್ತೊಂದ ಬದಿ ತಿರುಗಿಸಿ, ಎಣ್ಣೆ ಸೇರಿಸಿ.
- ಎರಡೂ ಬದಿ ಸ್ವಲ್ಪ ಗೋಲ್ಡನ್ ಆಗುವವರೆಗೆ ಬೇಯಿಸಿ.
- ಅಂತಿಮವಾಗಿ, ತೆಂಗಿನಕಾಯಿ ಚಟ್ನಿಯೊಂದಿಗೆ ಅವಲಕ್ಕಿ ರೊಟ್ಟಿ ಸವಿಯಲು ಸಿದ್ಧ.
Instructions
Nutritional Information
- People - 3
- ಕ್ಯಾಲೋರಿಗಳು - 172 ಕೆ
- ಕೊಬ್ಬು - 1 ಗ್ರಾಂ
- ಪ್ರೋಟೀನ್ - 3 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 38 ಗ್ರಾಂ
- ಫೈಬರ್ - 2 ಗ್ರಾಂ
Comments
[ 5 of 5 - 24 Users]
Story first published: Monday, August 9, 2021, 9:00 [IST]
Other articles published on Aug 9, 2021



Click it and Unblock the Notifications