For Quick Alerts
ALLOW NOTIFICATIONS  
For Daily Alerts

ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ

Posted By:
|

ಆಷಾಢ ಮಾಸವನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವುದು. ಅವುಗಳಲ್ಲಿ ಒಂದು ನಮ್ಮ ತುಳುನಾಡಿನ ಆಟಿ ತಿಂಗಳು. ಇಲ್ಲಿ ಆಷಾಢವನ್ನು ಆಟಿ ಎಂದು ಕರೆಯಲಾಗುತ್ತಿದ್ದು, ಈ ತಿಂಗಳಲ್ಲಿ ಹೆಚ್ಚಾಗಿ ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದಲೇ ಆಹಾರ ತಯಾರಿಸುತ್ತಾರೆ. ಅವುಗಳಲ್ಲಿ ನಾವಿಂದು ಹೇಳ ಹೊರಟಿರುವುದು ಆಟಿ ಕಾಲದ ಪೆಲಕ್ಕಾಯಿ ಗಟ್ಟಿ ಬಗ್ಗೆ. ಹಲಸಿನ ಹಣ್ಣಿನ ಕಡುಬು ಎಂದೂ ಕರೆಯುವ ಈ ತಿಂಡಿಯನ್ನು ಕರಾವಳಿಯಲ್ಲಿ ಹೇಗೆ ಮಾಡುತ್ತಾರೆ ಎಂಬುದರ ಸವಿವರ ಇಲ್ಲಿದೆ.

Pelakai Gatti Recipe| Jackfruit Gatti| Halasina Hannina Kadubu
ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ
ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ
Prep Time
15 Mins
Cook Time
45M
Total Time
1 Hours0 Mins

Recipe By: Shreeraksha

Recipe Type: Snacks

Serves: 4

Ingredients
  • ಬೇಕಾಗಿರುವ ಪದಾರ್ಥಗಳು:

    ಹಲಸಿನ ಹಣ್ಣು- 2 ಕಪ್

    ಬೆಲ್ಲ - ಅರ್ಧ ಕಪ್

    ಏಲಕ್ಕಿ ಪುಡಿ - ಕಾಲು ಚಮಚ

    ತಾಜಾ ತೆಂಗಿನಕಾಯಿ - 2 ಕಪ್

    ಅಕ್ಕಿ - 2 ಕಪ್

    ಉಪ್ಪು - ರುಚಿಗೆ

    ತೇಗದ ಎಲೆಗಳು - 20 (ಲಭ್ಯವಿಲ್ಲದಿದ್ದರೆ ಬಾಳೆ ಎಲೆಗಳನ್ನು ಬಳಸಿ)

Red Rice Kanda Poha
How to Prepare
  • ತಯಾರಿಸುವ ವಿಧಾನ:

    • 2 ಕಪ್ ಅಕ್ಕಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
    • ಸುಮಾರು 20 ತೇಗದ ಎಲೆಗಳನ್ನು ಸ್ವಚ್ಛಗೊಳಿಸಿ ಒಣಗಿಸಿ.
    • ಹಲಸಿನ ಹಣ್ಣನ್ನು ಬಿಡಿಸಿಕೊಂಡು, ರುಬ್ಬಲು ಸುಲಭವಾಗುವ ರೀತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ.
    • ರುಬ್ಬುವ ಜಾರ್ ತೆಗೆದುಕೊಂಡು 2 ಕಪ್ ಕತ್ತರಿಸಿದ ಹಲಸಿನ ಹಣ್ಣು, ಅರ್ಧ ಕಪ್ ಬೆಲ್ಲ ಮತ್ತು ಕಾಲು ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ. ಬೇರಾವುದನ್ನು ಸೇರಿಸದೆ ಈ ಪದಾರ್ಥಗಳನ್ನು ಮಾತ್ರ ರುಬ್ಬಿಕೊಳ್ಳಿ. ಬ್ಯಾಟರ್ ಗಟ್ಟಿಯಾಗಿರಬೇಕು, ಆದ್ದರಿಂದ ನೀರನ್ನು ಸೇರಿಸಬೇಡಿ.
    • ಈಗ ತಯಾರಾದ ಹಲಸಿನ ಹಣ್ಣಿನ ಮಿಶ್ರಣಕ್ಕೆ 2 ಕಪ್ ತೆಂಗಿನಕಾಯಿ ಮತ್ತು ನೆನೆಸಿದ ಅಕ್ಕಿಯನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ನೀರು ಸೇರಿಸದೇ ಎಲ್ಲವನ್ನೂ ರುಬ್ಬಿಕೊಳ್ಳಿ.
    • ಬ್ಯಾಟರ್ ಸಿದ್ಧವಾದ ನಂತರ, ತೇಗದ ಎಲೆಗಳನ್ನು ತೆಗೆದುಕೊಂಡು ಅದಕ್ಕೆ 1 ಅಥವಾ 2 ಸೌಟ್ ಬ್ಯಾಟರ್ ನ್ನು ಎಲೆಯ ಮೇಲೆ ಹರಡಿ. ಜಾಸ್ತಿ ದಪ್ಪವೂ ಬೇಡ, ಜಾಸ್ತಿ ತೆಳ್ಳಗೆಯೂ ಆಗದಂತೆ ಹರಡಿ. ಈಗ 4 ಬದಿಗಳಿಂದ ಎಲೆಗಳನ್ನು ಮುಚ್ಚಿ.
    • ಇಡ್ಲಿ ಸ್ಟೀಮರ್ ನಲ್ಲಿ ಎಲ್ಲಾ ಎಲೆಗಳನ್ನು ಇದೇ ರೀತಿ ಮಾಡಿ ಒಳಗಿಡಿ.
    • ಹಲಸಿನ ಹಣ್ಣು ಬೇಯಲು ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಟ 30 ನಿಮಿಷಗಳ ಕಾಲ ಹೈ ಫ್ಲೇಮ್ ನಲ್ಲಿ ಕಡುಬನ್ನು ಬೇಯಿಸಬೇಕಾಗುತ್ತದೆ.
    • ಬೆಂದ ನಂತರ ಎಲೆಗಳನ್ನು ಬಿಚ್ಚಿ. ಕಡುಬು ಹಳದಿ ಅಥವಾ ಕಿತ್ತಳೆ-ಕೆಂಪು ಬಣ್ಣಕ್ಕೆ ಬದಲಾಗಿರುವುದನ್ನು ಕಾಣುತ್ತೀರಿ. ಏಕೆಂದರೆ ಅದಕ್ಕೆ ಬಳಸಿದ ತೇಗದ ಎಲೆಗಳಿಂದ. ಇವುಗಳು ಬಣ್ಣ, ಪರಿಮಳ ಮತ್ತು ಔ​​ಷಧೀಯ ಮೌಲ್ಯಗಳನ್ನು ಕಡುಬಿಗೆ ಹಸ್ತಾಂತರಿಸುತ್ತವೆ.
    • ಇವುಗಳನ್ನು ಕೇಕ್ ನಂತೆ ಕತ್ತರಿಸಿದರೆ, ಪೆಲಕ್ಕಾಯಿ ಗಟ್ಡಿ ಸವಿಯಲು ಸಿದ್ದ.
    • ಈ ರುಚಿಯಾದ ಹಲಸಿನ ಹಣ್ಣಿನ ಕಡುಬು ಅಥವಾ ಪೆಲಕ್ಕಾಯಿ ಗಟ್ಟಿಯನ್ನು ತುಪ್ಪ ಅಥವಾ ಚಿಕನ್ ಸುಕ್ಕದೊಂದಿಗೆ ಸವಿಯಬಹುದು.
Instructions
Nutritional Information
  • People - 3
  • ಕೊಬ್ಬು - 0.1ಗ್ರಾ
  • ಪ್ರೋಟೀನ್ - 1.2ಗ್ರಾ
  • ಕಾರ್ಬೋಹೈಡ್ರೇಟ್ - 16ಗ್ರಾ
  • ಫೈಬರ್ - 0.33ಗ್ರಾ
[ 5 of 5 - 51 Users]
X
Desktop Bottom Promotion