For Quick Alerts
ALLOW NOTIFICATIONS  
For Daily Alerts

ಒಮ್ಮೆ ಟ್ರೈ ಮಾಡಿ ಈ ನೆಲಕಡಲೆ ಚಟ್ನಿ..

Posted By:
|

ಬಡವರ ಬಾದಾಮಿ ಎಂದು ಕರೆಯಲ್ಪಡುವಂತಹ ನೆಲಗಡಲೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ತುಂಬಾ ಆರೋಗ್ಯಕರ ಆಹಾರ ಪದಾರ್ಥವಾಗಿದೆ. ಇದರಿಂದಾಗಿ ಹೆಚ್ಚಾಗಿ ನೆಲಗಡಲೆಯನ್ನು ಹಲವಾರು ಖಾದ್ಯಗಳಲ್ಲಿ ಬಳಸುತ್ತಾರೆ. ನೆಲಗಡಲೆ ಚಟ್ನಿಯು ಉತ್ತರಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರ ಖಾದ್ಯವು ಜೋಳದ ರೊಟ್ಟಿ, ಚಪಾತಿ ಅಥವಾ ರಾಗಿ ರೊಟ್ಟಿ ಜೊತೆಗೆ ಸವಿಯಬಹುದು. ನೆಲಗಡಲೆ ಚಟ್ನಿಯನ್ನು ತಯಾರಿಸಿಕೊಳ್ಳುವುದು ತುಂಬಾ ಸುಲಭ ಮತ್ತು ಇದನ್ನು ಕೆಡದಂತೆ ಇಡಬಹುದು ಕೂಡ. ನೆಲಗಡಲೆ ಚಟ್ನಿಯನ್ನು ಉಪವಾಸದ ಸಂದರ್ಭದಲ್ಲೂ ಹೆಚ್ಚಿನವರು ಬಳಸಿಕೊಳ್ಳುತ್ತಾರೆ ಇದು ತುಂಬಾ ರುಚಿಕರ ಹಾಗೂ ಪೋಷಕಾಂಶಯುಕ್ತವಾಗಿರುವ ಕಾರಣದಿಂದ ಉಪವಾಸ ಮಾಡುವವರಿಗೆ ತುಂಬಾ ಲಾಭಕಾರಿ. ಹಾಗಾದರೆ ಬನ್ನಿ ಈ ನೆಲಗಡಲೆ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ...

ಒಮ್ಮೆ ಟ್ರೈ ಮಾಡಿ ಈ ನೆಲಕಡಲೆ ಚಟ್ನಿ..
ಒಮ್ಮೆ ಟ್ರೈ ಮಾಡಿ ಈ ನೆಲಕಡಲೆ ಚಟ್ನಿ..
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 2

Ingredients
 • ಪ್ರಮುಖ ಸಾಮಗ್ರಿಗಳು:

  3/4 ಕಪ್‌ ಹಸಿ ನೆಲಗಡಲೆ

  1/2 ಕಪ್‌ ಕೊತ್ತಂಬರಿ ಸೊಪ್ಪು

  ಅಗತ್ಯಕ್ಕೆ ತಕ್ಕಷ್ಟು ಉಪ್ಪು

  2 ಚಮಚ ನಿಂಬೆ ರಸ

  1/2 ಕಪ್‌ ನೀರು

  2 - ಹಸಿಮೆಣಸಿನಕಾಯಿ

Red Rice Kanda Poha
How to Prepare
 • ತಯಾರಿಸುವ ವಿಧಾನ:

  -ನೆಲಗಡಲೆ, ಕೊತ್ತಂಬರಿ, ಕತ್ತರಿಸಿದ ಹಸಿ ಮೆಣಸು, ಉಪ್ಪು, ಸ್ವಲ್ಪ ನೀರನ್ನು ಮಿಕ್ಸಿಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.

  -ರುಬ್ಬಿಕೊಂಡಿರುವ ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ನಂತರ ಇದಕ್ಕೆ ಅರ್ಧ ಚಮಚ ಲಿಂಬೆ ರಸವನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

  -ನವರಾತ್ರಿಗೆ ಮಾಡುವಂತಹ ವಿಶೇಷ ರೀತಿಯ ತಿನಿಸುಗಳ ಜತೆಗೆ ನೀವು ಇದನ್ನು ಬಳಸಿ ಕೊಳ್ಳಬಹುದು.

Instructions
 • ಬಡವರ ಬಾದಾಮಿ ಎಂದು ಕರೆಯಲ್ಪಡುವಂತಹ ನೆಲಗಡಲೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ತುಂಬಾ ಆರೋಗ್ಯಕರ ಆಹಾರ ಪದಾರ್ಥವಾಗಿದೆ. ಇದರಿಂದಾಗಿ ಹೆಚ್ಚಾಗಿ ನೆಲಗಡಲೆಯನ್ನು ಹಲವಾರು ಖಾದ್ಯಗಳಲ್ಲಿ ಬಳಸುತ್ತಾರೆ.
Nutritional Information
 • People - 2
 • ಕ್ಯಾಲೋರಿ - 59ಕ್ಯಾ
 • ಕೊಬ್ಬು - 5ಗ್ರಾ
 • ಪ್ರೋಟೀನ್ - 3ಗ್ರಾ
 • ಕಾರ್ಬೋಹೈಡ್ರೇಟ್ - 2ಗ್ರಾ
 • ಫೈಬರ್ - 1ಗ್ರಾ
[ 5 of 5 - 26 Users]
Read more about: recipe ರೆಸಿಪಿ
Story first published: Tuesday, February 23, 2021, 11:30 [IST]
X