Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಒಮ್ಮೆ ಟ್ರೈ ಮಾಡಿ ಈ ನೆಲಕಡಲೆ ಚಟ್ನಿ..
ಬಡವರ ಬಾದಾಮಿ ಎಂದು ಕರೆಯಲ್ಪಡುವಂತಹ ನೆಲಗಡಲೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ತುಂಬಾ ಆರೋಗ್ಯಕರ ಆಹಾರ ಪದಾರ್ಥವಾಗಿದೆ. ಇದರಿಂದಾಗಿ ಹೆಚ್ಚಾಗಿ ನೆಲಗಡಲೆಯನ್ನು ಹಲವಾರು ಖಾದ್ಯಗಳಲ್ಲಿ ಬಳಸುತ್ತಾರೆ. ನೆಲಗಡಲೆ ಚಟ್ನಿಯು ಉತ್ತರಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರ ಖಾದ್ಯವು ಜೋಳದ ರೊಟ್ಟಿ, ಚಪಾತಿ ಅಥವಾ ರಾಗಿ ರೊಟ್ಟಿ ಜೊತೆಗೆ ಸವಿಯಬಹುದು. ನೆಲಗಡಲೆ ಚಟ್ನಿಯನ್ನು ತಯಾರಿಸಿಕೊಳ್ಳುವುದು ತುಂಬಾ ಸುಲಭ ಮತ್ತು ಇದನ್ನು ಕೆಡದಂತೆ ಇಡಬಹುದು ಕೂಡ. ನೆಲಗಡಲೆ ಚಟ್ನಿಯನ್ನು ಉಪವಾಸದ ಸಂದರ್ಭದಲ್ಲೂ ಹೆಚ್ಚಿನವರು ಬಳಸಿಕೊಳ್ಳುತ್ತಾರೆ ಇದು ತುಂಬಾ ರುಚಿಕರ ಹಾಗೂ ಪೋಷಕಾಂಶಯುಕ್ತವಾಗಿರುವ ಕಾರಣದಿಂದ ಉಪವಾಸ ಮಾಡುವವರಿಗೆ ತುಂಬಾ ಲಾಭಕಾರಿ. ಹಾಗಾದರೆ ಬನ್ನಿ ಈ ನೆಲಗಡಲೆ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ...

Recipe By: Shreeraksha
Recipe Type: Vegetarian
Serves: 2
-
ಪ್ರಮುಖ ಸಾಮಗ್ರಿಗಳು:
3/4 ಕಪ್ ಹಸಿ ನೆಲಗಡಲೆ
1/2 ಕಪ್ ಕೊತ್ತಂಬರಿ ಸೊಪ್ಪು
ಅಗತ್ಯಕ್ಕೆ ತಕ್ಕಷ್ಟು ಉಪ್ಪು
2 ಚಮಚ ನಿಂಬೆ ರಸ
1/2 ಕಪ್ ನೀರು
2 - ಹಸಿಮೆಣಸಿನಕಾಯಿ
-
ತಯಾರಿಸುವ ವಿಧಾನ:
-ನೆಲಗಡಲೆ, ಕೊತ್ತಂಬರಿ, ಕತ್ತರಿಸಿದ ಹಸಿ ಮೆಣಸು, ಉಪ್ಪು, ಸ್ವಲ್ಪ ನೀರನ್ನು ಮಿಕ್ಸಿಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
-ರುಬ್ಬಿಕೊಂಡಿರುವ ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ನಂತರ ಇದಕ್ಕೆ ಅರ್ಧ ಚಮಚ ಲಿಂಬೆ ರಸವನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ನವರಾತ್ರಿಗೆ ಮಾಡುವಂತಹ ವಿಶೇಷ ರೀತಿಯ ತಿನಿಸುಗಳ ಜತೆಗೆ ನೀವು ಇದನ್ನು ಬಳಸಿ ಕೊಳ್ಳಬಹುದು.
- ಬಡವರ ಬಾದಾಮಿ ಎಂದು ಕರೆಯಲ್ಪಡುವಂತಹ ನೆಲಗಡಲೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ತುಂಬಾ ಆರೋಗ್ಯಕರ ಆಹಾರ ಪದಾರ್ಥವಾಗಿದೆ. ಇದರಿಂದಾಗಿ ಹೆಚ್ಚಾಗಿ ನೆಲಗಡಲೆಯನ್ನು ಹಲವಾರು ಖಾದ್ಯಗಳಲ್ಲಿ ಬಳಸುತ್ತಾರೆ.
- People - 2
- ಕ್ಯಾಲೋರಿ - 59ಕ್ಯಾ
- ಕೊಬ್ಬು - 5ಗ್ರಾ
- ಪ್ರೋಟೀನ್ - 3ಗ್ರಾ
- ಕಾರ್ಬೋಹೈಡ್ರೇಟ್ - 2ಗ್ರಾ
- ಫೈಬರ್ - 1ಗ್ರಾ



Click it and Unblock the Notifications