Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತಣ್ಣಗಾದ ಮೇಲೂ ಪರೋಟ ಮೃದುವಾಗಿರಲು ಇಲ್ಲಿವೆ ಸಿಂಪಲ್ ಟಿಪ್ಸಗಳು
ಸ್ವಲ್ಪ ತಿಂದರೆ ಸಾಕು, ಜಾಸ್ತಿ ಹೊತ್ತು ಹಸಿವು ನೀಗಿಸುವ ತಿಂಡಿ ಅಂದ್ರೆ ಅದು ಪರೋಟ. ಬೆಳಗಿನ ಉಪಹಾರದಲ್ಲಿ ಬಿಸಿಬಿಸಿ ಮೃದುವಾದ, ಎರಡೆರಡು ಲೇಯರ್ ನಿಂದ ಕೂಡಿರುವ ಪರೋಟ ಇದ್ದುಬಿಟ್ರೆ ಕೆಲವರಿಗೆ ಹಸಿವು ಜೋರಾಗಿ ಆಗಿಬಿಡುತ್ತೆ. ಆದ್ರೆ ಅದು ತಣ್ಣಗಾಗಿ ಗಟ್ಟಿಯಾದ್ರೆ ಯಾರೂ ಅದರ ಹತ್ತಿರನೂ ಸುಳಿಯಲ್ಲ. ಹಾಗಾದರೆ ಪರೋಟ ತಣ್ಣಗಾದ ಮೇಲೆಯೂ ಮೃದುವಾಗಿರಬೇಕಾದ್ರೆ ಏನ್ ಮಾಡ್ಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮೃದುವಾದ ಪರೋಟ ಮಾಡಲು ಸುಲಭವಾದ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಪರೋಟ ಹಿಟ್ಟನ್ನು ಬೆರೆಸುವಾಗ ತುಪ್ಪ ಸೇರಿಸಿ:
ಪರೋಟಾಗೆ ಹಿಟ್ಟನ್ನು ಬೆರೆಸುವಾಗ ತುಪ್ಪವನ್ನು ಬಳಸಿ. ನೀವು ಒಂದು ಕಪ್ ಹಿಟ್ಟನ್ನು ತೆಗೆದುಕೊಂಡಿದ್ದರೆ, ಅದಕ್ಕೆ ಸ್ವಲ್ಪ ಕರಗಿದ ತುಪ್ಪವನ್ನು ಸೇರಿಸಬೇಕು. ನೆನಪಿನಲ್ಲಿಡಿ, ತುಪ್ಪ ತುಂಬಾ ಬಿಸಿಯಾಗಿರಬಾರದು. ಈಗ 1/4 ಚಮಚ ಉಪ್ಪು ಸೇರಿಸಿ, ನೀರು ಹಾಕಿ ಹಿಟ್ಟನ್ನು ಬೆರೆಸಿ. ನೀರು ಹಾಕುವಾಗ ಎಚ್ಚರಿಕೆಯಿಂದಿರಿ, ನೀರು ಹೆಚ್ಚಾಯಿತು ಎಂದು ಮತ್ತೆ ಮತ್ತೆ ಹಿಟ್ಟು ಬರೆಸಲು ಹೋಗಬಾರದು. ಹಿಟ್ಟನ್ನು ಬೆರೆಸಿದ ನಂತರ, ಎರಡು ಮೂರು ಚಮಚ ನೀರನ್ನು ಚಿಮುಕಿಸಿ, ತಟ್ಟೆಯಿಂದ ಮುಚ್ಚಿ. ಸ್ವಲ್ಪ ಸಮಯದ ನಂತರ ಮತ್ತೆ ಹಿಟ್ಟನ್ನು ಎರಡು ಮೂರು ನಿಮಿಷಗಳ ಕಾಲ ನಾದಿಕೊಂಡು, ಪರೋಟ ತಯಾರಿಸಿ.

ಮೊಸರು ಸಹ ಬಳಸಬಹುದು:
ಉಪ್ಪು ಮತ್ತು ತುಪ್ಪದ ಜೊತೆಗೆ ನೀವು ಹಿಟ್ಟು ತಯಾರಿಸಲು ಮೊಸರು ಬಳಸಲು ಸಹ ಆಯ್ಕೆ ಮಾಡಬಹುದು. ಇದಕ್ಕಾಗಿ ಯಾವಾಗಲೂ ತಾಜಾ ಮೊಸರು ಬಳಸಿ. ಹಿಟ್ಟನ್ನು ಬೆರೆಸುವಾಗ, ಅದಕ್ಕೆ ಮೊಸರು ಸೇರಿಸಿ. ಹಿಟ್ಟು ಸರಿಯಾಗಿ ಮಿಕ್ಸ್ ಆಗದಿದ್ದರೆ ಅದಕ್ಕೆ ನೀರನ್ನು ಬಳಸಿ, ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಚ್ಚಿ ಮತ್ತು ಕೊನೆಯದಾಗಿ ನೀರನ್ನು ಬಳಸಬೇಡಿ. 5 ರಿಂದ 6 ನಿಮಿಷಗಳ ಕಾಲ ಬಿಡಿ. ನಂತರ ಹಿಟ್ಟು ಲಟ್ಟಿಸುವಾಗ ನಿಮ್ಮ ಕೈಗೆ ಸ್ವಲ್ಪ ನೀರು ತಾಗಿಸಿಕೊಂಡು, ಪರೋಟ ತಯಾರಿಸಿ.

ಅಡುಗೆ ಸೋಡಾ ಸಹ ಉಪಕಾರಿ:
ಮೊಸರಿನಂತೆ ನೀವು ಅಡುಗೆ ಸೋಡಾ ಬಳಸಿ ಸಹ ಮೃದುವಾದ ಪರೋಟ ತಯಾರಿಸಬಹುದು. ಇದಕ್ಕಾಗಿ ಎರಡು ಕಪ್ ಹಿಟ್ಟಿಗೆ 1/4 ಚಮಚ ಅಡಿಗೆ ಸೋಡಾ ಮಿಶ್ರಣ ಮಾಡಿ. ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ, ನೀರಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 6 ರಿಂದ 7 ನಿಮಿಷಗಳ ಕಾಲ ಮುಚ್ಚಿ. ತದನಂತರ ಸ್ವಲ್ಪ ನೀರನ್ನು ಹಾಕಿ ಮತ್ತೆ ಬೆರೆಸಿಕೊಳ್ಳಿ. . ನೀವು ಇದನ್ನು ಮಾಡಿದರೆ, ಹಿಟ್ಟು ಸಂಪೂರ್ಣವಾಗಿ ಪರಿಪೂರ್ಣವಾಗಿರುತ್ತದೆ ಮತ್ತು ಪರೋಟ ಸಹ ಮೃದುವಾಗುತ್ತದೆ.



Click it and Unblock the Notifications
