Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಉಳಿದ ಅನ್ನದಿಂದ 5 ನಿಮಿಷದಲ್ಲಿ ಪಾನ್‌ಕೇಕ್ ರೆಡಿ: ಮಾಡೋದು ಎಷ್ಟು ಸುಲಭ ನೋಡಿ..!
ಎಲ್ಲರ ಮನೆಯಲ್ಲೂ ಅನ್ನ ಉಳಿಯುವುದು ಸಾಮಾನ್ಯ. ಹೆಚ್ಚುವರಿಯಾಗಿ ನಾವು ಅನ್ನವನ್ನು ಮಾಡಿರುತ್ತೇವೆ. ಆದರೆ ಆ ಅನ್ನ ಉಳಿದುಬಿಡುತ್ತದೆ. ಹೀಗೆ ಉಳಿದ ಅನ್ನವನ್ನು ಹಲವರು ಎಸೆಯುತ್ತಾರೆ. ಇಲ್ಲವೆ ಹಸುಗಳಿಗೆ ಇಡುತ್ತಾರೆ. ನಗರದಲ್ಲಿ ಹೆಚ್ಚಿನವರು ಅನ್ನವನ್ನು ಎಸೆದುಬಿಡುತ್ತಾರೆ. ಇಲ್ಲದೆ ಫ್ರಿಡ್ಜ್‌ನಲ್ಲಿಟ್ಟು ಮಾರನೆ ದಿನ ಸೇವಿಸುತ್ತಾರೆ.
ಆದರೆ ಹಲವರ ಮನೆಯಲ್ಲಿ ಅನ್ನ ಉಳಿದರೆ ಅದು ವ್ಯರ್ಥವೆಂದೇ ಅರ್ಥ. ಒಮ್ಮೆ ಅನ್ನ ಉಳಿದು ಬಿಟ್ಟರೆ ಅದನ್ನು ಬೇರೆ ತಿಂಡಿ ಮಾಡಲು ಬಳಸುವುದು ಕಡಿಮೆ. ಆದರೆ ಉಳಿದ ಅನ್ನದಲ್ಲಿ ಎಷ್ಟೆಲ್ಲಾ ರೀತಿಯ ತಿನಿಸುಗಳನ್ನು ಮಾಡಬಹುದು ಎಂದು ತಿಳಿದರೆ ನೀವು ಅಚ್ಚರಿ ಪಡುತ್ತೀರ. ಉಳಿದ ಅನ್ನದಲ್ಲಿ ಹಲವು ರೀತಿಯ ತಿಂಡಿಗಳ ಮಾಡಬಹುದು. ಹಾಗಾದರೆ ನಾವಿಂದು ಉಳಿದ ಅನ್ನದಲ್ಲಿ ಮಾಡಬಹುದಾದ ಉಪಹಾರ ಯಾವುದು ನೋಡೋಣ.
ಉಳಿದ ಅನ್ನದಲ್ಲಿ ನಾವು ಸಂಡಿಗೆಯನ್ನು ಬಹಳ ಸುಲಭವಾಗಿ ಮಾಡಬಹುದು. ಕೆಲವೇ ನಿಮಿಷದಲ್ಲಿ ಕೆಲವೇ ವಸ್ತುಗಳ ಬಳಸಿ ಸಂಡಿಗೆ ಮಾಡಬಹುದು. ನಾವು ಈ ಮೊದಲು ಉಳಿದ ಅನ್ನದಲ್ಲಿ ಸಂಡಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದೇವೆ. ಆ ಕುರಿತ ಮಾಹಿತಿಗಾಗಿ ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಯಬಹುದು.
ಮನೆಯಲ್ಲಿ ಅನ್ನ ಉಳಿದರೆ ಚಿಂತಿಸಬೇಡಿ..! ಸುಲಭವಾಗಿ ಸಂಡಿಗೆ ಮಾಡಿ..!
ಆದರೆ ನಾವಿಂದು ಉಳಿದ ಅನ್ನದಿಂದ ಪಾನ್ ಕೇಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಪಾನ್ ಕೇಕ್ ಮಾಡಲು ಉಳಿದ ಅನ್ನದ ಅವಶ್ಯಕತೆ ಇದೆ. ಈ ಪಾನ್ ಕೇಕ್ ಅನ್ನು ನೀವು ಬೆಳಗ್ಗೆಯ ತಿಂಡಿಯಾಗಿ ಸವಿಯಬಹುದು. ಅನ್ನದಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಉತ್ತಮವೂ ಹೌದು. ಇದನ್ನು ಕಡಿಮೆ ಎಣ್ಣೆ ಬಳಸಿಯೂ ಮಾಡಬಹುದಾಗಿದ್ದು, ಬಹಳ ಸುಲಭವಾಗಿ ಮಾಡಬಹುದಾದ ತಿಂಡಿಯಾಗಿದೆ.
ಹಾಗಾದರೆ ಪಾನ್ ಕೇಕ್ ತಿಂಡಿ ಮಾಡುವುದು ಹೇಗೆ?, ಪಾನ್ ಕೇಕ್ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಪಾಕ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪಾನ್ ಕೇಕ್ ಮಾಡಲು ಬೇಕಾಗುವ ಪದಾರ್ಥಗಳು
- ಉಳಿದ ಅನ್ನ - 1 ಕಪ್
- ಗೋಧಿ ಹಿಟ್ಟು-1 ಕಪ್
- ಸಕ್ಕರೆ- ಒಂದು ಚಮಚ
- ಬೇಕಿಂಗ್ ಪೌಡರ್- 1 ಚಮಚ
- ಅಡಿಗೆ ಸೋಡಾ- 1/2 ಟೀಸ್ಪೂನ್
- ಮಜ್ಜಿಗೆ/ಹಾಲು-1 ಕಪ್
- ಮೊಟ್ಟೆ - 1
- ಬೆನ್ಣೆ-2 ಟೀಸ್ಪೂನ್
- ವೆನಿಲ್ಲಾ ರಸ-1 ಟೀಸ್ಪೂನ್ (ಇದ್ದರೆ ಮಾತ್ರ)
- ಉಪ್ಪು ರುಚಿಗೆ ತಕ್ಕಷ್ಟು
ಮನೆಯಲ್ಲಿ ಪಾನ್ ಕೇಕ್ ಮಾಡುವುದು ಹೇಗೆ?
ದೊಡ್ಡ ಪಾತ್ರಯಲ್ಲಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಅಡಿಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಬೇಕು. ನಂತರ ಪ್ರತ್ಯೇಕ ಬಟ್ಟಲಿನಲ್ಲಿ, ಮಜ್ಜಿಗೆ/ಹಾಲು, ಮೊಟ್ಟೆ, ಕರಗಿದ ಬೆಣ್ಣೆ (ಅಥವಾ ಎಣ್ಣೆ) ಮತ್ತು ವೆನಿಲ್ಲಾ ರಸವನ್ನು (ಬಳಸುತ್ತಿದ್ದರೆ) ಒಟ್ಟಿಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಆಗುವವರೆಗೂ ಕಲಸಿ.
ಉಳಿದ ಅನ್ನವನ್ನು ಪ್ಯಾನ್‌ಕೇಕ್ ಬ್ಯಾಟರ್‌ನಲ್ಲಿ ಹಾಕಿ. ಈಗ ನಾನ್-ಸ್ಟಿಕ್ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಬೆಣ್ಣೆ ಅಥವಾ ಎಣ್ಣೆ ಹಚ್ಚಿ ಪ್ಯಾನ್ ಬಿಸಿಯಾದ ಬಳಿಕ ಪ್ಯಾನ್ ಕೇಕ್ ಹಿಟ್ಟು ಅದಕ್ಕೆ ಹಾಕಿ ಎರಡೂ ಬದಿ 2ರಿಂದ 3 ನಿಮಿಷಗಳ ಕಾಲ ಬೇಯಿಸಿ. ಅದು ಗೋಲ್ಡನ್ ಬ್ರೌನ್ ಆಗುವವರೆಗೂ ಚೆನ್ನಾಗಿ ಬೇಯಿಸಿ. ಇಷ್ಟು ಮಾಡಿದರೆ ಉಳಿದ ಅನ್ನದಲ್ಲಿ ಪಾನ್ ಕೇಕ್ ರೆಡಿಯಾಗುತ್ತದೆ. ಇದನ್ನು ಬೆಣ್ಣೆ, ತುಪ್ಪ, ಚಟ್ನಿ, ಜೇನು ತುಪ್ಪ ಹೀಗೆ ಹತ್ತಾರು ಪದಾರ್ಥಗಳೊಂದಿಗೆ ಸೇರಿಸಿ ಸವಿಯಬಹುದು.



Click it and Unblock the Notifications