Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಮನೆಯಲ್ಲಿ ಅನ್ನ ಉಳಿದರೆ ಚಿಂತಿಸಬೇಡಿ..! ಸುಲಭವಾಗಿ ಸಂಡಿಗೆ ಮಾಡಿ..!
ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಅನ್ನ ಹೆಚ್ಚುವರಿಯಾಗಿ ಉಳಿದೆ ಉಳಿಯುತ್ತೆ. ಅದನ್ನು ನಾವು ಚಿತ್ರಾನ್ನ ಮಾಡುತ್ತೇವೆ ಇಲ್ಲದೆ ಪೊಳಿಯೋಗರೆ ಮಾಡುತ್ತೇವೆ. ಒಂದು ವೇಳೆ ಇನ್ನಷ್ಟು ಹೆಚ್ಚು ಉಳಿದರೆ ಪ್ರಾಣಿಗಳಿಗೋ ನೀಡುತ್ತೇವೆ. ಆದರೆ ಕೆಲವು ಬಾರಿ ಎಷ್ಟು ಅನ್ನ ಹಾಳು ಮಾಡುತ್ತೇವೆ ಎಂದು ನಿಮಗೆ ಗೊತ್ತಿದೆ.
ಹಾಗಾದರೆ ಮನೆಯಲ್ಲಿ ಅನ್ನ ಉಳಿದರೆ ಏನು ಮಾಡಬೇಕು ಎಂಬುದನ್ನು ನಾವಿಂದು ಹೇಳುತ್ತೇವೆ ಕೇಳಿ. ಅನ್ನ ಹೆಚ್ಚುವರಿಯಾಗಿ ಉಳಿದರೆ ಅದನ್ನು ಎಸೆಯಬೇಡಿ. ಇಲ್ಲ ಆ ಕುರಿತು ಚಿಂತೆ ಮಾಡಬೇಡಿ. ಉಳಿದ ಅನ್ನದಿಂದ ನಾವಿಂದು ಸಂಡಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇದರಿಂದ ಮನೆಯಲ್ಲಿ ಅನ್ನ ಉಳಿದರೆ ಅದನ್ನು ಎಸೆಯದೆ ಬಳಸಿಕೊಳ್ಳೋಣ.
ಅಗತ್ಯವಿರುವ ವಸ್ತುಗಳು
- ಅಕ್ಕಿ/ಹಳೆಯ ಅನ್ನ
- ಉಪ್ಪು
- ಜೀರಿಗೆ
- ಕೆಂಪು ಮೆಣಸಿನ ಪುಡಿ
- ಎಣ್ಣೆ

ಪಾಕವಿಧಾನ
ನೆನೆಸಿದ ಮೊದಲ ದಿನದ ನಂತರ, ಅಕ್ಕಿಯನ್ನು ಚೆನ್ನಾಗಿ ತೊಳೆದು ಮತ್ತು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ನಂತರ ಅದಕ್ಕು ಉಳಿದ ಅನ್ನವನ್ನು ಹಾಗೂ ಬೇಕಾದಷ್ಟು ಉಪ್ಪು ಮತ್ತು ಜೀರಿಗೆ ಹಾಕಿ.
ಮುಂದೆ ನಿಮ್ಮ ಖಾರಕ್ಕೆ ತಕ್ಕಂತೆ ಸ್ವಲ್ಪ ಪ್ರಮಾಣದ ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ಮಿಲ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮತ್ತು ಸ್ಲೈಸ್ ತೆಗೆದುಕೊಳ್ಳಿ.
ಮುಂದೆ ಬಾಣಲೆಯನ್ನು ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಮೇಲೆ ಈ ಸಂಡಿಗೆಯನ್ನು ಹಾಕಿ ಕರಿದು ತಿಂದರೆ ಕುರುಕಲು, ರುಚಿಕರವಾಗಿರುತ್ತದೆ. ಅಲ್ಲದೆ ಹಲವು ದಿನಗಳವರೆಗೂ ಇದನ್ನು ಇಟ್ಟುಕೊಳ್ಳಬಹುದಾಗಿದೆ. ಮಾಡಲು ಸಹ ಸುಲಭವಾಗಿದ್ದು ಉಳಿದ ಅನ್ನ ಎಂದಿಗೂ ವ್ಯರ್ಥವಾಗುವುದಿಲ್ಲ.
ಅಕ್ಕಿ ಹಿಟ್ಟು, ಸಾಬುದಾನಿ, ಬೂದು ಕುಂಬಳಕಾಯಿ, ಬಾಳೆಕಾಯಿ, ಆಲೂಗಡ್ಡೆ, ಗೋಧಿ ಸೇರಿದಂತೆ ವಿವಿಧ ಬಗೆಯ ಸಂಡಿಗೆಗಳನ್ನು ಮಾಡುಲಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಈ ರೀತಿ ಸಂಡಿಗೆಗಳ ಮಾಡುತ್ತಾರೆ. ವರ್ಷ ಪೂರ್ತಿ ಬಳಕೆಗೆ ಬರುವ ಈ ತಿಂಡಿಯನ್ನು ಬಹಳ ಸುಲಭವಾಗಿ ಮಾಡಬಹುದಾಗಿದೆ. ಅಲ್ಲದೆ ಊಟದ ಸಮಯದಲ್ಲಿ ಇದು ತುಂಬಾ ರುಚಿ ನೀಡಲಿದೆ.
ಇದರಲ್ಲಿ ಸಬ್ಬಕ್ಕಿಯಲ್ಲಿ ಮಾಡುವ ಸಂಡಿಗೆ ಹೆಚ್ಚು ಪ್ರಸಿದ್ಧಿಯಾಗಿದೆ. ಹಾಗಾದರೆ ಸಬ್ಬಕ್ಕಿ ಸಂಡಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು
- ಸಬ್ಬಕ್ಕಿ- 1 ಕಪ್
- ಹಸಿ ಮೆಣಸಿನ ಕಾಯಿ ಪೇಸ್ಟ್ - 1 ಚಮಚ
- ಜೀರಿಗೆ - 2 ಚಮಚ
- ನಿಂಬೆ ಹಣ್ಣಿನ ರಸ - 1 ಚಂಚ
- ಇಂಗು- ಚಿಟಿಕೆಯಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಒಲೆಯ
ಮೇಲೆ ಬಾಣಲೆ ಇಟ್ಟು, ಅದಕ್ಕೆ ಸಬ್ಬಕ್ಕಿ, ನಾಲ್ಕು ಬಟ್ಟಲು ನೀರು, ಹಸಿ ಮೆಣಸಿನ
ಕಾಯಿ ಪೇಸ್ಟ್, ಉಪ್ಪು ಹಾಕಿ 10 ನಿಮಿಷ ಕುದಿಸಬೇಕು. ಬಳಿಕ ಅದಕ್ಕೆ ಇಂಗು,
ಜೀರಿಗೆ, ನಿಂಬೆ ಹಣ್ಣಿನ ರಸವನ್ನು ಹಾಕಿ 10 ನಿಮಿಷ ತಣ್ಣಗಾಗಲು ಬಿಡಬೇಕು.
ಈ ಮಿಶ್ರಣ ಗಟ್ಟಿಗಾದ ಬಳಿಕ ಒಂದು ಪ್ಲೇಟ್ ಮೇಲೆ ಕಾಟನ್ ಬಟ್ಟೆಯನ್ನು ಹಾಕಿ, ಒಂದೊಂದೇ ಚಮಚದಷ್ಟು ಹಿಟ್ಟನ್ನು ಆ ಬಟ್ಟೆಯ ಮೇಲೆ ಹಾಕಬೇಕು. ಬಳಿಕ ಬಿಸಿಲಿನಲ್ಲಿ ಇದು ಚೆನ್ನಾಗಿ ಒಣಗುವವರೆಗೂ ಬಿಡಬೇಕು. ಬಳಿಕ ನಿಮಗೆ ಬೇಕಾದಾಗ ಅದನ್ನು ಎಣ್ಣಗೆ ಹಾಕಿ ಸವಿಯಬಹುದು.



Click it and Unblock the Notifications
