Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬರೇ 30 ನಿಮಿಷಗಳಲ್ಲಿ ಆಲೂಗೆಡ್ಡೆ ಪಲ್ಯ ರೆಡಿ!
ಆಲೂಗಡ್ಡೆ ಬಳಸಿ ಹಲವು ರೀತಿಯ ರುಚಿಕರವಾದ ತಿಂಡಿಗಳನ್ನು ಮಾಡಬಹುದು. ಭಾರತೀಯ ಅಡುಗೆ ಪದ್ಧತಿಯಲ್ಲಿ ಆಲೂಗಡ್ಡೆ ಹೆಚ್ಚಾಗಿ ಬಳಸುವಂತಹ ತರಕಾರಿ. ಇದು ಅಡುಗೆಯ ರುಚಿಯನ್ನೇ ಬದಲಿಸಿಬಿಡುತ್ತದೆ.
ನಿಮ್ಮ ಊಟದ ರುಚಿಯನ್ನು ನಾಲಗೆಯಲ್ಲಿ ಹಿಡಿದಿಡುವಂತೆ ಮಾಡುವ ಹಲವಾರು ಆಲೂಗಡ್ಡೆ ಖಾದ್ಯಗಳಿವೆ. ಡ್ರೈ ಆಲೂ ಸಬ್ಜಿಯಿಂದ ಹಿಡಿದು ಗ್ರೇವಿಯವರೆಗೆ ನೀವು ಹಲವಾರು ಐಟಂಗಳನ್ನು ಪ್ರಯತ್ನಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ವೃತ್ತಿನಿರತರ ಸಂಖ್ಯೆ ಹೆಚ್ಚಿರುವ ಸಮಯದಲ್ಲಿ,
ಸರಳ ಹಾಗೂ ಸುಲಭವಾಗಿ ತಯಾರಿಸುವ ರೆಸಿಪಿಗಳು ಉತ್ತಮವಾಗಿರುತ್ತವೆ. ಬರೇ 30 ನಿಮಿಷಗಳಲ್ಲಿ ತಯಾರಿಸಬಹುದಾದ ಆಲೂಗೆಡ್ಡೆ ಪಲ್ಯವನ್ನು ನಿಮಗಾಗಿ ನಾವಿಂದು ನೀಡುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವೀಕೆಂಡ್ ಸ್ಪೆಷಲ್ ತಂದೂರಿ ಭರ್ವಾನಿ ಆಲೂ ರೆಸಿಪಿ

ಸಾಮಗ್ರಿಗಳು:
1. ಆಲೂಗೆಡ್ಡೆ
2. ಎಣ್ಣೆ
3. ಸಾಸಿವೆ
4. ಜೀರಿಗೆ
5. ಹಸಿಮೆಣಸಿನಕಾಯಿ
6. ಈರುಳ್ಳಿ
7.ಕರಿಬೇವು
8. ಕಡ್ಲೆಬೇಳೆ
9. ಉದ್ದಿನಬೇಳೆ
10. ಅರಿಶಿನ
11. ಉಪ್ಪು
12. ಕಾಯಿತುರಿ
13. ಕೊತ್ತುಂಬರಿಸೊಪ್ಪು
14. ನಿಂಬೆರಸ
ಮಾಡುವ ವಿಧಾನ:
1. ಮೊದಲಿಗೆ ಆಲೂಗೆಡ್ಡೆಯನ್ನು ಸಿಪ್ಪೆ ಸಮೇತ ಬೇಯಿಸಿಕೊಳ್ಳಿ,
2. ನಂತರ ತಣ್ಣಗಾದ ಮೇಲೆ ಸಿಪ್ಪೆ ತೆಗೆದು,ಪುಡಿ ಅಂದರೆ ಅದನ್ನು ಕೈನಲ್ಲಿಯೇ ಅದುಮಿದರೆ ಸಾಕು ಪುಡಿಯಾಗುತ್ತದೆ.
3. ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಸಾಸಿವೆ,ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಹಾಕಿ, ಬೆರೆಸಿ.
4. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ.
5. ಒಂದೆರಡು ನಿಮಿಷದ ನಂತರ ಉಪ್ಪು ಮತ್ತು ಅರಿಶಿನ ಹಾಕಿ, ಪುಡಿ ಮಾಡಿದ ಆಲೂಗೆಡ್ಡೆಯನ್ನು ಹಾಕಿ, ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಅದನ್ನು ಬೆರೆಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ದೋಸೆಗೆ, ಚಪಾತಿಗೆ ಮತ್ತು ಪೂರಿಗೆ ಜೊತೆಯಾಗಿ ತಿನ್ನಲು ಉಪಯೋಗಿಸಬಹುದು.



Click it and Unblock the Notifications
