Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಸಾಲೆ ತುಂಬಿದ ಕ್ಯಾಪ್ಸಿಕಂ ರೆಸಿಪಿ

ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು:
* 1 ದೊಡ್ಡ ಬೇಯಿಸಿದ ಆಲೂಗೆಡ್ಡೆ (ಸಿಪ್ಪೆ ಸುಲಿದಿರಬೇಕು)
* 2 ಈರುಳ್ಳಿ (ಕತ್ತರಿಸಿದ್ದು)
* 2-3 ಹಸಿ ಮೆಣಸಿನ ಕಾಯಿ ಪೇಸ್ಟ್
* 2-3 ಎಸಳು ಬೆಳ್ಳುಳ್ಳಿ
* 1 ಚಮಚ ಮೆಂತೆ ಕಾಳು
* 1/2 ಚಮಚ ಕೊತ್ತಂಬರಿ ಪುಡಿ
* 1/2 ಚಮಚ ಅರಿಶಿಣ ಪುಡಿ
* ನಿಂಬೆ ರಸ
* 1/2 ಚಮಚ ಸಾಸಿವೆ
* 1/2 ಚಮಚ ಜೀರಿಗೆ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ಮಸಾಲೆ ತಯಾರಿಸುವ ವಿಧಾನ:
1. ಆಲೂಗೆಡ್ಡೆಯ ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಹಿಸುಕಬೇಕು.
2. ಬಾಣಲೆಯನ್ನು ಬಿಸಿ ಮಾಡಿ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಬೆಳ್ಳುಳ್ಳಿ ಎಸಳು ಮತ್ತು ಈರು, ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಈಗ ಅರಿಶಿಣ ಪುಡಿ, ಉಪ್ಪು, ಮೆಂತೆ (ಇದನ್ನು ಸ್ವಲ್ಪ ಪುಡಿ ಮಾಡಿದರೆ ಒಳ್ಳೆಯದು), ಕೊತ್ತಂಬರಿ ಪುಡಿ ಹಾಕಿ ಮಿಶ್ರ ಮಾಡಿ ಅದಕ್ಕೆ ಹಿಸುಕಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
ಸೂಚನೆ : ತಯಾರಾದ ಈ ಮಸಾಲೆಯನ್ನು ಬಿಸಿ ಇರುವಾಗಲೇ ತುಂಬಬೇಕು.
ಮಸಾಲೆ ತುಂಬಿದ ಕ್ಯಾಪ್ಸಿಕಂಗೆ ಬೇಕಾಗುವ ಸಾಮಾಗ್ರಿಗಳು:
* 3 ದೊಡ್ಡ ದುಂಡು ಮೆಣಸಿನ ಕಾಯಿ (ಕ್ಯಾಪ್ಸಿಕಂ)
* ಎಣ್ಣೆ
* ರುಚಿ
* ಮಸಾಲೆ
ತಯಾರಿಸುವ ವಿಧಾನ:
1. ಅವನ್ ಅನ್ನು ಮುಂಚಿತವಾಗಯೇ 400 Fಗೆ ಬಿಸಿ ಮಾಡಬೇಕು. ನಂತರ ಬೇಯಿಸಬೇಕದ ಶೀಟ್ ಗೆ ಎಣ್ಣೆ ಸವರಬೇಕು.
2. ದುಂಡು ಮೆಣಸಿನ ಕಾಯಿಯನ್ನು ಚೆನ್ನಾಗಿ ತೊಳೆದು ಅದರ ನೀರನ್ನು ಟಿಶ್ಯೂ ಪೇಪರ್ ನಿಂದ ಒರೆಸಿ ತೆಗೆಯಬೇಕು.
3. ನಂತರ ದುಂಡು ಮೆಣಸಿನ ಕಾಯಿಯನ್ನು ಸಮವಾಗಿ ಎರಡು ತುಂಡು ಮಾಡಬೇಕು. ಅದರ ಒಳಗಿರುವ ಬೀಜವನ್ನು ಬಿಸಾಡಬೇಕು.
4. ನಂತರ ಕ್ಯಾಪ್ಸಿಕಂನ ಒಳಗೆ ಮತ್ತು ಹೊರಗೆ ಎಣ್ಣೆ ಸವರಿ, ಸ್ವಲ್ಪ ಉಪ್ಪು ಚಿಮುಕಿಸಬೇಕು. ನಂತರ ಮಸಾಲೆಯನ್ನು ಇದರಲ್ಲಿ ತುಂಬಬೇಕು. ನಂತರ ಇದನ್ನು ಬೇಕಿಂಗ್ ಶೀಟ್ ನಲ್ಲಿಟ್ಟು ಮುಂಚಿತವಾಗಿ ಬಿಸಿ ಮಾಡಿದ ಅವನ್ ನಲ್ಲಿ 35-40 ನಿಮಿಷ ಇಟ್ಟು ಬೇಯಿಸಬೇಕು. ಕ್ಯಾಪ್ಸಿಕಂ ಬೆಂದ ರೀತಿ ಕಂಡಾಗ ಹೊರ ತೆಗೆಯಬೇಕು.



Click it and Unblock the Notifications
