Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ತರಕಾರಿ ಬಳಸಿ ಮಾಡುವ ಬಂಗಾಳಿ ಖಾದ್ಯ- ಶುಕ್ತೊ
ಇಲ್ಲಿ ನಾವು ಶುಕ್ತೊ ಅನ್ನುವ ಬೆಂಗಾಳಿ ಶೈಲಿಯ ರೆಸಿಪಿ ನೀಡಿದ್ದೇವೆ. 4-5 ಬಗೆಯ ತರಕಾರಿ ಬಳಸಿ, ಅದಕ್ಕೆ ಪಂಚ ಫೋರನ್ ಎಂಬ ಮಸಾಲೆ ಸೇರಿಸಿ ತಯಾರಿಸುವ ಈ ಪಲ್ಯದ ರುಚಿ ಖಂಡಿತ ನಿಮ್ಮ ಬಾಯಿಗೂ ತುಂಬಾ ರುಚಿ ಅನಿಸುವುದು.
ಘಮ್ಮೆನ್ನುವ ಸುವಾಸನೆಯಿಂದ ಕೂಡಿರುವ ಈ ರುಚಿಕರವಾದ ಅಡುಗೆಯನ್ನು ಮಾಡುವ ವಿಧಾನ ಸುಲಭವಾಗಿದ್ದು, ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಹಾಗಲಕಾಯಿ 2
ಆಲೂಗಡ್ಡೆ 2
ಬದನೆಕಾಯಿ1
ಸಾರು ಬಾಳೆ 1
ಬಟಾಣಿ ಅರ್ಧ ಕಪ್(ಬೇಯಿಸಿದ್ದು)
ಟೊಮೆಟೊ 1
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಪಂಚ ಫೋರನ್(5 ಬಗೆಯ ಮಸಾಲೆ ಸಾಮಾಗ್ರಿಗಳನ್ನು ಹಾಕಿ ಮಾಡುವ ಪುಡಿ)
ಹಸಿ ಮೆಣಸಿನಕಾಯಿ 2
ಗಸೆ ಗಸೆ 2 ಚಮಚ
ಅರಿಶಿಣ ಪುಡಿ 1 ಚಮಚ
ಸಕ್ಕರೆ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ಎಣ್ಣೆ 2 ಚಮಚ
ಪಂಚ ಫೋರನ್ ಗೆ ಬೇಕಾಗುವ ಪದಾರ್ಥಗಳು
ಸಾಸಿವೆ 1 ಚಮಚ
ಜೀರಿಗೆ 1 ಚಮಚ
ಮೆಂತೆ 1 ಚಮಚ
ಜೀರಿಗೆ 1 ಚಮಚ
ಈರುಳ್ಳಿ ಬೀಜ 1 ಚಮಚ
ತಯಾರಿಸುವ ವಿಧಾನ:
* ಗಸೆಗಸೆ, ಹಸಿಮೆಣಸಿನಕಾಯಿ, ಶುಂಠಿ, ಪಂಚ ಫೋರನ್ ಗೆ 2 ಚಮಚ ನೀರು ಹಾಕಿ ನುಣ್ಣನೆ ರುಬ್ಬಿ.
* ನಂತರ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ಮೊದಲಿಗೆ ಆಲೂಗಡ್ಡೆ ಫ್ರೈ ಮಾಡಿ ಅದನ್ನು ತೆಗೆದು ಪಕ್ಕಕ್ಕಿಡಿ, ನಂತರ ಮತ್ತೊಂದು ಚಮಚ ಎಣ್ಣೆ ಹಾಕಿ ಹಾಗಲಕಾಯಿಯನ್ನು ಫ್ರೈ ಮಾಡಿ, ನಂತರ ಬದನೆಕಾಯಿಯನ್ನು ಫ್ರೈ ಮಾಡಿ ಇಡಿ.
* ನಂತರ ಬಾಳೆಕಾಯಿ ಮತ್ತು ಬಟಾಣಿ ಹಾಕಿ 6-8 ನಿಮಿಷ ಫ್ರೈ ಮಾಡಿ, ಈಗ ಗಸೆಗಸೆ ಪೇಸ್ಟ್ ಹಾಕಿ 3-4 ನಿಮಿಷ ಫ್ರೈ ಮಾಡಿ.
* ನಂತರ ಟೊಮೆಟೊ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು, ಸಕ್ಕರೆ ಹಾಕಿ 3-4 ನಿಮಿಷ ಫ್ರೈ ಮಾಡಿ.
* ನಂತರ ಫ್ರೈ ಮಾಡಿಟ್ಟ ಉಳಿದ ಪದಾರ್ಥಗಳನ್ನು ಹಾಕಿ 1 ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಬೇಯಿಸಿ.
* ನಂತರ ಅದರಲ್ಲಿ ಸ್ವಲ್ಪ ನೀರಿನಂಶ ಇದ್ದರೆ ಪಾತ್ರೆಯ ಮುಚ್ಚಳ ತೆಗೆದಿಟ್ಟು ಸ್ವಲ್ಪ ಡ್ರೈಯಾಗುವವರೆಗೆ ಬೇಯಿಸಿ, ಉಪ್ಪು ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ಶುಕ್ತೊ ರೆಡಿ.



Click it and Unblock the Notifications

