Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ರುಚಿಕರವಾದ ಪೊಟೇಟೊ ರಿಚಾಯ್ಡೊ
ಪೊಟೇಟೊವನ್ನು ಬಳಸಿ ಹಲವು ರೀತಿಯ ಅಡುಗೆಯನ್ನು ನಾವು ರುಚಿಕರವಾಗಿ ತಯಾರಿಸಬಹುದು. ಇದರಲ್ಲಿ ಪೊಟೇಟೊ ರಿಚಾಯ್ಡೊ ಕೂಡ ಒಂದು. ಪೊಟೇಟೊವನ್ನು ಬಳಸಿ ಸುಲಭವಾಗಿ ಮಾಡಬಹುದಾದ ಪೊಟೇಟೊ ರಿಚಾಯ್ಡೊವನ್ನು ಮಧ್ಯಾಹ್ನದ ಊಟಕ್ಕೆ ಸೈಡ್ ಡಿಶ್ ಆಗಿಯೂ ಇದನ್ನು ಬಳಸಬಹುದು.

ಬೇಕಾಗುವ ಸಾಮಾಗ್ರಿಗಳು
ಕೆಂಪು ಮೆಣಸು - 5
ಕರಿಮೆಣಸು - 4
ಜೀರಿಗೆ - ಸ್ವಲ್ಪ
ವಿನೇಗರ್ - 1 ಟೇ.ಸ್ಫೂನ್
ಶುಂಠಿ - 1 (ಹೆಚ್ಚಿದ್ದು)
ಏಲಕ್ಕಿ - 5
ದಾಲ್ಚಿನಿ - 4 ಎಸಳು
ಬಾಳೆ ಎಲೆ - 3
ಬಟಾಟೆ (ಪೊಟೇಟೊ) - 4
ಪೊಟೇಟೊ ರಿಚಾಯ್ಡೊ ತಯಾರಿ ವಿಧಾನ:
1.ಕೆಂಪು ಮೆಣಸು, ಜೀರಿಗೆ, ಕರಿಮೆಣಸು ಮತ್ತು ವಿನೇಗರ್ ಅನ್ನು ಒಂದು ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ.
2. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಹೆಚ್ಚಿದ ಶುಂಠಿ, ಏಲಕ್ಕಿ, ದಾಲ್ಚೀನಿಯೊಂದಿಗೆ ಪೇಸ್ಟ್ ಮಾಡಿ.
3.ಈ ಮಿಶ್ರಣಕ್ಕೆ ಅರಿಶಿನ ಪುಡಿಯನ್ನು ಹಾಕಿ ಮಿಶ್ರ ಮಾಡಿ.
4.ಬಟಾಟೆಯನ್ನು ಓವಲ್ ಆಕಾರದಲ್ಲಿ ತುಂಡರಿಸಿ. ಅವುಗಳ ಮೇಲೆ ಉಪ್ಪು ಚಿಮುಕಿಸಿ, ಗ್ರೈಂಡ್ ಮಾಡಿದ ಮಸಾಲವನ್ನು ಹೆಚ್ಚಿದ ಬಟಾಟೆಯ ಮೇಲೆ ಸವರಿ.
5. ಇದನ್ನು ಬಾಳೆ ಎಲೆಯಲ್ಲಿ ಮುಚ್ಚಿ ಕವರ್ ಮಾಡಿ. ತವಾ ಬಿಸಿ ಮಾಡಿ ಈ ಕವರ್ ಮಾಡಿದ ಬಾಳೆ ಎಲೆಯನ್ನು ಅದರ ಮೇಲೆ ಇಡಿ.
6. ಕವರ್ ಮಾಡಿದ ಬಾಳೆ ಎಲೆಯ ಸುತ್ತ ಎಣ್ಣೆ ಸವರಿ. ನಂತರ ಮುಚ್ಚಳ ಮುಚ್ಚಿ ಬೇಯಿಸಿ ಬಟಾಟೆ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
7. ಮಧ್ಯಾಹ್ನದ ಊಟಕ್ಕೆ ನಿಮ್ಮ ಮೆಚ್ಚಿನ ಸೈಡ್ ಡಿಶ್ ಆಗಿ ಪೊಟೇಟೊ ರಿಚಾಯ್ಡೊವನ್ನು ಸವಿಯಲು ಸಿದ್ದ.



Click it and Unblock the Notifications
