Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪನ್ನೀರ್ ಚೆನ್ನಾ ಮಸಾಲ -ಪಂಜಾಬಿ ಶೈಲಿಯ ರೆಸಿಪಿ
ದೊಡ್ಡ ಕಡಲೆಯಿಂದ ಅನೇಕ ಬಗೆಯ ಪದಾರ್ಥಗಳನ್ನು ತಯಾರಿಸಬಹುದು. ಈ ಕಡಲೆಯಿಂದ ಯಾವುದೇ ಪದಾರ್ಥ ತಯಾರಿಸಿದರೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇವತ್ತು ಸಾವು ದೊಡ್ಡ ಕಡಲೆ ಜೊತೆ ಪನ್ನೀರ್ ಹಾಕಿ ತಯಾರಿಸುವ ಗಟ್ಟಿ ಸಾರಿನ ಬಗ್ಗೆ ತಿಳಿಯೋಣ.
ಈ ರೆಸಿಪಿ ಪಂಜಾಬಿ ಶೈಲಿಯ ಅಡುಗೆಯಾಗಿದೆ. ಪನ್ನೀರ್-ಚೆನ್ನಾ ಮಸಾಲ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:
ದೊಡ್ಡ ಕಡಲೆ(ಚೆನ್ನಾ) 3-4 ಕಪ್
ಟೀ ಬ್ಯಾಗ್ 3
ಈರುಳ್ಳಿ 2-3
ಶುಂಠಿ ಪೇಸ್ಟ್ 1 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿ ಮೆಣಸಿನ ಕಾಯಿ 2-3
ಟೊಮೆಟೊ 1
ಖಾರದ ಪುಡಿ ಅರ್ಧ ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಸಕ್ಕರೆ 1 ಚಮಚ
ಪನ್ನೀರ್ 2 ಕಪ್
ಗರಂ ಮಸಾಲ ಒಂದೂವರೆ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
* ದೊಡ್ಡ ಕಡಲೆಯನ್ನು ನೀರಿನಲ್ಲಿ ಒಂದು ರಾತ್ರಿ ನೆನೆ ಹಾಕಿ. ಹೀಗೆ ನೆನೆ ಹಾಕುವಾಗ ಜೊತೆಗೆ ಟೀ ಬ್ಯಾಗ್ ಅನ್ನು ಹಾಕಿಡಿ. ಆಗ ಚೆನ್ನಾ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
* ಮಾರನೆಯ ದಿನ ಬೆಳಗ್ಗೆ ಅದನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಬೇಯಿಸಿ.
* ಈಗ ಸ್ವಲ್ಪ ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಗ್ಯಾಸ್ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
* ಈಗ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ರುಚಿಗೆ ತಕ್ಕ ಉಪ್ಪು, ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು.
* ನಂತರ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಪುಡಿ ಹಾಕಿ ಪನ್ನೀರ್ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಬೇಯಿಸಿದ ಚೆನ್ನಾ (ದೊಡ್ಡ ಕಡಲೆ) ಹಾಕಿ, ಒಂದೂವರೆ ಕಪ್ ನೀರು ಹಾಕಿ ಕುದಿಸಬೇಕು. ನೀರು ಬತ್ತಿ ಸಾರು ಗಟ್ಟಿಯಾದ ನಂತರ ಅರ್ಧ ಚಮಚ ಗರಂ ಮಸಾಲವನ್ನು ಉದುರಿಸಿ, ಸೌಟ್ ನಿಂದ ಈ ಪದಾರ್ಥವನ್ನು ಒಮ್ಮೆ ತಿರುಗಿಸಿದರೆ ಚೆನ್ನಾ-ಪನ್ನೀರ್ ಮಸಾಲ ರೆಡಿ.
ಇದನ್ನು ರೊಟ್ಟಿ, ಚಪಾತಿ, ದೋಸೆ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
