Latest Updates
-
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ!
ಮಧ್ಯಾಹ್ನದೂಟದ ಸವಿಯನ್ನು ಹೆಚ್ಚಿಸುವ ತೊಂಡೆಕಾಯಿ ಕಡ್ಲೆ ಪಲ್ಯ
ನಿಮ್ಮ ಮಧ್ಯಾಹ್ನದೂಟವನ್ನು ಅತಿ ವಿಶೇಷಗೊಳಿಸುವ ಖಾದ್ಯದೊಂದಿಗೆ ನಾವಿಂದು ಬಂದಿರುವೆವು. ಈ ಖಾದ್ಯ ನಿಮ್ಮ ನಾಲಗೆಯ ಹಸಿವನ್ನು ತೀರಿಸಿ ಇನ್ನಷ್ಟು ತಿನ್ನಬೇಕೆಂಬ ಹಂಬಲವನ್ನು ನಿಮ್ಮಲ್ಲಿ ಉಂಟು ಮಾಡುತ್ತದೆ. ಸರಳವಾಗಿ ತಯಾರಿಸಬಹುದಾದ ಈ ತೊಂಡೆಕಾಯಿ ಕಡ್ಲೆ ಪಲ್ಯ ನಿಮ್ಮಲ್ಲಿ ಆರೋಗ್ಯಕಾರಿ ಅಂಶಗಳನ್ನು ಉತ್ಪತ್ತಿ ಮಾಡುತ್ತದೆ.
ತೊಂಡೆಕಾಯಿ ಕಡಲೆ ಪಲ್ಯ ಹೆಚ್ಚಿನ ಪ್ರೋಟೀನ್ ಮತ್ತು ನ್ಯೂಟ್ರೀನ್‌ಗಳನ್ನು ಒಳಗೊಂಡು ನಿಮ್ಮಲ್ಲಿ ಆರೋಗ್ಯಕಾರಿ ಅಂಶಗಳನ್ನು ವರ್ಧಿಸುತ್ತದೆ. ನಿಮ್ಮ ಮನೆಯವರು ಮಕ್ಕಳು ಹೆಚ್ಚು ಇಷ್ಟಪಡುವ ಈ ತೊಂಡೆಕಾಯಿ ಕಡಲೆ ಪಲ್ಯ ಮಧ್ಯಾಹ್ನದೂಟಕ್ಕೆ ಮೃಷ್ಟಾನ್ನಭೋಜನವಿದ್ದಂತೆ. ಹಾಗಿದ್ದರೆ ಕೆಳಗಿನ ಸರಳ ವಿಧಾನಗಳತ್ತ ನೋಟ ಹರಿಸಿ ಅತೀ ಶೀಘ್ರವಾಗಿ ತಯಾರಿಸಬಹುದಾದ ಈ ಪಲ್ಯವನ್ನು ನಿಮ್ಮ ಮಧ್ಯಾಹ್ನದೂಟಕ್ಕೆ ತಯಾರಿಸಿಕೊಳ್ಳಿ.
ರುಚಿಯಾದ ತೊಂಡೆ ಕಾಯಿ, ಗೋಡಂಬಿ ಪಲ್ಯ

ಪ್ರಮಾಣ: 3
*ಸಿದ್ಧತಾ ಸಮಯ: 15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು
ಸಲಕರಣೆಗಳು
*ಕಡಲೆ ಕಾಳು - 1 ಕಪ್
*ತೊಂಡೆಕಾಯಿ - 1/2 ಕೆಜಿ
*ಕೆಂಪು ಮೆಣಸು - 2
*ಹಸಿಮೆಣಸು - 1
*ತೆಂಗಿನ ತುರಿ - 1 ಕಪ್
*ಗರಮ್ ಮಸಾಲೆ - 1/2 ಚಮಚ
*ಅರಶಿನ - 1/2 ಚಮಚ
*ಕೊತ್ತಂಬರಿ - 1/2 ಚಮಚ
*ಜೀರಿಗೆ - 1/2 ಚಮಚ
*ಮೆಂತೆ - ಸ್ವಲ್ಪ
*ಕರಿಬೇವಿನೆಸಳು - 1/2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 1 ಚಮಚ
ಮಾಡುವ ವಿಧಾನ
1. ಮೊದಲಿಗೆ ಕಡಲೆ ಕಾಳು (ಚನ್ನಾ) ವನ್ನು ಹಿಂದಿನ ದಿನವೇ ನೀರಿನಲ್ಲಿ ಹಾಕಿ ನೆನೆಸಿಡಿ.
2. ಮರುದಿನ ಕಡಲೆ ಕಾಳು ಮತ್ತು ತೊಂಡೆಕಾಯಿಯನ್ನು ಪ್ರಶ್ಶರ್ ಕುಕ್ಕರ್‌ನಲ್ಲಿ 1 ಕಪ್ ನೀರು ಅರಶಿನ ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.
3. ನಂತರ ಬಾಣಲೆಯಲ್ಲಿ 1 ಚಮಚದಷ್ಟು ಎಣ್ಣೆ ಹಾಕಿ ಕೆಂಪು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆಯನ್ನು ಚೆನ್ನಾಗಿ ಹುರಿದುಕೊಳ್ಳಿ ನಂತರ ಕೊಬ್ಬರಿಯನ್ನು ತುಸು ಬೆಚ್ಚಗೆ ಮಾಡಿಕೊಳ್ಳಿ.
4. ಈ ಮಿಶ್ರಣ ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
5. ಈಗ ಕುಕ್ಕರ್‌ನಿಂದ ಕಡಲೆ ಮತ್ತು ತೊಂಡೆಕಾಯಿಯನ್ನು ಪಾತ್ರೆಗೆ ವರ್ಗಾಯಿಸಿಕೊಳ್ಳಿ ಮತ್ತು ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಬಿಡಿ. ಸ್ವಲ್ಪ ಸಮಯದ ನಂತರ ಮಸಾಲೆ ಮಿಶ್ರಣವನ್ನು ಈ ತರಕಾರಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಗರಮ್ ಮಸಾಲೆಯನ್ನು ಹಾಕಿ.
6. ಮಸಾಲೆಯು ಚೆನ್ನಾಗಿ ಬೆಂದ ನಂತರ ಅದಕ್ಕೆ ಸಾಸಿವೆ ಒಗ್ಗರಣೆಯನ್ನು ಮಾಡಿಕೊಳ್ಳಿ.
ತೊಂಡೆಕಾಯಿ ಕಡ್ಲೆ ಪಲ್ಯ ರೆಸಿಪಿ ಸವಿಯಲು ಸಿದ್ಧವಾಗಿದೆ. ಅನ್ನ ಅಥವಾ ಚಪಾತಿ ಪೂರಿಯೊಂದಿಗೆ ಸವಿಯಲು ಈ ಗ್ರೇವಿ ಹೇಳಿ ಮಾಡಿಸಿದ ಆಹಾರವಾಗಿದೆ.



Click it and Unblock the Notifications