Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿಯಾಗಿರುತ್ತೆ ಈ ಮೂಲಂಗಿ ಪಾಲಾಕ್ ಪಲ್ಯ
ಮೂಲಂಗಿ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವರಿಗೆ ಅದರ ವಾಸನೆ ಇಷ್ಟವಾಗುವುದಿಲ್ಲ, ಮತ್ತೆ ಕೆಲವರಿಗೆ ಮೂಲಂಗಿ ಅಡುಗೆ ರುಚಿ ಅನಿಸುವುದಿಲ್ಲ. ಅಂಥವರು ಈ ಅಡುಗೆ ಟ್ರೈ ಮಾಡಿ ಖಂಡಿತ ಇಷ್ಟವಾಗುವುದು. ಈ ಪಲ್ಯವನ್ನು ಮೂಲಂಗಿ ಜೊತೆ ಪಾಲಾಕ್ ಸೊಪ್ಪು ಹಾಕಿ ಮಾಡುವುದರಿಂದ ಮೂಲಂಗಿ ವಾಸನೆ ಮೂಗಿಗೆ ಬಡೆಯುವುದಿಲ್ಲ, ಪಲ್ಯವೂ ರುಚಿಯಾಗಿರುತ್ತದೆ.
ಬನ್ನಿ ಈ ಪಲ್ಯ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಮೂಲಂಗಿ 2(ಕತ್ತರಿಸಿದ್ದು)
ಪಾಲಾಕ್ ಸೊಪ್ಪು 2 ಕಟ್
ಬೆಳ್ಳುಳ್ಳಿ 3-4 ಎಸಳು
ಈರುಳ್ಳಿ 1
ಜೀರಿಗೆ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ
ಚಿಟಿಕೆಯಷ್ಟು ಇಂಗು
ಒಣ ಮಾವಿನ ಪುಡಿ 1 ಚಮಚ
ಎಣ್ಣೆ
ತಯಾರಿಸುವ ವಿಧಾನ:
* ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ, ಮೂಲಂಗಿಯನ್ನು ಕತ್ತರಿಸಿ ಕೂಡ ಸ್ವಚ್ಛ ಮಾಡಿ.
* ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ, ಜೀರಿಗೆ ಹಾಕಿ ಅದು ಚಟಾಪಟಾ ಶಬ್ದ ಮಾಡುವಾಗ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಇಂಗು ಹಾಕಿ ಅರಿಶಿಣ ಪುಡಿ ಮತ್ತು ಖಾರದ ಪುಡಿ, ಒಣ ಮಾವಿನ ಪುಡಿ ಹಾಕಿ ಮಿಕ್ಸ್ ಮಾಡಿ.
* ಈಗ ಕತ್ತರಿಸಿದ ಮೂಲಂಗಿ ಹಾಕಿ 5 ನಿಮಿಷ ಫ್ರೈ ಮಾಡಿ, ನಂತರ ಪಾಲಾಕ್ ಸೊಪ್ಪು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ಹೀಗೆ ಬೇಯಿಸುವಾಗ ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ. ಇಷ್ಟು ಮಾಡಿದರೆ ಮೂಲಂಗಿ ಪಾಲಾಕ್ ಸೊಪ್ಪಿನ ಪಲ್ಯ ರೆಡಿ.



Click it and Unblock the Notifications
