Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿ ರುಚಿಯಾದ ಈರುಳ್ಳಿ ಟೊಮೇಟೊ ಪಲ್ಯ
ಹುಳಿಯಾದ ಟೊಮೇಟೊ ಹಾಗೂ ಗರಿಯಾದ ಈರುಳ್ಳಿ ಊಟಕ್ಕೆ ಉತ್ತಮ ಕಾಂಬಿನೇಶನ್. ಇದು ನಾಲಗೆಗೆ ಕೊಡುವ ರುಚಿಯೇ ಬೇರೆ. ಭಾರತದಲ್ಲಂತೂ ಇವೆರಡನ್ನೂ ಬಳಸಿ ನಾನಾ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ.
ಮಿಶ್ರ ವೆಜ್ ಪಲ್ಯದ ರೆಸಿಪಿ
ಸ್ಯಾಂಡ್‌ವಿಚ್ ಹಾಗೂ ರೋಟಿಗೂ ಕೂಡ ಇದೊಂದು ಒಳ್ಳೆಯ ಕಾಂಬಿನೇಶನ್ ಆಗಿದೆ. ಇಂದಿನ ಲೇಖನದಲ್ಲಿ ಇವೆರಡನ್ನು ಬಳಸಿ ತಯಾರಿಸುವ ಒಂದು ರೆಸಿಪಿಯನ್ನು ನಾವಿಲ್ಲಿ ನೀಡಿದ್ದು ಇದರಿಂದ ನಿಮ್ಮ ದೇಹಕ್ಕೆ ಉತ್ತಮ ಆರೋಗ್ಯ ದೊರೆಯುತ್ತದೆ.
ಈ ರೆಸಿಪಿ ಮಾಡಲು ತುಂಬಾ ಸರಳವಾಗಿದ್ದು ನಿಮ್ಮ ಕಚೇರಿಗೆ ಹೋಗುವ ಧಾವಂತದಲ್ಲಿ ಸುಲಭವಾಗಿ ತಯಾರಿಸಬಹುದು. ಹಾಗಿದ್ದರೆ ಈ ಟೊಮೇಟೊ ಈರುಳ್ಳಿ ಪಲ್ಯವನ್ನು ತಯಾರಿಸಲು ಈ ವಿಧಾನವನ್ನು ಅನುಸರಿಸಿ.

ಪ್ರಮಾಣ:3-4
*ಸಿದ್ಧತಾ ಸಮಯ: 5 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು
ಸಾಮಾಗ್ರಿಗಳು:
1. ಈರುಳ್ಳಿ - 2 (ಕತ್ತರಿಸಿದ್ದು)
2. ಟೊಮೇಟೊ - 3 (ಕತ್ತರಿಸಿದ್ದು)
3. ಹಸಿಮೆಣಸು - 2 (ಕತ್ತರಿಸಿದ್ದು)
4. ಅರಶಿ ಹುಡಿ - 1 ಸ್ಪೂನ್
5. ಮೆಣಸಿನ ಹುಡಿ - 1 ಸ್ಪೂನ್
6. ಕೊತ್ತಂಬರಿ ಹುಡಿ - 1/2 ಸ್ಪೂನ್
7. ಜೀರಿಗೆ - ಸ್ವಲ್ಪ
8. ಉಪ್ಪು - ರುಚಿಗೆ ತಕ್ಕಷ್ಟು
9. ಎಣ್ಣೆ - 1 ಸ್ಪೂನ್
ನಾಲಿಗೆಯ ರುಚಿ ತಣಿಸುವ ಪಾಲಕ್ ರೆಸಿಪಿ!
ಮಾಡುವ ವಿಧಾನ:
1. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಜೀರಿಗೆಯ ಒಗ್ಗರಣೆಯನ್ನು ಅದಕ್ಕೆ ಹಾಕಿ.
2. ಜೀರಿಗೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಈರುಳ್ಳಿಯನ್ನು ಹಾಕಿ. 3-4 ನಿಮಿಷಗಳ ಕಾಲ ಅದನ್ನು ಹುರಿಯಿರಿ.
3. ಅರಶಿನವನ್ನು ಹಾಕಿ ಮಿಶ್ರ ಮಾಡಿ. ಈರುಳ್ಳಿ ಬೇಯುತ್ತಿದ್ದಂತೆ ಟೊಮೇಟೊ ಹಾಗೂ ಹಸಿಮೆಣಸನ್ನು ಇದಕ್ಕೆ ಹಾಕಿ.
4. ಚೆನ್ನಾಗಿ ಮಿಶ್ರ ಮಾಡಿ ಮತ್ತು ಟೊಮೇಟೋ ಬೇಯುತ್ತಿದ್ದಂತೆ ಪ್ಯಾನ್‌ನಲ್ಲಿ ಚೆನ್ನಾಗಿ ಮ್ಯಾಶ್ ಆಗುವಂತೆ ಮಾಡಿ.
5. ಮೆಣಸಿನ ಹುಡಿ ಹಾಗೂ ಕೊತ್ತಂಬರಿ ಹುಡಿಯನ್ನು ಸೇರಿಸಿ ಸ್ವಲ್ಪ ನಿಮಿಷ ಮಿಶ್ರ ಮಾಡಿ.
6. ಇನ್ನು ಗ್ಯಾಸ್ ಸ್ಟವ್ ಆಫ್ ಮಾಡಿ, ರುಚಿ ರುಚಿಯಾದ ಈರುಳ್ಳಿ ಟೊಮೇಟೊ ಪಲ್ಯ ರೆಡಿ!
ಇದನ್ನು ರೋಟಿ ಹಾಗೂ ಬಿಸಿ ಅನ್ನದೊಂದಿಗೆ ಸವಿಯಲು ನೀಡಿರಿ.



Click it and Unblock the Notifications
