Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಗುಜರಾತಿ ಆಲೂ ಸಬ್ಜಿಯ ವಿಶೇಷತೆ ಏನು?
ಚಪಾತಿ, ಪೂರಿಗೆ ಆಲೂ ಬಾಜಿ ಅಥವಾ ಸಬ್ಜಿ ಮಾಡುವುದು ನಮಗೇನು ವಿಶೇಷವಲ್ಲ. ಆದರೆ ಒಂದೊಂದು ಕಡೆಗಳಲ್ಲಿ ಇದನ್ನು ಮಾಡುವ ವಿಧಾನ ಭಿನ್ನವಾಗಿರುತ್ತದೆ, ಇದರಿಂದಾಗಿ ರುಚಿಯೂ ಭಿನ್ನವಾಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇಲ್ಲಿ ನಾವು ಗುಜರಾತಿ ಶೈಲಿಯ ಆಲೂ ಸಬ್ಜಿಯ ಬಗ್ಗೆ ಹೇಳಿದ್ದೇವೆ. ನಾವು ಸಾಮಾನ್ಯವಾಗಿ ಆಲೂಗಡ್ಡೆಯನ್ನು ಮೊದಲೇ ಬೇಯಿಸಿ ಬಾಜಿ ಮಾಡುತ್ತೇವೆ. ಆದರೆ ಈ ಸಬ್ಜಿಯನ್ನು ಹಾಗೆ ಮಾಡಲ್ಲ, ಹಾಗಾದರೆ ಇದರ ವಿಶೇಷವೇನು ಎಂದು ನೋಡೋಣ ಬನ್ನಿ.
ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 4-5
ಶುಂಠಿ ಪೇಸ್ಟ್ 1 ಚಮಚ
ಟೊಮೆಟೊ ಪೇಸ್ಟ್ 3-4 ಚಮಚ
ಮೊಸರು 2 ಚಮಚ
ಚಿಟಿಕೆಯಷ್ಟು ಇಂಗು
ಅರಿಶಿಣ ಪುಡಿ ಅರ್ಧ ಚಮಚ
ಜೀರಿಗೆ ಪುಡಿ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ಸಕ್ಕರೆ ಅರ್ಧ ಚಮಚ
ಎಣ್ಣೆ 1 ಚಮಚ
ನೀರು ಅರ್ಧ ಕಪ್
ತಯಾರಿಸುವ ವಿಧಾನ
* ಆಲೂಗಡ್ಡೆಯನ್ನು ಶುಚಿ ಮಾಡಿ ಕತ್ತರಿಸಿಡಿ.
* ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಇಂಗು ಮತ್ತು ಸಕ್ಕರೆ ಹಾಕಿ. ಸಕ್ಕರೆ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಶುಂಠಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ.
* ಈಗ ಟೊಮೆಟೊ ಪೇಸ್ಟ್, ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ. ಈಗ ಆಲೂಗಡ್ಡೆಯನ್ನು ಹಾಕಿ 2-3 ನಿಮಿಷ ಫ್ರೈ ಮಾಡಿ.
* ಈಗ ಮೊಸರು ಹಾಕಿ ಮತ್ತೆ ಫ್ರೈ ಮಾಡಿ, ರುಚಿಗೆ ತಕ್ಕ ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ.
* ಆಗಾಗ ಸೌಟ್ ನಿಂದ ಆಡಿಸಲು ಮರೆಯಬೇಡಿ. ಆಲೂಗಡ್ಡೆ ಬೆಂದ ನಂತರ ಉರಿಯಿಂದ ಇಳಿಸಿದರೆ ಚಪಾತಿ ಅಥವಾ ರೊಟ್ಟಿ ಜೊತೆ ತಿನ್ನಲು ಆಲೂಗಡ್ಡೆ ಸಬ್ಜಿ ರೆಡಿ.



Click it and Unblock the Notifications

