Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಬೀನ್ಸ್ ಪಲ್ಯ ಸಮ್ ಥಿಂಗ್ ಸ್ಪೆಷಲ್
ಈ ಬೀನ್ಸ್ ಪಲ್ಯ ಸಮ್ ಥಿಂಗ್ ಸ್ಪೆಷಲ್ ಅನ್ನುವುದಕ್ಕೂ ಕಾರಣವಿದೆ. ಈ ಬೀನ್ಸ್ ಪಲ್ಯವನ್ನು ಬೇಯಿಸಲು ಯಾವುದೇ ನೀರು ಹಾಕುವುದಿಲ್ಲ. ಆದ್ದರಿಂದಲೇ ಇದರ ರುಚಿ ಇತರ ಬೀನ್ಸ್ ಪಲ್ಯಗಿಂತ ಹೆಚ್ಚು ಸ್ವಾದಿಷ್ಟಕರವಾಗಿರುತ್ತದೆ.
ಇದನ್ನು ಮಾಡುವ ವಿಧಾನ ತುಂಬಾ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಬೀನ್ಸ್ ಕಾಲು ಕೆಜಿ
ಆಲೂಗಡ್ಡೆ 2
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ 1 ಚಮಚ
ಆಮ್ ಚೂರ್ ಅರ್ಧ ಚಮಚ (ರುಚಿಗೆ ತಕ್ಕಷ್ಟು)
ತುಪ್ಪ 2 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ
* ತರಕಾರಿಯನ್ನು ಕತ್ತರಿಸಿ, ಶುಚಿಗೊಳಿಸಿ.
* ಈಗ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಅದು ಬಿಸಿಯಾದಾಗ ಅದರಲ್ಲಿ ಆಲೂಗಡ್ಡೆ ತುಂಡುಗಳನ್ನು ಹಾಕಿ ಆಲೂಗಡ್ಡೆ ಸ್ವಲ್ಪ ಕಂದು ಬಣ್ಣ ಬರುವವರಗೆ ಫ್ರೈ ಮಾಡಿ. ನಂತರ ಬೀನ್ಸ್ ಸೇರಿಸಿ 2-3 ನಿಮಿಷ ಫ್ರೈ ಮಾಡಿ.
*ಈಗ ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ (ಅಡುಗೆ ತಳ ಹಿಡಿಯದಂತೆ ಆಗಾಗ ಸೌಟ್ ನಿಂದ ಆಡಿಸಲು ಮರೆಯಬೇಡಿ). ತರಕಾರಿ ಬೆಂದಾಗ ಗರಂ ಮಸಾಲ ಮತ್ತು ಆಮ್ ಚೂರ್ ಸೇರಿಸಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಿಸಿ ಉರಿಯಿಂದ ಇಳಿಸಿದರೆ ಆಲೂ ಬೀನ್ಸ್ ಪಲ್ಯ ರೆಡಿ.



Click it and Unblock the Notifications
