Latest Updates
-
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್
ವಾವ್! ನಾಲಿಗೆಯ ರುಚಿ ತಣಿಸುವ ಆಲೂಗಡ್ಡೆ ಪಲ್ಯ
ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಕಾಣಸಿಗುವ ಅತಿ ಹೆಚ್ಚು ಬಳಕೆಯಾಗುವ ತರಕಾರಿ ಆಲೂಗಡ್ಡೆ. ಇದರ ಪಲ್ಯ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ನಿಮ್ಮ ಊಟದ ರುಚಿಯನ್ನು ನಾಲಗೆಯಲ್ಲಿ ಹಿಡಿದಿಡುವಂತೆ ಮಾಡುವ ಹಲವಾರು ಆಲೂಗಡ್ಡೆ ಖಾದ್ಯಗಳಿವೆ. ಡ್ರೈ ಆಲೂ ಪಲ್ಯದಿಂದ ಹಿಡಿದು ಗ್ರೇವಿಯವರೆಗೆ ನೀವು ಹಲವಾರು ಖಾದ್ಯಗಳನ್ನು ಪ್ರಯತ್ನಿಸಬಹುದು.
ಇಂದಿನ ಆಧುನಿಕ ಯುಗದಲ್ಲಿ ವೃತ್ತಿನಿರತರ ಸಂಖ್ಯೆ ಹೆಚ್ಚಿರುವ ಸಮಯದಲ್ಲಿ, ಸರಳ ಹಾಗೂ ಸುಲಭವಾಗಿ ತಯಾರಿಸುವ ಖಾದ್ಯಗಳು ಉತ್ತಮವಾಗಿರುತ್ತವೆ. ಹಾಗಾಗಿ ಬರೇ 30 ನಿಮಿಷಗಳಲ್ಲಿ ತಯಾರಿಸಬಹುದಾದ ಆಲೂಗಡ್ಡೆ ಪಲ್ಯವನ್ನು ನಿಮಗಾಗಿ ನಾವಿಂದು ನೀಡುತ್ತಿದ್ದೇವೆ.

ಪ್ರಮಾಣ: 4
ಸಿದ್ಧತೆ ಸಮಯ: 5 ನಿಮಿಷಗಳು
ಅಡುಗೆ ಸಮಯ: 25 ನಿಮಿಷಗಳು
ಸಾಮಾಗ್ರಿಗಳು:
1.ಆಲೂಗಡ್ಡೆ - 4-5
2.ಟೊಮೇಟೊ - 2 (ಸಾಮಾನ್ಯ ಗಾತ್ರದಲ್ಲಿ ಕತ್ತರಿಸಿದ್ದು)
3.ಹಸಿಮೆಣಸು - 2 ತುಂಡರಿಸಿದ್ದು
4.ಅರಶಿನ ಹುಡಿ - 1 ಚಮಚ
5.ಮೆಣಸಿನ ಹುಡಿ - 1 ಚಮಚ
6.ಕೊತ್ತಂಬರಿ ಹುಡಿ - 1 1/2 ಚಮಚ
7.ಗರಂ ಮಸಾಲಾ - 1/2 ಚಮಚ
8.ಜೀರಿಗೆ ಹುಡಿ-1/2 ಚಮಚ
9.ಉಪ್ಪು - ರುಚಿಗೆ ತಕ್ಕಷ್ಟು
10.ಎಣ್ಣೆ - 1 ಚಮಚ
ಮಾಡುವ ವಿಧಾನ
1. ಆಲೂಗಡ್ಡೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ನಾಲ್ಕು ಭಾಗಗಳನ್ನಾಗಿ ಕತ್ತರಿಸಿಕೊಳ್ಳಿ
2. ಇನ್ನು ಪ್ರೆಶ್ಶರ್ ಕುಕ್ಕರ್ನಲ್ಲಿ ಕತ್ತರಿಸಲಾಗಿರುವ ಆಲೂಗಡ್ಡೆ ಮತ್ತು ನೀರನ್ನು ಹಾಕಿ. ಮೂರು ನಾಲ್ಕು ವಿಶಲ್ ನಂತರ ಕುಕ್ಕರ್ ಆಫ್ ಮಾಡಿ.
3. ಇದೇ ಸಮಯದಲ್ಲಿ, ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿ ಆದ ನಂತರ ಜೀರಿಗೆ ಹಾಕಿ.
4. ಜೀರಿಗೆ ಕಾದೊಡನೆ ಅದಕ್ಕೆ ಮೆಣಸಿನ ಹುಡಿ ಮತ್ತು ಟೊಮೇಟೊವನ್ನು ಹಾಕಿ. ಚೆನ್ನಾಗಿ ಮಿಶ್ರ ಮಾಡಿ 3-4 ನಿಮಿಷಗಳಷ್ಟು ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
5. ಕುಕ್ಕರ್ ತಣಿದ ಒಡನೆ ಬೆಂದ ಆಲೂಗಡ್ಡೆಯನ್ನು ಹೊರತೆಗೆದು ಸಿಪ್ಪೆ ಸುಲಿದಿಡಿ.
6. ತದನಂತರ ಪಾತ್ರೆಗೆ ಅರಶಿನ ಹುಡಿ ಮತ್ತು ಉಪ್ಪು ಹಾಕಿ. ಮಿಶ್ರ ಮಾಡಿ 2 ನಿಮಿಷಗಳಷ್ಟು ಸಮಯ ಬೇಯಿಸಿ.
7. ಇನ್ನು ಪಾತ್ರೆಗೆ ಮೆಣಸಿನಕಾಯಿ, ಕೊತ್ತಂಬರಿ ಹುಡಿ, ಮತ್ತು ಗರಂ ಮಸಾಲಾ ಸೇರಿಸಿ. ಮಿಶ್ರ ಮಾಡಿ ಬೇಯಿಸಿ.
8. ನಂತರ ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಪಾತ್ರೆಗೆ ಹಾಕಿ. ಇದನ್ನು ಸೆಮಿ ಗ್ರೇವಿ ಮಾಡಲು ನೀವು ಬಯಸಿದ್ದರೆ, ಸ್ವಲ್ಪ ನೀರು ಹಾಕಿ ಗ್ರೇವಿ ದಪ್ಪಗಾಗುವರೆಗೆ ಕುದಿಸಿ. ಆದ ನಂತರ ಗ್ಯಾಸ್ ಆರಿಸಿ.
ಬಾಯಿಯಲ್ಲಿ ನೀರೂರಿಸುವ ಆಲೂಗಡ್ಡೆ ಗ್ರೇವಿ ಸಿದ್ಧವಾಗಿದೆ. ಚಪಾತಿ ರೋಟಿಯೊಂದಿಗೆ ಇದನ್ನು ಬಿಸಿಬಿಸಿಯಾಗಿ ಸವಿಯಿರಿ



Click it and Unblock the Notifications
