Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ರುಚಿಯಾದ ಆಲೂಗಡ್ಡೆ ಮತ್ತು ಕೋಸಿನ ಪಲ್ಯ
Palya
oi-Hema
By Hema S
ನಿಮಗಿಷ್ಟವಾದ ತರಕಾರಿಗಳು ಈಗ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಕ್ಯಾರೆಟ್ , ಹೂಕೋಸು, ಎಲೆಕೋಸು, ಗಡ್ಡೆಕೋಸು ಇನ್ನೂ ಹಲವು ಹಸಿರು ತರಕಾರಿಗಳನ್ನು ನೀವಿಲ್ಲಿ ಕಾಣಬಹುದು. ಇವುಗಳನ್ನು ಬಳಸಿ ಪೌಷ್ಟಿಕಾಂಶ ಭರಿತ ಆಹಾರವನ್ನು ನೀವಿಲ್ಲಿ ತಯಾರಿಸಬಹುದು.
ಈವತ್ತು ನಿಮಗೆ ಆಲೂಗಡ್ಡೆ ಮತ್ತು ಕೋಸಿನ ಕರಿ ಮಾಡುವುದನ್ನು ನಿಮಗೆ ಹೇಳಿಕೊಡುತ್ತೇವೆ. ಇದನ್ನು ತಯಾರಿಸುವುದು ಸುಲಭ. ಇದನ್ನು ಊಟಕ್ಕೂ ಬಳಸಬಹುದು ಮತ್ತು ಲಂಚ್ ಬಾಕ್ಸ್ ಗೆ ಕೂಡ ತೆಗೆದುಕೊಂಡು ಹೋಗಬಹುದು.

ಕೋಸು- 1 (ಮಧ್ಯಮ ಗಾತ್ರದ್ದು, ತುರಿದಿಟ್ಟುಕೊಳ್ಳಿ)
ಆಲೂಗಡ್ಡೆ- 3 (ಕತ್ತರಿಸಿಕೊಳ್ಳಿ)
ಈರುಳ್ಳಿ- 1 (ಕತ್ತರಿಸಿಕೊಳ್ಳಿ)
ಟೊಮೊಟೊ- 2 (ಸಣ್ಣಗೆ ಕತ್ತರಿಸಿ)
ಜೀರಿಗೆ ಪುಡಿ- 2 ಟೀಚಮಚ
ಧನಿಯ ಪುಡಿ- 1 ಟೀಚಮಚ
ಹಸಿಮೆಣಸಿಕಾಯಿ ಪೇಸ್ಟ್- 1 ಟೀ ಚಮಚ
ಗರಂ ಮಸಾಲ ಪುಡಿ- 1/2 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಜೀರಿಗೆ- 1 ಟೀ ಚಮಚ
ಬೇ ಲೀಫ್ -1
ಎಣ್ಣೆ- 2 ಟೀಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ(ಕತ್ತರಿಸಿದ್ದು)
ಮಾಡುವ ವಿಧಾನ
1. ಕೋಸನ್ನು ಚೆನ್ನಾಗಿ ತೊಳೆಯಿರಿ.
2. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿ ಜೀರಿಗೆ ಮತ್ತು ಬೇ ಎಲೆಗಳನ್ನು ಹಾಕಿ ಹುರಿಯಿರಿ
3. ಹೆಚ್ಚಿದ ಆಲೂಗಡ್ಡೆ, ಉಪ್ಪು ಸೇರಿಸಿ 3-4 ನಿಮಿಷಗಳವರೆಗೆ ಮಂದ ಉರಿಯಲ್ಲಿ ಹುರಿಯಿರಿ
4. ಅದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿಕಾಯಿ ಪೇಸ್ಟ್ ಹಾಕಿ 4-5 ನಿಮಿಷಗಳವರೆಗೆ ಬೇಯಿಸಿ.
5. ಹೆಚ್ಚಿದ ಟೊಮೊಟೊ, ಜೀರಿಗೆ ಪುಡಿ, ಅರಿಶಿನ ಪುಡಿ, ಧನಿಯ ಪುಡಿ ಬೆರೆಸಿ 2-3 ನಿಮಿಷ ಬೇಯಿಸಿ.
6. ಈಗ ತುರಿದಿಟ್ಟುಕೊಂಡ ಕೋಸನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
7. ಅದಕ್ಕೆ ಉಪ್ಪು, ಗರಂ ಮಸಾಲ ಪುಡಿ ಹಾಕಿ 5-6 ನಿಮಿಷಗಳವರೆಗೆ ಕುದಿಸಿ
8. ಕೋಸು ನೀರು ಬಿಡಲು ಆರಂಭಿಸಿದ ತಕ್ಷಣ ಬಾಣಲಿಯನ್ನು ಮುಚ್ಚಿಟ್ಟು 8-10 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಕುದಿಸಿ.
9. ಬೆಂದ ನಂತರ ಮುಚ್ಚಳ ತೆರೆದು ಸ್ಟೌ ಆರಿಸಿ.
10. ಈಗ ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಸೇರಿಸಿ.
ಈ ರುಚಿಯಾದ ಕರಿಯನ್ನು ಅನ್ನದೊಂದಿಗೆ ಕಲಸಿ ತಿನ್ನಿ.
Comments
English summary
Delicious Potato & Cabbage Curry Recipe
Story first published: Monday, November 25, 2013, 12:00 [IST]
Other articles published on Nov 25, 2013



Click it and Unblock the Notifications