Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಆಲೂಗಡ್ಡೆ ಹುರಳಿಕಾಯಿ ಪಲ್ಯದ ಮೋಡಿ
Palya
oi-Hema
By Hema S
ಆಲೂಗಡ್ಡೆಯನ್ನು ಭಾರತೀಯ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಅನ್ನ ಅಥವ ರೋಟಿ, ಚಪಾತಿಯೊಂದಿಗೆ ಪಲ್ಯ ಮಾಡಲು ಹೆಚ್ಚಾಗಿ ಬಳಸುತ್ತಾರೆ.
ಹಾಗಾಗಿ ಆಲೂಗಡ್ಡೆಯ ಹಲವು ತಿಂಡಿಗಳನ್ನು ನೀವು ಮಾಡಬಹುದು. ಬೋಲ್ಡ್ ಸ್ಕೈ ನಿಮಗಾಗಿ ಈವತ್ತು ಆಲೂಗಡ್ಡೆ ಮತ್ತು ಹುರಳಿಕಾಯಿ ಪಲ್ಯದ ರೆಸಿಪಿಯನ್ನು ಹೊತ್ತು ತಂದಿದೆ. ಇದನ್ನು ಮಾಡುವುದು ಬಹಳ ಸುಲಭ. ಒಮ್ಮೆ ಪ್ರಯತ್ಸಿಸಿ ನೋಡಿ.

1. ಆಲೂಗಡ್ಡೆ- 5-6 (ಸಿಪ್ಪೆ ಬಿಡಿಸಿ ಹೆಚ್ಚಿಟ್ಟುಕೊಳ್ಳಿ)
2. ಹುರಳಿಕಾಯಿ- 10-12 (ಹೆಚ್ಚಿಟ್ಟುಕೊಳ್ಳಿ)
3. ಹಸಿಮೆಣಸಿನಕಾಯಿ- 2 (ಹೆಚ್ಚಿಟ್ಟುಕೊಳ್ಳಿ)
4. ಅರಿಶಿಣಪುಡಿ- 1 ಟೀಚಮಚ
5. ಅಚ್ಚಖಾರದ ಪುಡಿ- 1 ಟೀಚಮಚ
6. ಧನಿಯ ಪುಡಿ- 1/2 ಟೀಚಮಚ
7. ಜೀರಿಗೆ- 1 ಟೀಚಮಚ
8. ಉಪ್ಪು- ರುಚಿಗೆ ತಕ್ಕಷ್ಟು
9. ಎಣ್ಣೆ- 1 ಟೀಚಮಚ
ಮಾಡುವ ವಿಧಾನ
1. ಬಾಣಲಿಯಲ್ಲಿ ಎಣ್ಣೆಯನ್ನು ಕಾಯಿಸಿ ಜೀರಿಗೆಯನ್ನು ಹಾಕಿ.
2. ಅದಕ್ಕೆ ಹೆಚ್ಚಿಟ್ಟುಕೊಂಡ ಆಲೂಗಡ್ಡೆ ಹಾಕಿ 2 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ.
3. ನಂತರ ಹುರುಳಿಕಾಯಿ ಮತ್ತು ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ಉಪ್ಪು ಮತ್ತು ಅರಿಶಿಣ ಪುಡಿ ಸೇರಿಸಿ.
4. ಇದನ್ನು 6-10 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ ನಂತರ ಮುಚ್ಚಳ ಮುಚ್ಚಿ. ಆಗಾಗ ಅದನ್ನು ತಿರುವುತ್ತಿರಿ.
5. ಆಲೂಗಡ್ಡೆ ಮತ್ತು ಹುರಳಿಕಾಯಿ ಬೆಂದ ನಂತರ ಅಚ್ಚಖಾರದ ಪುಡಿ ಮತ್ತು ಧನಿಯ ಪುಡಿ ಹಾಕಿ ಎಲ್ಲವನ್ನು ಚೆನ್ನಾಗಿ.
ಆಲೂಗಡ್ಡೆ-ಹುರಳಿಕಾಯಿ ಪಲ್ಯವನ್ನು ಅನ್ನ ಅಥವ ರೋಟಿ ಅಥವ ಚಪಾತಿಯೊಂದಿಗೆ ಬಳಸಬಹುದು.
Comments
English summary
Crisp Aloo With Green Beans Recipe
Story first published: Tuesday, December 3, 2013, 12:02 [IST]
Other articles published on Dec 3, 2013



Click it and Unblock the Notifications