Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರುಚಿಕರವಾದ ಕಡಲೆಕಾಳು ಪುಲಾವ್ ರೆಸಿಪಿ
ಭಾರತದ ಹಲವೆಡೆಗಳಲ್ಲಿ ಹೆಚ್ಚು ಪ್ರಿಯವಾಗಿರುವ ಸಾಮಾಗ್ರಿಯೆಂದರೆ ಕಡಲೆಕಾಳಾಗಿದೆ. ಭಾರತದ ಉತ್ತರದ ಕಡೆಗಳಲ್ಲಿ ಮುಖ್ಯವಾದ ಸಾಮಾಗ್ರಿಯಾಗಿರುವ ಕಡಲೆಕಾಳು ದಕ್ಷಿಣದ ಕಡೆಗಳಲ್ಲಿ ಕೂಡ ಸಾಮಾನ್ಯ ಬಹುಮುಖ್ಯವಾಗಿರುವ ಸಾಮಾಗ್ರಿಯಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೆಂಗಿನೆಣ್ಣೆ ಹಾಕಿ ಮಾಡುವ ಮೀನಿನ ಫ್ರೈ
ಈ ರುಚಿಯಾದ ಸಾಮಾಗ್ರಿ ಕಡಲೆಕಾಳು, ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ಸಹ ಹೆಚ್ಚು ಇಷ್ಟಪಡುತ್ತಾರೆ. ನಿಮ್ಮ ಪುಟ್ಟ ಮಕ್ಕಳ ಹಸಿವನ್ನು ತಣಿಸಲು ಈ ರುಚಿಯಾದ ಕಡಲೆಕಾಳು ಪುಲಾವ್ ಅನ್ನು ನೀವು ಪ್ರಯತ್ನಿಸಲೇಬೇಕು.

ಈ ರುಚಿಯಾದ ಕಡಲೆಕಾಳು ಪುಲಾವ್ ರೆಸಿಪಿಯನ್ನು ತಯಾರಿಲಸಲು ನೀವು ತುಂಬಾ ಹೊತ್ತು ಕಳೆಯಬೇಕೆಂದಿಲ್ಲ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಬನ್ನಿ ಈ ಹೊಸತಾದ ರುಚಿಯನ್ನು ತಯಾರಿಸಿ ನಿಮ್ಮ ಮನೆಮಂದಿಗೆಲ್ಲಾ ಖುಷಿ ನೀಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ವಾದಿಷ್ಟ ಬೆಣ್ಣೆ ಕ್ಯಾಪ್ಸಿಕಂ ಮಿಶ್ರಿತ ಅನ್ನದ ರೆಸಿಪಿ
ಪ್ರಮಾಣ: 3
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಾಮಾಗ್ರಿಗಳು
.ಅಕ್ಕಿ - 1ಕಪ್
.ಕಡಲೆಕಾಳು -25ಗ್ರಾಂಗಳು
.ಟೊಮೇಟೊ - 2(ತುಂಡರಿಸಿದ್ದು)
.ಆಲೂಗಡ್ಡೆ - 1(ಬೇಯಿಸಿದ್ದು)
.ಪಾಲಕ್ - 1ಕಟ್ಟು (ಕತ್ತರಿಸಿದ್ದು)
.ಕ್ಯಾಪ್ಸಿಕಂ - 1 (ದೊಡ್ಡ ಗಾತ್ರದ್ದು)
.ಎಣ್ಣೆ - 2ಟೇಸ್ಪೂನ್
.ಜೀರಿಗೆ - 1ಟೇಸ್ಪೂನ್
.ಇಂಗು -1/2 ಟೇಸ್ಪೂನ್
.ಶುಂಠಿ - 1ಟೇಸ್ಪೂನ್
.ಹಸಿಮೆಣಸು - 2 (ತುಂಡರಿಸಿದ್ದ)
.ಹಳದಿ -1ಟೇಸ್ಪೂನ್
.ಅಮೆಚೂರ್- 1/2 ಟೇಸ್ಪೂನ್
.ಗರಂ ಮಸಾಲಾ - 1/4ಟೇಸ್ಪೂನ್
.ನೀರು - 2ಕಪ್‌ಗಳು
.ಉಪ್ಪು ರುಚಿಗೆ ತಕ್ಕಷ್ಟು
.ಬೇ ಲೀಪ್ - 1
ಮಾಡುವ ವಿಧಾನ:
1. ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಿ. 15 ನಿಮಿಷದಷ್ಟು ಕಾಲ ಅಕ್ಕಿ ನೀರಿನಲ್ಲಿರಲಿ.
2.ಕಡಲೆಕಾಳು ನೆನೆಸಿಟ್ಟ ನೀರನ್ನು ಬಸಿದು, 5 ವಿಸಿಲ್ ಬರುವವರೆಗೆ ಕುಕ್ಕರ್‌ನಲ್ಲಿ ಬೇಯಿಸಿ, ನಂತರ ಪಕ್ಕಕ್ಕಿಡಿ.
3.ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
4.ಎಣ್ಣೆ ಬಿಸಿಯಾದೊಡನೆ, ಜೀರಿಗೆಯನ್ನು ಎಣ್ಣೆಗೆ ಹಾಕಿ. ಜೀರಿಗೆ ಬಿಸಿಯಾಗುವವರೆಗೆ ಕಾಯಿರಿ. ಶುಂಠಿ, ತುಂಡರಿಸಿದ ಹಸಿಮೆಣಸು, ಮತ್ತು ಹಳದಿಯನ್ನು ಎಣ್ಣೆಯಲ್ಲಿ ಹುರಿಯಿರಿ.
5.ಈಗ ಪ್ಯಾನ್‌ಗೆ ತುಂಡರಿಸಿದ ಟೊಮೇಟೊವನ್ನು ಹಾಕಿ ಮತ್ತು ಪ್ಯಾನ್‌ನಲ್ಲಿರುವ ಸಾಮಾಗ್ರಿಗೆ ಉಪ್ಪು ಚಿಮುಕಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ ಬಂಗಾಳಿ ಖಾದ್ಯಗಳು
6.ಟೊಮೇಟೊ ಬೆಂದ ಕೂಡಲೆ, ಬೇಯಿಸಿದ ಕಡಲೆಕಾಳನ್ನು ಪ್ಯಾನ್‌ಗೆ ಹಾಕಿ, ಆಲೂಗಡ್ಡೆ ಮತ್ತು ನೀರು ಸೇರಿಸಿ. ಬೇಯುತ್ತಿರುವಾಗಲೇ ಪ್ಯಾನ್‌ಗೆ ಮುಚ್ಚಳ ಮುಚ್ಚಿ ಮತ್ತು ಸಣ್ಣ ಉರಿಯಲ್ಲಿ 8 ನಿಮಿಷಗಳವರೆಗೆ ಬೇಯಲು ಬಿಡಿ.
7.ಸಂಪೂರ್ಣ ಬೆಂದ ಒಡನೆಯೇ, ಪ್ಯಾನ್‌ಗೆ ಅಕ್ಕಿ, ಪಾಲಾಕ್, ಬೇ ಲೀಫ್, ಮತ್ತು ಕ್ಯಾಪ್ಸಿಕಂ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಪ್ಯಾನ್ ಮುಚ್ಚಿ ಸಣ್ಣ ಉರಿಯಲ್ಲಿ 12-15 ನಿಮಿಷಗಳವರೆಗೆ ಬೇಯಿಸಿ.
8.ಪ್ಯಾನ್‌ನಲ್ಲಿ ಅಕ್ಕಿಯನ್ನು ನಿಧಾನವಾಗಿ ತಿರುಗಿಸಿ ಮತ್ತು ಬೇಯಲು ಬಿಡಿ.
9.ಕಡಲೆಕಾಳು ಪುಲಾವ್ ಸಿದ್ಧಗೊಂಡಾಗ, ಅಮೆಚೂರ್ ಹುಡಿಯನ್ನು ಚಿಮುಕಿಸಿ ಮತ್ತು ಗರಂ ಮಸಾಲಾ ಹಾಕಿ ಪ್ಯಾನ್‌ನಲ್ಲಿರುವ ಉಳಿದ ಸಾಮಾಗ್ರಿಯೊಂದಿಗೆ ಚೆನ್ನಾಗಿ ಕಲಸಿ.
10.ಮೊಸರು ಅಥವಾ ಖಾರ ಇನ್ನಷ್ಟು ಬೇಕೆಂದರೆ ನಿಮ್ಮ ಮೆಚ್ಚಿನ ಉಪ್ಪಿನಕಾಯಿಯೊಂದಿಗೆ ಕಡಲೆಕಾಳು ಪುಲಾವ್ ಅನ್ನು ಸವಿಯಿರಿ.
ಬಿಸಿ ಬಿಸಿ ಕಡಲೆಕಾಳು ಪುಲಾವ್ ರೆಸಿಪಿ ಸವಿಯಲು ಸಿದ್ಧಗೊಂಡಿದೆ. ರೈತಾದೊಂದಿಗೆ ಇದನ್ನು ಸವಿದು ಮನೆಯವರ ಮೆಚ್ಚುಗೆಗಳಿಸಿರಿ.



Click it and Unblock the Notifications
