Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸುಲಭದಲ್ಲಿ ಮಾಡಬಹುದು ಬದನೆಕಾಯಿ ಪೋಡಿ
ಬದನೆಕಾಯಿಯಿಂದ ಅನೇಕ ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಹಲಸಿನಕಾಯಿ ಪೋಡಿ ತಯಾರಿಸುವಂತೆ ಬದನೆಕಾಯಿಂದ ಕೂಡ ಪೋಡಿಯನ್ನು ತಯಾರಿಸಬಹುದಾಗಿದ್ದು ಇದನ್ನು ಅನ್ನದ ಜೊತೆ ಅಥವಾ ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಪೋಡಿ ಅಡುಗೆ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಪೋಡಿಯನ್ನು ಬಾಳೆಕಾಯಿಯಿಂದ, ಹಲಸಿನಕಾಯಿಂದ ತಯಾರಿಸಬಹುದಾಗಿದ್ದು ಈ ಖಾದ್ಯ ಊಟಕ್ಕಿದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚುವುದು.

ಬೇಕಾಗುವ ಸಾಮಾಗ್ರಿಗಳು:
* ಬದನೆಕಾಯಿ 10-15
* 1 ಚಮಚ ಮಸಾಲೆ ಪುಡಿ
* ರುಚಿಗೆ ತಕ್ಕ ಉಪ್ಪು
* 1 ಚಮಚ ಎಣ್ಣೆ
* 1 ಚಮಚ ಸಾಸಿವೆ
* ಚಿಟಿಕೆಯಷ್ಟು ಇಂಗು
* 2-3 ಹಸಿ ಮೆಣಸಿನ ಕಾಯಿ
* 4-5 ಕರಿ ಬೇವಿನ ಎಲೆ
* ಸ್ವಲ್ಪ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
1. ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಜೀರಿಗೆ, ಇಂಗು ಮತ್ತು ಕರಿ ಬೇವಿನ ಎಲೆ ಮತ್ತು ಹಸಿಮೆಣಸಿನ ಕಾಯಿಯನ್ನು ಹಾಕಿ ಹುರಿಯಬೇಕು.
2. ಈಗ ಕತ್ತರಿಸಿದ ಬದನೆಕಾಯಿಯನ್ನು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಸೌಟ್‌ನಿಂದ ಆಗಾಗ ಮಿಶ್ರ ಮಾಡುತ್ತಿರಬೇಕು. ಬದನೆಕಾಯಿಯನ್ನು ಬಾಣಲೆಯಲ್ಲಿ ತಳ ಹಿಡಿಯದಂತೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ತಿರುಗಿಸಬೇಕು.
3. ಈಗ ಮಸಾಲೆ ಪುಡಿಯನ್ನುಸೇರಿಸಿ 7-10 ನಿಮಿಷದವರೆಗೆ ಬೇಯಿಸಬೇಕು. ಆದರೆ ಮಿಶ್ರಣವನ್ನು ಸೌಟ್‌ನಿಂದ ಆಗಾಗ ತಿರುಗಿಸುತ್ತಾ ಇರಬೇಕು. ಬೆಂದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಬದನೆಕಾಯಿ ಪೋಡಿ ರೆಡಿ.



Click it and Unblock the Notifications
