Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಹಿ ರಹಿತ ಹಾಗಲಕಾಯಿ ಸ್ಟಫ್ಡ್ ರೆಸಿಪಿ
ಹಾಗಲಕಾಯಿಯಲ್ಲಿ ಅನೇಕ ಔಷಧೀಯ ಗುಣಗಳಿವೆ, ಆದರೆ ಇದು ಕಹಿಯಾಗಿರುವುದರಿಂದ ಹೆಚ್ಚಿನವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ವಾರದಲ್ಲಿ ಒಮ್ಮೆಯಾದರೂ ಹಾಗಲಕಾಯಿಯ ಪದಾರ್ಥ ಹೊಟ್ಟೆ ಸೇರಿದರೆ ಹೊಟ್ಟೆ ಶುದ್ಧವಾಗುವುದು.
ಇಲ್ಲಿ ನಾವು ಹಾಗಲಕಾಯಿಯ ಕಹಿ ತೆಗೆದು ಅದರಲ್ಲಿ ಮಸಾಲೆ ತುಂಬಿ ತಯಾರಿಸುವ ಹಾಗಲಕಾಯಿ ಸ್ಟಫ್ಡ್ (ಮಸಾಲೆ ತುಂಬಿದ ಹಾಗಲಕಾಯಿ) ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು :
ಹಾಗಲಕಾಯಿ 3 (ಚಿಕ್ಕದಾಗಿದ್ದರೆ 6)
ಅರಿಶಿಣ ಪುಡಿ 1 ಚಮಚ
ನಿಂಬೆ ರಸ 2 ಚಮಚ
ಜೀರಿಗೆ 1 ಚಮಚ
ಚಿಟಿಕೆಯಷ್ಟು ಇಂಗು
ದೊಡ್ಡ ಜೀರಿಗೆ 1 ಚಮಚ
ಖಾರದ ಪುಡಿ 1 ಚಮಚ
ಅಮ್ ಚೂರ್ 1 ಚಮಚ (ಒಣ ಮಾವಿನಕಾಯಿ ಪುಡಿ)
ಕಡಲೆಹಿಟ್ಟು 2 ಚಮಚ
ಎಣ್ಣೆ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. 3 ಕಪ್ ನೀರಿಗೆ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಮತ್ತು ನಿಂಬೆ ರಸ ಹಾಕಿ ಕುದಿಸಬೇಕು.
2. ಹಾಗಲಕಾಯಿಯನ್ನು ಉದ್ದಕ್ಕೆ ಕತ್ತರಿಸಿ, ಅದರ ಒಳಗೆ ಇರುವ ಬೀಜವನ್ನು ತೆಗೆದು ಬಿಸಾಡಬೇಡಿ. ಇದನ್ನು ಕೂಡ ಕುದಿಯುವ ನೀರಿನಲ್ಲಿ 20 ನಿಮಿಷ ಕಾಲ ಹಾಕಿಡಿ. ಈ ರೀತಿ ಮಾಡಿದರೆ ಹಾಗಲಕಾಯಿ ಕಹಿ ಬಿಡುತ್ತದೆ.
3. ಈಗ ಪಾತ್ರೆಯನ್ನು ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಇಂಗು ಮತ್ತು ದೊಡ್ಡ ಜೀರಿಗೆ ಹಾಕಬೇಕು.
4. ಈಗ ಹಾಗಲಕಾಯಿಯ ಒಳಭಾಗವನ್ನು ನೀರಿನಿಂದ ತಗೆದು ಹಿಂಡಿ ನಂತರ ಎಣ್ಣೆಯಲ್ಲಿ ಹಾಕಿ 3-4 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಬೇಕು.
5. ನಂತರ ಕಡಲೆ ಹಿಟ್ಟು ಹಾಕಿ, ಖಾರದ ಪುಡಿ, ಅಮ್ ಚೂರ್ , ಚಿಟಿಕೆಯಷ್ಟು ಉಪ್ಪು ಸೇರಿಸಿ. 5-6 ನಿಮಿಷ ಹುರಿಯಿರಿ. ನಂತರ ಉರಿಯಿಂದ ತೆಗೆದು ಆರಲು ಇಡಿ.
6. ನಂತರ ನೀರಿನಲ್ಲಿ ಹಾಕಿರುವ ಹಾಗಲಕಾಯಿಯ ತುಂಡಿನಿಂದ ನೀರನ್ನು ಹಿಂಡಿ ಅದರಲ್ಲಿ ಈ ಮಸಾಲೆಯನ್ನು ತುಂಬಿ.
7. ನಂತರ ಪಾತ್ರೆಯಲ್ಲಿ 2-3 ಚಮಚ ಎಣ್ಣೆ ಹಾಕಿ ಅದರಲ್ಲಿ ಹಾಗಲಕಾಯಿ ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಿ ಬೇಯಿಸಿ.
ಸೂಚನೆ: ಆಗಾಗ ಸೌಟ್ ನಿಂದ ಆಡಿಸುತ್ತಾ ಇರಬೇಕು.
ಹೀಗೆ ತಯಾರಿಸಿದ ಹಾಗಲಕಾಯಿಯನ್ನು ಬಿಸಿ-ಬಿಸಿ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
