Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರಿಗರಿ ಹಾಗಲಕಾಯಿ ಫ್ರೈ ಮಾಡೋದು ಹೀಗೆ!

ಹಾಗಲಕಾಯಿಯಲ್ಲೂ ಪಲ್ಯ, ಸಾರಿ, ಚಿಪ್ಸ್ ಅಂತ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಕೆಲವೊಂದು ಅಡುಗೆಯನ್ನು ಬಹು ಸುಲಭವಾಗಿ ಮಾಡಬಹುದು. ಆದರೆ ಸ್ವಲ್ಪ ಸಮಯ ಹೆಚ್ಚು ಕಳೆಯಬಹುದಾದರೆ ನಿಮಗೆ ರುಚಿಕರವಾದ ಹಾಗಲಕಾಯಿ ಮಾಡುವ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಎರಡು ಸಾಧಾರಣ ಗಾತ್ರದ ಹಾಗಲಕಾಯಿ ( ತೊಳೆದು ಕತ್ತರಿಸಬೇಕು)
* ಒಂದು ದೊಡ್ಡ ಈರುಳ್ಳಿ (ಸ್ವಲ್ಪ ಉದ್ದದ್ದವಾಗಿ ಕತ್ತಿರಿಸಿರಬೇಕು)
* ರುಚಿಗೆ ತಕ್ಕ ಬೆಲ್ಲ ಅಥವಾ ಸಕ್ಕರೆ
* ಕರಿ ಬೇವಿನ ಎಲೆ
* ಚಿಟಿಕೆಯಷ್ಟು ಇಂಗು
* ಅರ್ಧ ಚಮಚ ಜೀರಿಗೆ
* 1 ಚಮಚ ಸಾಸಿವೆ
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ಮಸಾಲೆ ಪುಡಿಗೆ ಸಾಮಾಗ್ರಿಗಳು:
* 2-3 ಒಣ ಮೆಣಸಿನ ಕಾಯಿ
* 1 ಚಮಚ ಕೊತ್ತಂಬರಿ ಬೀಜ
* 1-2 ಚಮಚದಷ್ಟು ತುರಿದ ಕೊಬ್ಬರಿ
* ಸ್ವಲ್ಪ ಹುಣಸೆಹಣ್ಣು
ಮಸಾಲೆ ತಯಾರಿಸುವ ವಿಧಾನ:
1. ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಹುರಿದು ಪುಡಿ ಮಾಡಿಡಬೇಕು. (ಹುಣಸೆ ಹಣ್ಣನ್ನು ಚೆನ್ನಾಗಿ ಹುರಿದರೆ ಅದು ಉಳಿದ ಸಾಮಾಗ್ರಿಗಳ ಜೊತೆ ಚೆನ್ನಾಗಿ ಪುಡಿಯಾಗುತ್ತದೆ).
ತಯಾರಿಸುವ ವಿಧಾನ:
1. ಹಾಗಲಕಾಯಿ ಸ್ವಲ್ಪ ನೀರು ಹಾಕಿ ಬಿಸಿ ಒಂದು 5 ನಿಮಿಷದವರೆಗೆ ಬಿಸಿಮಾಡಬೇಕು. ನಂತರ ನೀರನ್ನು ಸೋಸಿ, ಹಾಗಲಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ( ಸೋಸಿದ ನೀರನ್ನು ಬಿಸಾಡುವ ಬದಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು).
2. ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ, ಸಾಸಿವೆ, ಕರಿ ಬೇವಿನ ಎಲೆ, ಇಂಗು ಹಾಕಬೇಕು.
3. ನಂತರ ಕತ್ತರಿಸಿದ ಹಾಗಲಕಾಯಿ ಹಾಕಿ ಅರಿಶಿಣ, ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್ ನಿಂದ ತಿರುಗಿಸುತ್ತಾ ಇರಬೇಕು. ಹಾಗಲಕಾಯಿ ಬೆಂದು ಸ್ವಲ್ಪ ಗರಿಗರಿಯಾಗುವವರೆಗೆ ತಿರುಗಿಸುತ್ತಾ ಇರಬೇಕು.
4. ನಂತರ ಅದನ್ನು ಒಂದು ಪಾತ್ರೆಗೆ ಸುರಿಯಬೇಕು.
5. ಈಗ ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೇಯಿಸಿದ ಹಾಗಲಕಾಯಿ ಕಾಯಿ ಹಾಕಿ ಮಸಾಲೆ ಪುಡಿ, ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬೇಕಿದ್ದರೆ ಸ್ವಲ್ಪ ಎಣ್ಣೆ ಸೇರಿಸಬಹುದು. ನಂತರ ಒಂದು 5 ನಿಮಿಷ ಬೇಯಿಸಿ. ಅಡಿ ಹಿಡಿಯಲು ಬಿಡದಂತೆ ನೋಡಿಕೊಳ್ಳಿ.
6. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಹಾಗಲಕಾಯಿ ಫ್ರೈ ರೆಡಿ.
ಇದನ್ನು ಬಿಸಿಯಾದ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.
ಇದನ್ನು ಮಾರನೇ ದಿನಕ್ಕೆ ಇಟ್ಟರೆ ಸ್ವಲ್ಪ ಕಹಿ ಹೆಚ್ಚಾಗುವುದು. ಹಾಗಲಕಾಯಿ ಪ್ರಿಯರು ಇದನ್ನು ಎರಡರಿಂದ ಮೂರು ದಿನ ಇಟ್ಟು ದಿನ ಇಡಬಹುದು.



Click it and Unblock the Notifications
