Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚೆನ್ನಾ ಮಸಾಲಾದ ರುಚಿ ಸವಿಯೋಣ ಬಾರಾ
ಚೆನ್ನಾ ಮಸಾಲಾ ಪುಡಿಯನ್ನು ಮನೆಯಲ್ಲೇ ತಯಾರಿಸುವುದರಿಂದ ರುಚಿ, ಶುಚಿ ಹಾಗೂ ಸ್ವಾದಿಷ್ಟವಾಗಿರುತ್ತದೆ.
- ಸುನೀತಾ ಅನಂತರಾಮು
ಚೆನ್ನಾ ಮಸಾಲಾ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು :
- ಒಣ ಮೆಣಸಿನ ಕಾಯಿ : 30 ಗ್ರಾಂ
- ಕೊತ್ತಂಬರಿ ಬೀಜ : 20 ಗ್ರಾಂ
- ಒಣ ಮಾವಿನ ಚಟ್ಟು : 4ರಿಂದ 5 ಚೂರು
- ಮೆಣಸು : ಅರ್ಧ ಟೀ ಚಮಚ
- ಜೀರಿಗೆ : 2 ಟೀ ಚಮಚ
- ಮೆಂತ್ಯ : ಅರ್ಧ ಟೀ ಚಮಚ
- ಒಣ ಶುಂಠಿ : ಸಣ್ಣ ತುಂಡು
- ಜಾಯಿ ಕಾಯಿ : 1
- ಜಾಪತ್ರೆ : 2
- ಚಕ್ಕೆ : ಬೆರಳುದ್ದ
- ಲವಂಗ : 3-4
- ಸಾಸಿವೆ : ಅರ್ಧ ಟೀ ಚಮಚ
- ಎಣ್ಣೆ : 1 ಒಗ್ಗರಣೆಯಷ್ಟು
- ತುಪ್ಪ : 1 ಟೀ ಚಮಚ
ಮಾಡುವ ವಿಧಾನ :
ಕಾದ ಬಾಣಲೆಗೆ ಮೆಣಸಿನ ಕಾಯಿ, ಕೊತ್ತಂಬರಿ ಬೀಜ ಹಾಕಿ ಹದವಾಗಿ ಹುರಿಯಿರಿ. ಈಗ ಒಣ ಮಾವಿನ ಚಟ್ಟು, ಮೆಣಸು, ಜೀರಿಗೆ, ಮೆಂತ್ಯ, ಒನಶುಂಠಿ, ಜಾಯಿಕಾಯಿ, ಜಾಪತ್ರೆ, ಚಕ್ಕೆ, ಲವಂಗ, ಸಾಸಿವೆ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಈಗ ತಣ್ಣಗಾಗಲು ಸ್ವಲ್ಪ ಸಮಯ ಬಿಟ್ಟು ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಅಷ್ಟೆ ನಿಮ್ಮ ನೆಚ್ಚಿನ ಚೆನ್ನಾ ಮಸಾಲಾ ಪುಡಿ ರೆಡಿ.
***
ಚೆನ್ನಾ ಮಸಾಲ
ಸಂಜೆ ಟೀವಿ ನೋಡುತ್ತಾ ಬಾಯಿ ಚಪ್ಪರಿಸಲು ಚೆನ್ನಾ ಮಸಾಲ ಒಳ್ಳೆಯ ಸಾಥ್ ನೀಡುತ್ತದೆ. ಚಪಾತಿ ಮತ್ತು ಪರೋಟಕ್ಕೂ ಚೆನ್ನಾ ಮಸಾಲ ಚೆನ್ನಾಗಿರುತ್ತದೆ.
ಬೇಕಾದ ಪದಾರ್ಥಗಳು :
- ಕಾಬೂಲ್ ಕಡಲೆ : 1 ಬಟ್ಟಲು
- ಈರುಳ್ಳಿ : 2
- ಆಲೂಗಡ್ಡೆ : 2
- ಟೊಮೆಟೊ : 2
- ತುಪ್ಪ : 2 ಚಮಚ
- ಉಪ್ಪು : ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಕಾಬೂಲ್ ಕಡಲೆಯನ್ನು 7-8 ಗಂಟೆಗಳ ಕಾಲ ನೆನೆಹಾಕಿ. ಇದಕ್ಕೆ ಎರಡು ಚಿಟಿಕೆ ಅಡುಗೆ ಸೋಡ ಹಾಕಿ ಬೇಯಿಸಿ. ಸಿಪ್ಪೆ ತೆಗೆದ ಆಲೂಗೆಡ್ಡೆ ಬೇಯಿಸಿ.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಕಾದ ಬಾಣಲೆಗೆ ತುಪ್ಪ ಹಾಕಿ ಸಾಸಿವೆ ಸಿಡಿಸಿ. ಈಗ ಹೆಚ್ಚಿಟ್ಟಿರುವ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿದ ನಂತರ ಆಲೂಗೆಡ್ಡೆ, ಟೊಮೆಟೊ, ಬೇಯಿಸಿದ ಕಡಲೆ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಈಗ ಚೆನ್ನಾ ಮಸಾಲಾ ಪುಡಿ, ಉಪ್ಪು ಹಾಕಿ 5 ನಿಮಿಷಗಳವರೆಗೆ ತಳಹತ್ತದಂತೆ ತಿರುವುತ್ತಿರಿ.
ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಒಣ ಮೆಣಸಿನಕಾಯಿ, ನಿಂಬೆ ಹಣ್ಣು, ವೃತ್ತಾಕಾರದಲ್ಲಿ ಕತ್ತರಿಸಿದ ಟೊಮೆಟೊ ಬಿಲ್ಲೆಯನ್ನಿಟ್ಟು ಅಲಂಕರಿಸಿ.



Click it and Unblock the Notifications
