Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಎರಡು ಪ್ರಕಾರದ ಸಿಹಿ ಅಡಿಕೆ ಪುಡಿ

ಮಸಾಲ ಅಡಿಕೆ ಪುಡಿ
ಬೇಕಾದ ಪದಾರ್ಥಗಳು:
ಚಿಕಣಿ ಅಡಿಕೆ (ಎಳೆ ಅಡಿಕೆ ಬೇಯಿಸಿ, ಒಣಗಿಸಿರುವುದು) ಪುಡಿ - 300 ಗ್ರಾಂ
ಲವಂಗ - 8-10
ಏಲಕ್ಕಿ - 8-10
ಜಾಪತ್ರೆ ಪುಡಿ - 1/4 ಚಮಚ
ತುಪ್ಪ- 2 ಚಮಚ
ಒಣ ಕೊಬ್ಬರಿ ತುರಿ - 1/2 ಬಟ್ಟಲು
ಪಚ್ಚಕರ್ಪೂರದ ಪುಡಿ - 1/2 ಚಮಚ
ಇಷ್ಟವಾಗುವುದಾದರೆ ಈ ಕೆಳಗಿನ ಸಾಮಾಗ್ರಿಗಳನ್ನು ಬಳಸಬಹುದು:
ಡೈಮಂಡ್ ಸಕ್ಕರೆ - 25 ಗ್ರಾಂ
ಸೋಂಪು ಬೀಜಗಳು - 25 ಗ್ರಾಂ
ಕಲ್ಲಂಗಡಿ ಬೀಜಗಳು - 25 ಗ್ರಾಂ
ಮಾಡುವ ವಿಧಾನ : ಮೊದಲು ಅಡಿಕೆ ಪುಡಿ, ಲವಂಗ, ಜಾಪತ್ರೆ, ಏಲಕ್ಕಿ ಇವುಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಹುರಿದಿಟ್ಟ ಲವಂಗ, ಜಾಪತ್ರೆ, ಪಚ್ಚಕರ್ಪೂರದ ಪುಡಿಯನ್ನು, ಏಲಕ್ಕಿಗಳನ್ನು ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಅಡಿಕೆ ಪುಡಿಯನ್ನು ಹಾಕಿ ಚೆನ್ನಾಗಿ ಘಮಬರುವವರೆಗೆ ಹುರಿಯಿರಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಮೊದಲು ಮಾಡಿಟ್ಟಿರುವ ಮಿಶ್ರಣವನ್ನು, ಒಣ ಕೊಬ್ಬರಿ ತುರಿಯನ್ನು ಸೇರಿಸಿ,ಚೆನ್ನಾಗಿ ಕಲೆಸಿ, ಆರಲು ಬಿಡಿ. ತಣ್ಣಗಾದ ನಂತರ ಡಬ್ಬಿಯಲ್ಲಿ ಹಾಕಿಡಿ, ಬಹಳ ದಿನಗಳವರೆಗು ಕೆಡದೆ ಬಾಳಿಕೆ ಬರುತ್ತದೆ.
ಸಿಹಿ ಅಡಿಕೆ ಪುಡಿ
ಬೇಕಾದ ಪದಾರ್ಥಗಳು:
ಚಿಕಣಿ ಅಡಿಕೆ ಪುಡಿ - 300 ಗ್ರಾಂ
ಲವಂಗ - 8-10
ಏಲಕ್ಕಿ - 8-10
ಸಕ್ಕರೆ - 1/2ಬಟ್ಟಲು
ಒಣ ಕೊಬ್ಬರಿ ತುರಿ - 1/2 ಬಟ್ಟಲು
ಪಚ್ಚಕರ್ಪೂರದ ಪುಡಿ - 1/2 ಚಮಚ
ಡೈಮಂಡ್ ಸಕ್ಕರೆ - 25 ಗ್ರಾಂ
ಸೋಂಪು ಬೀಜಗಳು - 25 ಗ್ರಾಂ
ಕಲ್ಲಂಗಡಿ ಬೀಜಗಳು - 25 ಗ್ರಾಂ
ಮಾಡುವ ವಿಧಾನ : ಸಿಹಿ ಅಡಿಕೆ ಪುಡಿಯನ್ನು 2 ವಿಧಾನಗಳಲ್ಲಿ ಮಾಡಬಹುದು. ಒಂದು ಸ್ವಲ್ಪ ಮೆತ್ತಗೆ ಇರುತ್ತದೆ, ಮತ್ತೊಂದು ಗಟ್ಟಿಯಾಗಿ ಇರುತ್ತದೆ.
ಮೆತ್ತಗಿನ ಸಿಹಿ ಅಡಿಕೆ ಪುಡಿ
ಸಾಮಾನ್ಯವಾಗಿ ಮೆತ್ತಗಿನ ಸಿಹಿ ಅಡಿಕೆ ಪುಡಿ ಮಾಡಲು ಹಾಲನ್ನು ಬಳಸುತ್ತಾರೆ. ಮೊದಲು ಅಡಿಕೆ ಪುಡಿಯನ್ನು ಹಾಲಿನಲ್ಲಿ ಬೇಯಿಸಿಕೊಳ್ಳಬೇಕು. ಅಡಿಕೆ ಸ್ವಲ್ಪ ಮೆತ್ತಗಾದ ನಂತರ, ಅದನ್ನು ಹಾಲಿನ ಪಾತ್ರೆಯಿಂದ ಹಿಂಡಿ ತೆಗೆದುಕೊಳ್ಳಬೇಕು. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಹಾಲಿನಿಂದ ಹಿಂಡಿ ತೆಗೆದ ಅಡಿಕೆ ಪುಡಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಲವಂಗ, ಏಲಕ್ಕಿಗಳನ್ನು ಪ್ರತ್ಯೇಕವಾಗಿ ಹುರಿದುಕೊಂಡು, ಪಚ್ಚಕರ್ಪೂರದ ಪುಡಿ ಮತ್ತು ಸಕ್ಕರೆಯ ಜೊತೆ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಈ ಮಿಶ್ರಣವನ್ನು ಹುರಿದಿಟ್ಟ ಅಡಿಕೆ ಪುಡಿಯೊಂದಿಗೆ ಸೇರಿಸಿ, ಚೆನ್ನಾಗಿ ಕಲೆಸಿದ ನಂತರ Diamond ಸಕ್ಕರೆ, ಒಣ ಕೊಬ್ಬರಿ ತುರಿ, ಸೋಂಪು ಬೀಜಗಳು, ಕಲ್ಲಂಗಡಿ ಬೀಜಗಳನ್ನು ಸೇರಿಸಿ, ಆರಲು ಬಿಡಿ. ತಣ್ಣಗಾದ ನಂತರ ಡಬ್ಬಿಯಲ್ಲಿ ಹಾಕಿಡಿ, ಬಹಳದಿನಗಳವರೆಗು ಕೆಡದೆಚೆನ್ನಾಗಿರುತ್ತದೆ.
ಗಟ್ಟಿ ಸಿಹಿ ಅಡಿಕೆ ಪುಡಿ
ಮೊದಲು ಅಡಿಕೆ ಪುಡಿ, ಲವಂಗ, ಏಲಕ್ಕಿ ಇವುಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಹುರಿದಿಟ್ಟ ಲವಂಗ, ಏಲಕ್ಕಿಗಳನ್ನು ಸಕ್ಕರೆ ಮತ್ತು ಪಚ್ಚಕರ್ಪೂರಗಳ ಜೊತೆ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಅಡಿಕೆ ಪುಡಿಯನ್ನು ಹಾಕಿ ಚೆನ್ನಾಗಿ ಘಮಬರುವವರೆಗು ಹುರಿಯಿರಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಮೊದಲು ಮಾಡಿಟ್ಟಿರುವ ಮಿಶ್ರಣವನ್ನು, ಡೈಮಂಡ್ ಸಕ್ಕರೆ, ಒಣ ಕೊಬ್ಬರಿ ತುರಿ, ಸೋಂಪು ಬೀಜಗಳು, ಕಲ್ಲಂಗಡಿ ಬೀಜಗಳನ್ನು ಸೇರಿಸಿ, ಕಲೆಸಿ, ಆರಲು ಬಿಡಿ. ತಣ್ಣಗಾದ ನಂತರ ಡಬ್ಬಿಯಲ್ಲಿ ಹಾಕಿಡಿ, ಬಹಳ ದಿನಗಳವರೆಗು ಕೆಡದೆ ಚೆನ್ನಾಗಿರುತ್ತದೆ.
ನೆನಪಿಡಬೇಕಾದ ಅಂಶ : ಜಾಸ್ತಿ ಪ್ರಮಾಣದಲ್ಲಿ ಅಡಿಕೆ ಪುಡಿಯನ್ನು ಸೇವಿಸಬೇಡಿ, ಇದರಿಂದ ಕಫ ಆಗುತ್ತದೆ. ಅಡಕೆ ಪುಡಿಯನ್ನು ಯಾವಾಗಲೂ ವೀಳ್ಯದ ಎಲೆ ಜೊತೆಗೆ ಸೇವಿಸಿದರೆ ಆರೋಗ್ಯಕ್ಕೂ ಉತ್ತಮ.



Click it and Unblock the Notifications
