Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸಿಹಿ ಅಡಿಕೆಪುಡಿ ಮಾಡುವ ಮೂರು ಬಗೆ

ವಿಧಾನ 1: ಅಡಿಕೆ ಹಸುರಿದ್ದಾಗಲೆ ಮರದಿಂದ ಗೊನೆಯನ್ನು ಬೇರ್ಪಡಿಸಿಕೊಳ್ಳಬೇಕು. ನಂತರ ಸಿಪ್ಪೆಯನ್ನು ಬೇರ್ಪಡಿಸಿ ಇಡಿ ಅಡಿಕೆಯನ್ನು ಪಾತ್ರೆಯೊಂದರಲ್ಲಿ ಹಾಕಿ ನೀರಿನಲ್ಲಿ ಮುಳುಗಿಸಿ ಎರಡು ಅಥವಾ ಮೂರುದಿನಗಳ ಕಾಲ ಇಡಬೇಕು. ದಿನಕ್ಕೊಮ್ಮೆ ನೀರನ್ನು ಬದಲಾಯಿಸಬೇಕು. ಇದರಿಂದಾಗಿ ಅಡಿಕೆಯಲ್ಲಿನ ಚೊಗರು ಅಂಶ ಮಾಯವಾಗುತ್ತದೆ.
ಆನಂತರ ಬಿಸಿಲಿನಲ್ಲಿ 7 ದಿವಸಗಳ ಕಾಲ ಒಣಗಿಸಬೇಕು. ಒಣಗಿದ ಇಡಿ ಅಡಿಕೆ ಚೊಗರುರಹಿತವಾಗಿ ತಿನ್ನಲು ಸಿದ್ದ. ಆವಾಗ ಅದನ್ನು ಒರಳಿನಲ್ಲಿ ಅಥವಾ ಮಿಕ್ಸರಿನಲ್ಲಿ ಹಾಕಿ ಪುಡಿಮಾಡಿ ನಂತರ ಅದಕ್ಕೆ ಕೊಬ್ಬರಿ ತುರಿ, ಚೀನಿ ಬೀಜ, ಕಲ್ಲುಸಕ್ಕರೆ, ಬಡೆಸೋಪು ಮುಂತಾದವುಗಳನ್ನು ಬೆರಸಿದರೆ ಸ್ವಾದಿಷ್ಟ ಸಿಹಿ ಅಡಿಕೆ ಪುಡಿ ಮೆಲ್ಲಲು ಸಿದ್ದ. ಹೀಗೆ ತಯಾರು ಮಾಡಿದ ಅಡಿಕೆಯ ಬಣ್ಣವೂ ಕಂದುಬಣ್ಣದ್ದಾಗಿರುತ್ತದೆ.
ವಿಧಾನ 2 : ಅಡಿಕೆಯನ್ನು ಸಿಪ್ಪೆಯಿಂದ ಬೇರ್ಪಡಿಸಿಕೊಂಡನಂತರ ನೀರಿನಲ್ಲಿ ಹಾಕಿ ಬೇಯಿಸಬೇಕು. ಸಿಪ್ಪೆಯಿಲ್ಲದ ಅಡಿಕೆಯ ಬಿಳಿದಾದ ಕಣ್ಣು ಉಗುಳಿದ ನಂತರ ಅಡಿಕೆ ಬೆಂದಂತೆ. ಹೀಗೆ ಬೆಂದ ಅಡಿಕೆಯನ್ನು 7 ದಿವಸಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಕುಟ್ಟಿ ಅಥವಾ ಮಿಕ್ಸರಿನಲ್ಲಿ ಪುಡಿಮಾಡಿ ಸಕಲಸಾಂಬಾರ್ ಬೆರೆಸಿದರೆ ಸಿಹಿ ಅಡಿಕೆ ರೆಡಿ. ಇದೂ ಕೂಡ ಮಾರುಕಟ್ಟೆಯಲ್ಲಿ ದೊರಕುವಂತೆ ಡಾಳಾದ ಕೆಂಪುಬಣ್ಣ ಬರುವುದಿಲ್ಲ. ಡಾಳಾದ ಕೆಂಪುಬಣ್ಣ ಬರಲು ಅಡಿಕೆಬೇಯಿಸುವಾಗ ಸಿದ್ಧ ಚೊಗರನ್ನು ಹಾಕಬೇಕಾಗುತ್ತದೆ.
ವಿಧಾನ 3 : ಮಾರುಕಟ್ಟೆಯಲ್ಲಿ ಸಿಗುವ ಇಡೀ ಕೆಂಪು ಅಡಿಕೆಯನ್ನು ಕೊಂಡು ತಂದು ಅದನ್ನು ಮಿಕ್ಸರ್ರಿಗೆ ಹಾಕಿ ಪುಡಿ ಮಾಡಿ ಸಕಲಸಾಂಬಾರ್(ಕಲ್ಲುಸಕ್ಕರೆ, ಕೊಬ್ಬರಿ,ಮುಂತಾದವುಗಳು) ಬೆರೆಸಿದರೆ ಸಿಹಿ ಅಡಿಕೆ ಪುಡಿ ಸಿದ್ಧ. ಆದರೆ ಇದು ಸ್ವಲ್ಪ ಚೊಗರು ಇರುತ್ತದೆ.
ಇನ್ನು ಸಿಹಿ ಅಡಿಕೆಪುಡಿ ಮಾರುಕಟ್ಟೆ ಮಾಡಬಯಸುವವರು ಕೊಬ್ಬರಿ ತುರಿಯನ್ನು ಮಿಕ್ಸ್ ಮಾಡಬಾರದು. ಆವಾಗ ಅದು ಹೆಚ್ಚಿನ ಕಾಲ ಇಡಲು ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಈಗ ದೊರಕುವ ಎಲ್ಲಾ ಸಿಹಿ ಅಡಿಕೆ ಪುಡಿ ಕಂದುಬಣ್ಣದ್ದಾಗಿದ್ದು ಚೊಗರು ಸಹಿತವಾಗಿರುತ್ತದೆ. ಚೊಗರು ರಹಿತ ಸಿಹಿ ಅಡಿಕೆ ಅಗಿಯಲು ಚೆನ್ನಾಗಿರುತ್ತದೆ.
(ಮೇಲಿನ ಪದ್ದತಿಗಳು ನಮ್ಮ ಬೆಳೆಗಾರರು ಅನುಸರಿಸುವ ಪದ್ದತಿ. ಸಿಹಿ ಅಡಿಕೆ ಕಂಪನಿಗಳು ಯಾವ ವಿಧಾನ ಅನುಸರಿಸುತ್ತವೋ ತಿಳಿದಿಲ್ಲ)



Click it and Unblock the Notifications
