Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬದನೆ ಜೊತೆ ಖಾರಾ ಖಾರಾ ಮಿರ್ಚಿ ಪಚಡಿ

ಪಚಡಿಗೆ ಬೇಕಾಗುವ ಪದಾರ್ಥಗಳು:
* ಬದನೆಕಾಯಿ
* ಹಸಿರು ಮೆಣಸಿನಕಾಯಿ 4
* ಬೆಳ್ಳುಳ್ಳಿ 6 ಎಸಳು
* ಗರಂ ಮಸಾಲ
* ಉಪ್ಪು, ಎಣ್ಣೆ, ನಿಂಬೆರಸ
ಪಚಡಿ ತಯಾರಿಸುವ ವಿಧಾನ:
* ಸ್ವಲ್ಪ ಹಣ್ಣಾಗಿರುವ ಬದನೆಕಾಯಿಯನ್ನು ಆರಿಸಿಕೊಳ್ಳಬೇಕು.
* ಬದನೆಕಾಯನ್ನು ಮಧ್ಯೆ ಸೀಳಿ ಅದರಲ್ಲಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳನ್ನು ಸೇರಿಸಬೇಕು. (ತೊಟ್ಟನ್ನು ಮುರಿಯಬಾರದು)
* ಈಗ ಕೆಂಡದ ಸೌಲಭ್ಯವಿಲ್ಲದಿರುವುದರಿಂದ ಸ್ಟೌವ್ ಮೇಲೆ ಕಡಿಮೆ ಉರಿಯಲ್ಲಿ ಬದನೆ ಮೆತ್ತಗಾಗುವವರೆಗೂ ಸುಡಬೇಕು.
* ನಂತರ ಬದನೆಕಾಯಿಯ ಸಿಪ್ಪೆಯನ್ನು ಬಿಡಿಸಿ ತೊಟ್ಟನ್ನು ತೆಗೆಯಬೇಕು.
* ಈಗ ಸುಟ್ಟ ಬದನೆ ಕಾಯಿ, ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಹಿಸುಕಿಡಬೇಕು.
* ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ ಅದರಲ್ಲಿ ಈ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಬೇಕು.
* ಸ್ವಲ್ಪ ಗರಂ ಮಸಾಲೆ ಅಥವಾ ಕೆಂಪು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದರೆ ಸುಟ್ಟ ಬದನೆ ಮೆಣಸಿನ ಪಚಡಿ ತಿನ್ನಲು ಸಿದ್ಧ. ಕೊನೆಯಲ್ಲಿ ಇದರ ಮೇಲೆ ನಿಂಬೆರಸವನ್ನು ಹಿಂಡಿದರೆ ರುಚಿ ಹೆಚ್ಚು.



Click it and Unblock the Notifications
