Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಪಾತಿಗೆ ಚೆಂದ ಟೊಮೆಟೊ-ಗೋಡಂಬಿ ಕರಿ

ಟೊಮೆಟೊ-ಗೋಡಂಬಿ ಕರಿಗೆ ಏನೇನು ಬೇಕು?: 1/2 ಕೆಜಿ ಟೊಮೆಟೊ (ಕತ್ತರಿಸಿರಬೇಕು), 2 ಚಮಚ ತಾಜಾ ಶುಂಠಿ ಪೇಸ್ಟ್, 1 ಏಲಕ್ಕಿ, 1 ತುಂಡು ಚೆಕ್ಕೆ, 1 ಲವಂಗ, 1 ಕಪ್ ಗೋಡಂಬಿ, 1/2 ಕಪ್ ತೆಂಗಿನ ತುರಿ, 1 ಚಮಚ ಗರಂ ಮಸಾಲ ಪುಡಿ, 1 ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಸಕ್ಕರೆ, ಸಾಸಿವೆ, 1 ಚಮಚ ಜೀರಿಗೆ, ಎಣ್ಣೆ
ಟೊಮೆಟೊ ಗೋಡಂಬಿ ಕರಿ ಮಾಡುವ ವಿಧಾನ:
* ಸ್ವಲ್ಪ ಟೊಮೆಟೊವನ್ನು ಮಸಾಲೆಗೆ, ಇನ್ನೂ ಸ್ವಲ್ಪ ಹುರಿಯುವುದಕ್ಕೆ ಇಟ್ಟಿರಬೇಕು. ಮಿಕ್ಸಿ ಬಟ್ಟಲಿಗೆ ಮಸಾಲೆಗೆಂದು ಟೊಮೆಟೊ, ಶುಂಠಿ ಪೇಸ್ಟ್, ಏಲಕ್ಕಿ, ಚೆಕ್ಕೆ, ಲವಂಗ, 3-4 ಗೋಡಂಬಿ, ತೆಂಗಿನ ತುರಿ ಹಾಕಿಕೊಂಡು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ ಮತ್ತು ಜೀರಿಗೆಯನ್ನು ಹುರಿದುಕೊಳ್ಳಬೇಕು.
* ಸಾಸಿವೆ, ಜೀರಿಗೆಯನ್ನು ಹುರಿದುಕೊಂಡ ನಂತರ ರುಬ್ಬಿಕೊಂಡ ಮಿಶ್ರಣವನ್ನು ಅದಕ್ಕೆ ಹಾಕಿ ಸ್ವಲ್ಪ ಸಕ್ಕರೆ ಬೆರೆಸಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆ ಬೇಯುವವರೆಗೂ ಸಣ್ಣ ಉರಿಯಲ್ಲಿ ಚೆನ್ನಾಗಿ ತಿರುಗಿಸಬೇಕು.
* ಬೇಯುತ್ತಿರುವ ಮಿಶ್ರಣಕ್ಕೆ ಗರಂ ಮಸಾಲೆ ಪುಡಿ, ಮತ್ತು ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಬೇಕು. ಕೊನೆಗೆ ಕತ್ತರಿಸಿದ ಟೊಮೆಟೊ ಮತ್ತು ಚಿಕ್ಕ ಗೋಡಂಬಿ ಚೂರುಗಳನ್ನು ಹಾಕಿ ಟೊಮೆಟೊ ಕರಗುವ ತನಕ ಬೇಯಿಸಿಬಿಟ್ಟರೆ ಟೊಮೆಟೊ ಗೋಡಂಬಿ ಕರಿ ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications
