Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಸೊಗಸಾದ ಬಾಳೆದಿಂಡಿನ ಪಲ್ಯ

ಪದಾರ್ಥಗಳು :ಸುಮಾರು ಒಂದು ಅಡಿ ಉದ್ದದಷ್ಟು ಎಳೆ ಬಾಳೆದಿಂಡು. ಅರ್ಧ ಲೋಟ ಹೆಸರು ಬೇಳೆ. 4 ಹಸಿಮೆಣಸಿನಕಾಯಿ. ಸ್ವಲ್ಪ ಸಕ್ಕರೆ. ತೆಳ್ಳಗಿನ ಮಜ್ಜಿಗೆ. ಉಪ್ಪು ; ಒಗ್ಗರಣೆಗೆ: ಸಾಸಿವೆ, ಜೀರಿಗೆ, ಚಮಚದಷ್ಟು ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸಿನಕಾಯಿ ಚೂರುಗಳು, ಚೂರು ಇಂಗು, ಕರಿಬೇವಿನ ಸೊಪ್ಪು.
ವಿಧಾನ:ಬಾಳೆದಿಂಡನ್ನು ಸಣ್ಣಗೆ ಹೆಚ್ಚಿ ಕೊಚ್ಚಿ ಮಜ್ಜಿಗೆಯಲ್ಲಿ ನೆನೆ ಇಡಬೇಕು. ಹೆಸರು ಬೇಳೆಯನ್ನು ಪ್ರತ್ಯೇಕವಾಗಿ ಸುಮಾರು ಒಂದು ಗಂಟೆ ಕಾಲ ನೆನೆಸಬೇಕು. ಬೇಳೆ ನೆನೆದ ನಂತರ ನೀರು ಬಸಿದು ಇಟ್ಟುಕೊಳ್ಳಬೇಕು. ನಾನ್ ಸ್ಟಿಕಿ ತವ ಅಥವಾ ಬಾಣಲೆಗೆ ಅಂದಾಜುನೋಡಿಕೊಂಡು ಎಣ್ಣೆ ಹಾಕಿ ಒಗ್ಗರಣೆಗೆ ರೆಡಿ ಮಾಡಿಕೋಬೇಕು. ಸಾಸಿವೆ, ಕರಿಬೇವು , ಉದ್ದು, ಹಸಿಮೆಣಸು, ಕಡಲೆ ಬೇಳೆಗಳನ್ನು ಹಾಕಿ ಬಾಡಿಸಿರಿ. ಆನಂತರ ಹೆಸರುಬೇಳೆ ಹಾಗೂ ಹೆಚ್ಚಿಕೊಂಡಿರುವ ದಿಂಡನ್ನು ಹಾಕಿ ಚೆನ್ನಾಗಿ ಬಾಡಿಸಿರಿ. ಒಂದು ಲೋಟದಷ್ಟು ನೀರು, ಸಕ್ಕರೆ, ಉಪ್ಪು, ಇಂಗು ಹಾಕಿ ಬೇಯಲು ಬಿಡಿ. ಕ್ರಮೇಣ ನೀರು ಇಂಗಿ ಪುಡಿ ಪುಡಿ ಪಲ್ಯದ ಆಕಾರಕ್ಕೆ ತಿರುಗುವವರೆಗೆ ಬೇಯಲಿ. ಊಟಕ್ಕೆ ಕುಳಿತುಕೊಳ್ಳುವ ಮುನ್ನ ಈ ಪಲ್ಯ ಮಾಡಿದರೆ ಸರಿ. ಏಕೆಂದರೆ ಬಾಳೆದಿಂಡಿನ ಪಲ್ಯವನ್ನು ಬಿಸಿಬಿಸಿ ತಿಂದರೆ ಚೆನ್ನಾಗಿರುತ್ತದೆ. ಆರಿದರೆ ತಿನ್ನುವ ಮಜ ಕಡಿಮೆ.
ಈ ಹಿಂದೆ ನಮ್ಮಲ್ಲಿ ಬಾಳೆ ದಿಂಡಿನ ಗೊಜ್ಜು ಮಾಡುವ ಕ್ರಮ ಪ್ರಕಟಿಸಲಾಗಿತ್ತು. ಅದನ್ನೂ ಓದಿ, ಅದನ್ನೂ ಮಾಡಿ .
( ದಟ್ಸ್ ಕನ್ನಡ ಅಡುಗೆ ಶಾಲೆ)



Click it and Unblock the Notifications
