Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟೊಮೆಟೋ ಸೌತೆಕಾಯಿ ಸಲಾಡ್

ಅಂದ ಹಾಗೆ ಇದು ಮಂಗಳೂರಿನ ತರಾವಳಿ ಸೌತೆ ಕಾಯಿಯ ಸಲಾಡ್ ಅಲ್ಲ. ಮುಳ್ಳು ಸೌತೆಕಾಯಿ ಸಲಾಡ್. ಮಂಗಳೂರು ಸೌತೆ ಕಾಯಿಯಲ್ಲಿ ಸಲಾಡ್ ಮಾಡಲಾಗದು ಎಂದಲ್ಲ. ಅದು ಎಳೆ ಸೌತೆಯಾಗಿದ್ದರೆ ಸರಿ. ಆದರೆ ಅದು ಕಹಿ ಸೌತೆಯಾ ಅಂತ ಕನ್ಫರ್ಮ್ ಮಾಡಿಕೊಳ್ಳಬೇಕು.
ನಿಮ್ಮ ಟ್ರೇಯಲ್ಲಿ ಈ ಎಲ್ಲಾ ಸಾಮಾನುಗಳಿರಬೇಕು
ಒಂದು ಸೌತೇಕಾಯಿ ನೀಟಾಗಿ ತೊಳೆದು ಒರೆಸಿಟ್ಟುಕೊಳ್ಳಿ.
ಜೊತೆಗಿರಲಿ ಕಾಲು ಕೆಜಿ ಟೊಮೆಟೋ
ಒಂದು ನಿಂಬೆ ಹಣ್ಣು
ಅರ್ಧ ಕಪ್ ಸಕ್ಕರೆ
10-12 ಪುದೀನಾ ಎಲೆ
ಅರ್ಧ ಚಮಚ ಜೀರಿಗೆ.
ರುಚಿಗೆ ತಕ್ಕಷ್ಟು ಉಪ್ಪು
ಪುದೀನಾ ಮತ್ತು ಟೋಮೆಟೋ ಹೋಳು ಮಾಡಿ ಮಿಕ್ಸಿಗೆ ಹಾಕಿ ನುಣ್ಣಗೆ ಅರೆಯಿರಿ. ಇದನ್ನು ಒಂದು ಸ್ಟೀಲ್ ಪಾತ್ರೆಗೆ ಹಾಕಿಡಿ. ಉಪ್ಪು, ಮೆಣಸು ಸಕ್ಕರೆ ಮತ್ತು ಹುರಿದು ಪುಡಿ ಮಾಡಿರುವ ಜೀರಿಗೆ, ಸೇರಿಸಿ ಕುದಿಯಲಿಕ್ಕಿಡಿ. ಕೆಳಗಿಳಿಸಿ ಆರಿದ ನಂತರ ಐಸ್ ಟ್ರೇಗೆ ಸುರಿದು ಫ್ರಿಜ್ನಲ್ಲಿಡಿ.
ಸೌತೆಕಾಯಿ ಸಿಪ್ಪೆ ತೆಗೆದು ತುರಿದಿಡಿ. ಇದರ ಮೇಲೆ ನಿಂಬೆ ಹಣ್ಣು ಹಿಂಡಿಕೊಂಡು ಒಂದು ತಾಸು ಫ್ರಿಜ್ನಲ್ಲಿರಿಸಿ. ಬಡಿಸಲಿಕ್ಕೆ ಮುಂಚೆ ಇದರ ಮೇಲೆ ಉಪ್ಪು ಮತ್ತು ಮೆಣಸು ಮಿಶ್ರಣ ಉದುರಿಸಿ. ಇದನ್ನು ಬಟ್ಟಲಿನಲ್ಲಿ ಬಡಿಸಿದ ಮೇಲೆ ಮೊದಲು ತಯಾರಿಸಿಟ್ಟುಕೊಂಡಿದ್ದ ಟೊಮೆಟೋ ಕ್ಯೂಬ್ಗಳನ್ನು ಬಟ್ಟಲಿನ ಸುತ್ತ ಇಟ್ಟು ಊಟಕ್ಕೆ ಮೊದಲು ಬಡಿಸಿ.



Click it and Unblock the Notifications
