Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಉದರ ನಿಮಿತ್ತಂ ಬಹುಕೃತ ಪಾಕಂ
ಅದೊಂದು ಕಾಲವಿತ್ತು. ನನಗೆ ಅನ್ನ ಸಾರು ಮಾಡುವುದಿರಲಿ ನೀರು ಬಿಸಿ ಮಾಡಲು ಸಹ ಬರುತ್ತಿರಲಿಲ್ಲ! ವಿದ್ಯಾಭ್ಯಾಸದ ಹೆಚ್ಚಿನ ಸಮಯವನ್ನು ಹಾಸ್ಟೆಲ್ ವಾಸದಲ್ಲಿ ಕಳೆದುದರಿಂದಲೊ ಏನೊ, ಮನೆಗೆ ಹೋದಾಗಲೂ ಅಡುಗೆ ಮಾಡುವ ಅವಶ್ಯಕತೆ ಇಲ್ಲದಿದ್ದುದರಿಂದಲೊ ಏನೊ, ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ! ತಿನ್ನಲಿಕ್ಕಾದರೆ ರೆಡಿ ಇದ್ದೇನಲ್ಲ... ದೊಡ್ಡ ಬಟ್ಟಲಮ್ಮ ದೊಡ್ಡ ಬಟ್ಟಲು!
ನನ್ನ ಇಂಜನಿಯರಿಂಗ್ ಶಿಕ್ಷಣ ಮುಗಿದು, ಮದುವೆಯಾದ ಮೇಲೆ ಅಡುಗೆ ಕಲಿಯುವುದು ಅನಿವಾರ್ಯವಾಯಿತು. ಆಗ ಶುರುವಾಯಿತು ನೋಡಿ... "ಕೆಲವಂ ಬಲ್ಲವರಿಂದ ಕಲ್ತು... ಕೆಲವಂ ಶಾಸ್ತ್ರಗಳಮ್ ಓದುತಲಿ... ಕೆಲವಂ ದೂರದರ್ಶವಂ ನೋಡುತಲಿ..." ಅಡುಗೆಮನೆಯಲ್ಲಿ ನನ್ನ ನಿತ್ಯ ಪ್ರಯೋಗಗಳು!! ನನ್ನ ಬಡಪಾಯಿ ಗಂಡ (ತುಂಬ ಪ್ರೀತಿಸ್ತಾರೆ ಕಣ್ರೀ ನನ್ನನ್ನು!) ನನ್ನೀ ಪ್ರಯೋಗಗಳ ಗಿನ್ನಿ ಪಿಗ್ ಎಂದು ಬೇರೆ ಹೇಳಬೇಕಿಲ್ಲ ತಾನೆ?
ನನ್ನ ಪಾಕಪ್ರಾವೀಣ್ಯವನ್ನು ದಾಖಲೆಯಾಗಿರಿಸುವುದಕ್ಕಾಗಿ ನನ್ನ ಪಾಕಕಲಾ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಆ ಚಿತ್ರಗಳದೊಂದು "ಕೊಲಾಜ್" ಮಾಡಿದ್ದೇನೆ. ಅದಕ್ಕೆ "ಉದರ ನಿಮಿತ್ತಂ ಬಹುಕೃತ ಪಾಕಂ" ಎಂಬ ಟೈಟಲ್ ಕೊಟ್ಟು ನಿಮಗೀಗ ಆ ಚಿತ್ರಗಳನ್ನಿಲ್ಲಿ ತೋರಿಸುತ್ತಿದ್ದೇನೆ.
ಹಾಂ! ನನ್ನ ಬ್ಲಾಗ್ ನಲ್ಲಿಯೂ ಕೆಲವು ಪ್ರಯೋಗಗಳ ವಿವರಗಳನ್ನು ಸಚಿತ್ರವಾಗಿ ಕೊಟ್ಟಿದ್ದೇನೆ. ಆಸಕ್ತಿಯಿದ್ದರೆ ಭೇಟಿ ಕೊಡಿ: ಬ್ರಾಹ್ಮಿ ಎಲೆಯ ತಂಬುಳಿಯಿಂದ ಹಿಡಿದು ನಿನ್ನೆ ರಾತ್ರಿ ಮಾಡಿದ ಅಡುಗೆಯವರೆಗೆ ಸಚಿತ್ರ ಲೇಖನಗಳಿವೆ.
ಅರ್ಚನಾ ಹೆಬ್ಬಾರ್, ಬೆಂಗಳೂರು



Click it and Unblock the Notifications
