Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಮ್ಮನೇಲಿ ದಂಟಿನಸೊಪ್ಪಿನ ಪಲ್ಯ

ಬೇಕಾಗುವ ಸಾಮಾನುಗಳು : ನಾಲಕ್ಕು ಕಟ್ಟು ದಂಟಿನ ಸೊಪ್ಪು | ನಾಕಾರು ಹಸಿಮೆಣಸಿನಕಾಯಿ | ಎರಡು ಚಮಚ ಎಳ್ಳು | ಒಂದು ಚಮಚ ಜೀರಿಗೆ | ಉಪ್ಪು | ಬೆಲ್ಲ | ಹುಣಿಸೆಹಣ್ಣು | ಅಡುಗೆ ಎಣ್ಣೆ | ಒಂದು ಈರುಳ್ಳಿ (Optional) | ಹಸಿ ಕೊಬ್ಬರಿ.
ಮಾಡುವ ವಿಧಾನ : ದಂಟಿನಸೊಪ್ಪು ಅಥವಾ ಯಾವುದೇ ಸೊಪ್ಪಾಗಿರಲಿ, ಮಣ್ಣು ಅಂಟಿಕೊಂಡಿರುತ್ತದೆ. ಸೊಪ್ಪನ್ನು ಸಣ್ಣಗೆ ಹೆಚ್ಚಿ ಜಾಲರಿಯಲ್ಲಿ ಹಾಕಿ ಸುರಿಯುವ ನೀರಿನಲ್ಲಿ ಝಳಝಳ ತೊಳೆಯುವುದೇ ದೊಡ್ಡ ಕೆಲಸ. ನಂತರ, ಬಾಣಲೆಯಲ್ಲಿ ಎರಡು ಚಮಚ ಎಳ್ಳು ಮತ್ತು ಜೀರಿಗೆಯನ್ನು ಹಾಕಿ ಡ್ರೈ ಆಗಿ ಹುರಿದಿಟ್ಟುಕೊಳ್ಳಿ.
ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಅದಕ್ಕೆ ಮೆಣಸಿನಕಾಯಿ ಹಾಕಿ ಸಿಡಿದ ನಂತರ ಸೊಪ್ಪನ್ನು ಹಾಕಿ ಬೇಯುವುದಕ್ಕೆ ಬಿಡಿ. ಬಾಣಲೆ ಮುಚ್ಚಳ ಮುಚ್ಚಿಟ್ಟರೆ ಬೇಗ ಬೇಯುತ್ತದೆ. ಮಿಕ್ಸಿಗೆ ಕೊಬ್ಬರಿ, ಹುಣಿಸೆಹಣ್ಣು, (ಈರುಳ್ಳಿ ) ಉಪ್ಪು ಮತ್ತು ಹುರಿದುಕೊಂಡ ಜೀರಿಗೆ, ಎಳ್ಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಚೂರೇ ಚೂರು ನಿರು ಹಾಕಿ ರುಬ್ಬಿಕೊಳ್ಳುವುದು.
ಬೆಂದ ಸೊಪ್ಪಿನ ಪಾತ್ರೆಗೆ ರುಬ್ಬಿದ ಪದಾರ್ಥ ಹಾಕಿ ಚೆನ್ನಾಗಿ ಕಲಸಿ. ನೀರು ಹಾಕಿ ತೆಳ್ಳನೆ ಸೊಪ್ಪಿನ ಕರಿ ಟೈಪ್ ಆಗಬಹುದು ಅಥವಾ ನೀರು ಬೆರೆಸದೆ ಡ್ರೈ ಸೊಪ್ಪಿನ ಪಲ್ಯವನ್ನು ಮಾಡಿಕೊಳ್ಳಬಹುದು. ಹಸುರು ಆಚ್ಛಾದಿತ ಅಡುಗೆಗಳಿಂದ ಕಂಗೊಳಿಸುವ ಡೈನಿಂಗ್ ಟೇಬಲ್ ಎಷ್ಟು ಚೆನ್ನ!



Click it and Unblock the Notifications
