Latest Updates
-
ಇಂದಿನಿಂದ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಸಿಲಿಂಡರಿನ ಆಯಸ್ಸು ತಿಳಿಯುವ ಬಗೆ
ಸುಮಿತ್ರಾ, ಬೆಂಗಳೂರು
ನಿಮ್ಮ ಎಲ್‌ಪಿಜಿ ಸಿಲಿಂಡರ್‌ನ ಕಾಲಾವಧಿ ಅಂದ್ರೆ ಅದರ ಆಯಸ್ಸು(ಗಮನಿಸಿ:ಅಡುಗೆ ಅನಿಲದ ಕಾಲಾವಧಿಯಲ್ಲ) ಯಾವಾಗ ಮುಗಿಯುತ್ತದೆ ಎಂದು ತಿಳಿದುಕೊಳ್ಳುವುದು ಅಷ್ಟು ಕಷ್ಟವಲ್ಲ ಎಂದು ನಮ್ಮ ಪರಿಕರ ವಿಭಾಗದಲ್ಲಿ ಬೆಂಗಳೂರಿನ ಸುಮಿತ್ರಾ ತಿಳಿಸಿದ್ದಾರೆ.
ಕಾಲಾವಧಿ ಮುಗಿದ ಸಿಲಿಂಡರ್‌ಗಳನ್ನು ಬಳಸುವುದು ಜೀವಕ್ಕೇ ಅಪಾಯ. ಈ ವಿಚಾರದಲ್ಲಿ ಗೃಹಿಣಿಯರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ನಿಮ್ಮ ಅಡುಗೆ ಮನೆಯಲ್ಲಿರುವ ಸಿಲಿಂಡರನ್ನು ಯಾವತ್ತಾದರೂ ಒಮ್ಮೆ ಪರೀಕ್ಷಿಸಿ ನೋಡಿದ್ದೀರಾ? ಈ ಬಾರಿ ಅಡುಗೆ ಅನಿಲ ಮಾರಾಟಗಾರರಿಂದ ಸಿಲಿಂಡರನ್ನು ಪಡೆಯ ಬೇಕಾದರೆ ಅದರ ಮೇಲೆ ನಮೂದಿಸಿರುವ ದಿನಾಂಕವನ್ನೊಮ್ಮೆ ಪರೀಕ್ಷಿಸಿ ನೋಡಿ. ಸಿಲಿಂಡರಿನ ಮೂತಿಯ ಬಳಿ ಮೂರು ಹಿಡಿಗಳಿರುತ್ತವಲ್ಲಾ ಅಲ್ಲಿ ದಿನಾಂಕವನ್ನು ಬರೆದಿರುತ್ತಾರೆ.
ಹೀಗೆ ಮಾಡಿ: ಸಿಲಿಂಡರಿನ ಹಿಡಿಯ ಮೇಲೆ ಸಂಕೇತಾಕ್ಷರಗಳಲ್ಲಿ(alpha numeric) A, B,C,D ಮತ್ತು ಎರಡು ಅಂಕೆಯ ಸಂಖ್ಯೆಯೊಂದಿಗೆ ಬರೆದಿರುತ್ತಾರೆ. ಉದಾ: D06 ಎಂದು.
ಎ,ಬಿ,ಸಿ,ಡಿ ಅರ್ಥ ಹೀಗಿದೆ:
A ಅಕ್ಷರವು ಮಾರ್ಚ್ (ಮೊದಲನೆ ತ್ರೈಮಾಸಿಕ)
B ಅಕ್ಷರವು ಜೂನ್(ಎರಡನೆ ತ್ರೈಮಾಸಿಕ)
C ಅಕ್ಷರವು ಸೆಪ್ಟೆಂಬರ್(ಮೂರನೆ ತ್ರೈಮಾಸಿಕ)
D ಅಕ್ಷರವು ಡಿಸೆಂಬರ್(ನಾಲ್ಕನೆ ತ್ರೈಮಾಸಿಕ)
ಸಂಖ್ಯೆಗಳು ಸಿಲಿಂಡರಿನ ಆಯುಸ್ಸನ್ನು ಸೂಚಿಸುತ್ತವೆ:
D06 ಸಂಕೇತಾಕ್ಷರದ ಅರ್ಥ ಹೀಗಿದೆ; 2006ನೇ ವರ್ಷದ ಡಿಸೆಂಬರ್‌ಗೆ ಸಿಲಿಂಡರಿನ ಆಯಸ್ಸು ಮುಗಿಯುತ್ತದೆ ಎಂದು. ಈ ರೀತಿ ಅವಧಿ ಮುಗಿದ ಸಿಲಿಂಡರನ್ನು ನಿಮ್ಮ ಮಾರಾಟಗಾರರಿಂದ ಸ್ವೀಕರಿಸಬೇಡಿ. ಇದನ್ನು ನಿಮ್ಮ ನೆರೆಹೊರೆಯವರಿಗೂ ತಿಳಿಸಿ. ಅಪಾಯ ಎದುರಾಗುವ ಮುಂಚೆ ಉಪಾಯವಾಗಿ ಪಾರಾಗುವುದೇ ಜಾಣತನ ಅಲ್ಲವೇ!?
ಇದರ ಅರ್ಥ ಹೀಗಿದೆ:
"A" ಅಂದ್ರೆ ಮೊದಲ ತ್ರೈಮಾಸಿಕ ಎಂದು ಜನವರಿ ಯಿಂದ ಮಾರ್ಚ್‌ವರೆಗಿನ ಕಾಲಾವಧಿ "07" ಅಂದ್ರೆ 2007ನೇ ವರ್ಷ ಎಂದುಸಿಲಿಂಡರಿನ ಹಿಡಿಯ ಮೇಲೆ ನಮೂದಿಸಿರುವ A-07ನ ಅರ್ಥ, ನೀವು ಬಳಸುತ್ತಿರುವ ಸಿಲಿಂಡರ್‌ನ ಕಾಲಾವಧಿ ಮಾರ್ಚ್ 2007ಕ್ಕೆ ಮುಗಿಯುತ್ತದೆ. ಆನಂತರ ಆ ಸಿಲಿಂಡರನ್ನು ಬಳಸಬೇಡಿ. ಈ ಸಂಕೇತಾಕ್ಷರವನ್ನು ಬಹಳಷ್ಟು ಜನ ಅನಿಲ ಮುಗಿಯುವ ಕಾಲಾವಧಿ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈ ರೀತಿ ಅವಧಿ ಮುಗಿದ ಸಿಲಿಂಡರ್‌ಗಳು ಬಾಂಬ್‌ನಂತೆ ಸಿಡಿದು ಜೀವ ತೆಗೆಯುತ್ತವೆ ಹುಶಾರಾಗಿರಿ!



Click it and Unblock the Notifications
