For Quick Alerts
ALLOW NOTIFICATIONS  
For Daily Alerts

ರೆಸಿಪಿ: ನಿದ್ರೆ ಸಮಸ್ಯೆ ಇರುವವರಿಗೆ ಜಾಯಿಕಾಯಿ ಸಿಪ್ಪೆ ಚಟ್ನಿ ದಿವ್ಯ ಔಷಧ

Posted By:
|

ಭಾರತದ ಆಹಾರ ಕ್ರಮದಲ್ಲಿ ಸಾಂಬಾರ ಪದಾರ್ಥಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲಿ ಜಾಯಿಕಾಯಿ,ಜಾಪತ್ರೆ ಕೂಡ ಒಂದು. ಚಿಕ್ಕ ಮಕ್ಕಳಿಗೆ ಇದನ್ನು ತೇಯ್ದು ನೀಡುವ ಪರಿಪಾಠವಿದೆ. ಇದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಇದಕ್ಕೆ ಪ್ರಮುಖ ಸ್ಥಾನ.

Nutmeg Peel Chatni

ಸಾಮಾನ್ಯವಾಗಿ ಅಂಗಡಿಯಲ್ಲಿ ಒಣಗಿದ ಜಾಯಿಕಾಯಿ ಅಥವಾ ಜಾಪತ್ರೆ ದೊರೆಯುತ್ತದೆ. ಇದನ್ನು ಕಷಾಯಗಳ ತಯಾರಿಕೆಯಲ್ಲಿ,ಸಾಂಬಾರು ಪುಡಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ ನಾವಿಲ್ಲಿ ಈ ಜಾಯಿಕಾಯಿಯ ಮೇಲ್ಬಾಗದ ಸಿಪ್ಪೆಯ ಪ್ರಯೋಜನವನ್ನು ತಿಳಿಸುತ್ತಿದ್ದೇವೆ.
Nutmeg Peel Chatni

ಜಾಯಿಕಾಯಿಯನ್ನು ಕೊಯ್ದು ಸಿಪ್ಪೆಯನ್ನು ಸಾಮಾನ್ಯವಾಗಿ ಹೆಚ್ಚಿನವರು ಎಸೆದು ಬಿಡುತ್ತಾರೆ. ಆದರೆ ಇದರಿಂದ ಚಟ್ನಿ,ತಂಬಳಿ ಉಪ್ಪಿನಕಾಯಿ ಸೇರಿದಂತೆ ಬ್ಯೂಟಿ ಪ್ರೊಡಕ್ಟ್ ಗಳ ತಯಾರಿಕೆಯಲ್ಲೂ ಬಳಸಬಹುದು. ನಿಮ್ಮ ಚರ್ಮದ ಆರೋಗ್ಯಕ್ಕೂ ಇದು ಬಹಳ ಪ್ರಯೋಜನ ನೀಡುತ್ತದೆ. ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳುವುದರಿಂದಾಗಿ ಮುಖದ ಸ್ಕ್ರಬ್ಬಿಂಗ್ ಗೆ ಬಳಸಬಹುದು.
Nutmeg Peel Chatni

ಹಾಗಾದ್ರೆ ಹಸಿಯಾದ ಜಾಯಿಕಾಯಿಯ ಮೇಲ್ಬಾಗದ ಸಿಪ್ಪೆಯಿಂದ ಚಟ್ನಿ ಮಾಡುವುದು ಹೇಗೆ ತಿಳಿದುಕೊಳ್ಳೋಣ.
Nutmeg Peel Chatni
Nutmeg Peel Chatni Recipe/ ಜಾಯಿಕಾಯಿ ಸಿಪ್ಪೆ ಚಟ್ನಿ ರೆಸಿಪಿ
Nutmeg Peel Chatni Recipe/ ಜಾಯಿಕಾಯಿ ಸಿಪ್ಪೆ ಚಟ್ನಿ ರೆಸಿಪಿ
Prep Time
1 Mins
Cook Time
1M
Total Time
2 Mins

Recipe By: Sushma

Recipe Type: chatni

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಜಾಯಿಕಾಯಿ ಸಿಪ್ಪೆ-4

    ತೆಂಗಿನಕಾಯಿ - ಮಧ್ಯಮ ಗಾತ್ರ ಅರ್ಧ ಕಾಯಿ

    ಒಣಮೆಣಸಿನಕಾಯಿ- 8 ರಿಂದ 9

    ಉಪ್ಪು- ರುಚಿಗೆ ತಕ್ಕಷ್ಟು

    ಸಾಸಿವೆಕಾಳು- ಒಂದು ಸ್ಪೂನ್

    ಅಡುಗೆ ಎಣ್ಣೆ - ಎರಡರಿಂದ ಮೂರು ಸ್ಪೂನ್

Red Rice Kanda Poha
How to Prepare
  • ಮಾಡುವ ವಿಧಾನ:

    ಜಾಯಿಕಾಯಿಸಿಪ್ಪೆ,ತೆಂಗಿನಕಾಯಿ ಮತ್ತು ಒಣಮೆಣಸಿನ ಕಾಯಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ.

    ಹುಳಿಯನ್ನು ಹೆಚ್ಚುವರಿ ಹಾಕುವ ಅಗತ್ಯವಿಲ್ಲ.

    ಯಾಕೆಂದರೆ ಈ ಸಿಪ್ಪೆಯಲ್ಲೇ ಸ್ವಲ್ಪ ಹುಳಿ ಮತ್ತು ಒಗರಿನ ಅಂಶವಿರುತ್ತದೆ.

    ನಂತರ ರುಬ್ಬಿದ ಮಿಶ್ರಣಕ್ಕೆ ಅಡುಗೆಎಣ್ಣೆ,ಸಾಸಿವೆಕಾಳು ಹಾಕಿ ಚಟಿಪಟಿ ಮಾಡಿ ಒಣಮೆಣಸು ಹಾಕಿ ಒಗ್ಗರಣೆ ಮಾಡಿದರೆ ಚಟ್ನಿ ರೆಡಿ.

Instructions
  • ದೋಸೆ, ರೊಟ್ಟಿಗೆ ಈ ಚಟ್ನಿಯನ್ನು ಬಳಸಬಹುದು. ಜೀರ್ಣಕ್ರಿಯೆ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ನಿದ್ದೆ ಸಮಸ್ಯೆ ಎದುರಿಸುವವರಿಗೆ ಉತ್ತಮವಾದದ್ದು. ಕೂದಲು,ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ನಾಲಗೆಯ ಅಗ್ರದ ನಿವಾರಣೆ ಮಾಡುತ್ತದೆ.
Nutritional Information
  • ಪೊಟಾಷಿಯಂ - - 350 ಮಿಲಿಗ್ರಾಂ
  • ಪ್ರೊಟೀನ್ - - 6 ಗ್ರಾಂ
  • ಕ್ಯಾಲೊರಿ - - 525
  • ಕೊಬ್ಬಿನಾಂಶ - - 36 ಗ್ರಾಂ
  • ಸೋಡಿಯಂ - - 16ಮಿಲಿಗ್ರಾಂ
[ 5 of 5 - 73 Users]
X
Desktop Bottom Promotion