Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ರೆಸಿಪಿ: ನಿದ್ರೆ ಸಮಸ್ಯೆ ಇರುವವರಿಗೆ ಜಾಯಿಕಾಯಿ ಸಿಪ್ಪೆ ಚಟ್ನಿ ದಿವ್ಯ ಔಷಧ
Recipes
lekhaka-Sushma charhra
Posted By: Sushma Chatra
ಭಾರತದ ಆಹಾರ ಕ್ರಮದಲ್ಲಿ ಸಾಂಬಾರ ಪದಾರ್ಥಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲಿ ಜಾಯಿಕಾಯಿ,ಜಾಪತ್ರೆ ಕೂಡ ಒಂದು. ಚಿಕ್ಕ ಮಕ್ಕಳಿಗೆ ಇದನ್ನು ತೇಯ್ದು ನೀಡುವ ಪರಿಪಾಠವಿದೆ. ಇದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಇದಕ್ಕೆ ಪ್ರಮುಖ ಸ್ಥಾನ.

ಸಾಮಾನ್ಯವಾಗಿ ಅಂಗಡಿಯಲ್ಲಿ ಒಣಗಿದ ಜಾಯಿಕಾಯಿ ಅಥವಾ ಜಾಪತ್ರೆ ದೊರೆಯುತ್ತದೆ. ಇದನ್ನು ಕಷಾಯಗಳ ತಯಾರಿಕೆಯಲ್ಲಿ,ಸಾಂಬಾರು ಪುಡಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ ನಾವಿಲ್ಲಿ ಈ ಜಾಯಿಕಾಯಿಯ ಮೇಲ್ಬಾಗದ ಸಿಪ್ಪೆಯ ಪ್ರಯೋಜನವನ್ನು ತಿಳಿಸುತ್ತಿದ್ದೇವೆ.

ಜಾಯಿಕಾಯಿಯನ್ನು ಕೊಯ್ದು ಸಿಪ್ಪೆಯನ್ನು ಸಾಮಾನ್ಯವಾಗಿ ಹೆಚ್ಚಿನವರು ಎಸೆದು ಬಿಡುತ್ತಾರೆ. ಆದರೆ ಇದರಿಂದ ಚಟ್ನಿ,ತಂಬಳಿ ಉಪ್ಪಿನಕಾಯಿ ಸೇರಿದಂತೆ ಬ್ಯೂಟಿ ಪ್ರೊಡಕ್ಟ್ ಗಳ ತಯಾರಿಕೆಯಲ್ಲೂ ಬಳಸಬಹುದು. ನಿಮ್ಮ ಚರ್ಮದ ಆರೋಗ್ಯಕ್ಕೂ ಇದು ಬಹಳ ಪ್ರಯೋಜನ ನೀಡುತ್ತದೆ. ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳುವುದರಿಂದಾಗಿ ಮುಖದ ಸ್ಕ್ರಬ್ಬಿಂಗ್ ಗೆ ಬಳಸಬಹುದು.

ಹಾಗಾದ್ರೆ ಹಸಿಯಾದ ಜಾಯಿಕಾಯಿಯ ಮೇಲ್ಬಾಗದ ಸಿಪ್ಪೆಯಿಂದ ಚಟ್ನಿ ಮಾಡುವುದು ಹೇಗೆ ತಿಳಿದುಕೊಳ್ಳೋಣ.

Nutmeg Peel Chatni Recipe/
ಜಾಯಿಕಾಯಿ ಸಿಪ್ಪೆ ಚಟ್ನಿ ರೆಸಿಪಿ
Nutmeg Peel Chatni Recipe/
ಜಾಯಿಕಾಯಿ ಸಿಪ್ಪೆ ಚಟ್ನಿ ರೆಸಿಪಿ
Prep Time
1 Mins
Cook Time
1M
Total Time
2 Mins
Recipe By: Sushma
Recipe Type: chatni
Serves: 4
Ingredients
-
ಬೇಕಾಗುವ ಸಾಮಗ್ರಿಗಳು
ಜಾಯಿಕಾಯಿ ಸಿಪ್ಪೆ-4
ತೆಂಗಿನಕಾಯಿ - ಮಧ್ಯಮ ಗಾತ್ರ ಅರ್ಧ ಕಾಯಿ
ಒಣಮೆಣಸಿನಕಾಯಿ- 8 ರಿಂದ 9
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆಕಾಳು- ಒಂದು ಸ್ಪೂನ್
ಅಡುಗೆ ಎಣ್ಣೆ - ಎರಡರಿಂದ ಮೂರು ಸ್ಪೂನ್
How to Prepare
-
ಮಾಡುವ ವಿಧಾನ:
ಜಾಯಿಕಾಯಿಸಿಪ್ಪೆ,ತೆಂಗಿನಕಾಯಿ ಮತ್ತು ಒಣಮೆಣಸಿನ ಕಾಯಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ.
ಹುಳಿಯನ್ನು ಹೆಚ್ಚುವರಿ ಹಾಕುವ ಅಗತ್ಯವಿಲ್ಲ.
ಯಾಕೆಂದರೆ ಈ ಸಿಪ್ಪೆಯಲ್ಲೇ ಸ್ವಲ್ಪ ಹುಳಿ ಮತ್ತು ಒಗರಿನ ಅಂಶವಿರುತ್ತದೆ.
ನಂತರ ರುಬ್ಬಿದ ಮಿಶ್ರಣಕ್ಕೆ ಅಡುಗೆಎಣ್ಣೆ,ಸಾಸಿವೆಕಾಳು ಹಾಕಿ ಚಟಿಪಟಿ ಮಾಡಿ ಒಣಮೆಣಸು ಹಾಕಿ ಒಗ್ಗರಣೆ ಮಾಡಿದರೆ ಚಟ್ನಿ ರೆಡಿ.
Instructions
- ದೋಸೆ, ರೊಟ್ಟಿಗೆ ಈ ಚಟ್ನಿಯನ್ನು ಬಳಸಬಹುದು. ಜೀರ್ಣಕ್ರಿಯೆ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ನಿದ್ದೆ ಸಮಸ್ಯೆ ಎದುರಿಸುವವರಿಗೆ ಉತ್ತಮವಾದದ್ದು. ಕೂದಲು,ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ನಾಲಗೆಯ ಅಗ್ರದ ನಿವಾರಣೆ ಮಾಡುತ್ತದೆ.
Nutritional Information
- ಪೊಟಾಷಿಯಂ - - 350 ಮಿಲಿಗ್ರಾಂ
- ಪ್ರೊಟೀನ್ - - 6 ಗ್ರಾಂ
- ಕ್ಯಾಲೊರಿ - - 525
- ಕೊಬ್ಬಿನಾಂಶ - - 36 ಗ್ರಾಂ
- ಸೋಡಿಯಂ - - 16ಮಿಲಿಗ್ರಾಂ
Comments
[ 5 of 5 - 73 Users]



Click it and Unblock the Notifications