Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕ್ರಿಸ್‌ಮಸ್ ಸ್ಪೆಷಲ್: ಹಂದಿ ಮಾಂಸ ರೆಸಿಪಿ
ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ, ಅಲ್ಲದೆ ಹಬ್ಬವನ್ನು ಮೋಜಿನೊಂದಿಗೆ ಆಚರಿಸುವುದರೊಂದಿಗೆ ರುಚಿಕರ ಮತ್ತು ಸ್ವಾದಿಷ್ಟ ಖಾದ್ಯಗಳೊಂದಿಗೆ ಹಬ್ಬಕ್ಕೆ ಮತ್ತಷ್ಟು ರಂಗೇರಿಸಿ. ಸಾಮಾನ್ಯವಾಗಿ ಕ್ರಿಸ್‌ಮಸ್ ಹಬ್ಬಕ್ಕೆ ಮಾಂಸಹಾರಿ ಅಡುಗೆ ಹೆಚ್ಚು ಚಾಲ್ತಿಯಲ್ಲಿರುತ್ತದೆ, ಇದರಲ್ಲಿ ಹಂದಿ ಮಾಂಸ ಕೂಡ ಒಂದು. ಹಂದಿ ಮಾಂಸದಿಂದ ವಿವಿಧ ಶೈಲಿಯಲ್ಲಿ ವೈವಿಧ್ಯವಾಗಿ ಅಡುಗೆ ಮಾಡಬಹುದು, ಆದರೂ ಭಾರತೀಯ ಶೈಲಿಯು ಪ್ರತಿಯೊಂದು ಖಾದ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಮತ್ತು ಇನ್ನಷ್ಟು ರುಚಿಕರವನ್ನಾಗಿಸುತ್ತದೆ .
ಹಾಗಾಗಿ, ಹಂದಿ ಮಾಂಸದ ವಿಭಿನ್ನ ರೀತಿಯ ನಳಪಾಕವನ್ನು ನಾವಿಂದು ಪ್ರಯತ್ನಿಸೋಣ ಭಾರತೀಯ ಶೈಲಿಯಂತೆ ತಯಾರಿಸಿದ ಕೆಂಪು ಬಣ್ಣದಿಂದ ಕೂಡಿರುವ ಹಂದಿ ಮಾಂಸ ಪದಾರ್ಥವನ್ನು, ಒಲೆಯಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಹಿತಕರ ಹಾಗೂ ಪರಿಮಳಯುಕ್ತ ತೆಂಗಿನ ಹಾಲನ್ನು ಸೇರಿಸಿ. ಖಾರದಿಂದ ಕೂಡಿದ ಹಾಗೂ ಸ್ವಾದಿಷ್ಟ ಸುವಾಸನೆಯುಕ್ತ ಹಾಲಿನ ಮಿಶ್ರಣದ ಪಾಕವು ಹಂದಿ ಮಾಂಸ ಪದಾರ್ಥವನ್ನು ನಿಜವಾಗಿಯೂ ರುಚಿಕಟ್ಟಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಬೇಕಾಗುವ ಸಾಮಾಗ್ರಿಗಳು:
1. ಹಂದಿ ಮಾಂಸ - 1.ಕೆಜಿ
2. ಒಣ ಮೆಣಸಿನಕಾಯಿಗಳು - 10-12
3. ಬಿಸಿ ನೀರು - 11/2 ಕಪ್
4. ಹುಣಸೆ ಹಣ್ಣಿನ ರಸ - 1ಟಿ ಸ್ಪೂನ್
5. ಅರಶಿನ ಪುಡಿ - 1/2 ಟೀ ಸ್ಪೂನ್
6. ಈರುಳ್ಳಿ - 1 ( ದಪ್ಪವಾಗಿ ಕತ್ತರಿಸಿದ್ದು)
7. ಬೆಳ್ಳುಳ್ಳಿ - 5 ಪೀಸ್
8. ಕತ್ತರಿಸಲಾಗಿರುವ ತಾಜಾ ಶುಂಠಿ- 1/2 ಟೀ ಸ್ಪೂನ್
9.ದಾಲ್ಚಿನಿ ಸ್ಟಿಕ್ - 5 ಸೆಂ
10. ಕರಿ ಬೇವು - 10
11. ಮೆಂತ್ಯೆಕಾಳುಗಳು-1/4
12. ದಪ್ಪ ತೆಂಗಿನ ಹಾಲು - 1/2 ಕಪ್
13. ಎಣ್ಣೆ ಅಥವಾ ಕರಗಿಸಲಾಗಿರುವ ತುಪ್ಪ- 1 ಟೀ ಸ್ಪೂನ್
14. ಈರುಳ್ಳಿ- 1 (ಸಣ್ಣ ಆಕಾರದಲ್ಲಿ ಕತ್ತರಿಸಲಾಗಿರುವ)
15. ನಿಂಬೆ ರಸ - 2 ಟೀ ಸ್ಪೂನ್
ಮಾಡುವ ವಿಧಾನ:
1. ಹಂದಿ ಮಾಂಸವನ್ನು 5 ಸೆಂ ನಂತೆ 2 ಭಾಗಗಳಾಗಿ ಕತ್ತರಿಸಿ, ಹಾಗೂ ಅದನ್ನು ಒಂದು ಪಾತ್ರೆಗೆ ಹಾಕಿ.
2. ಒಣ ಮೆಣಸಿನಕಾಯಿ ತೊಟ್ಟುಗಳು ಮತ್ತು ಬೀಜಗಳನ್ನು ಬೇರ್ಪಡಿಸಿ 10 ನಿಮಿಷ ಅರ್ಧ ಬಟ್ಟಲು ಬಿಸಿ ನೀರಿನಲ್ಲಿ ನೆನೆಸಿ.
3. ಉಳಿದಿರುವ ಬಿಸಿ ನೀರಿನಲ್ಲಿ ಹುಣಸೆ ಹಣ್ಣಿನ ರಸವನ್ನು ಕರಗಿಸಿ. ತದನಂತರ ಒಣಮೆಣಸಿನಕಾಯಿಗಳು ಹಾಗೂ ಕರಗಿಸಿರುವ ನೀರನ್ನು ಒಂದು ಪಾತ್ರೆಗೆ ಹಾಕಿ ಅರಿಶಿನ, ದಪ್ಪನಾಗಿ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಮೃದುವಾಗಿ ರುಬ್ಬಿಕೊಳ್ಳಿ.
4. ಮೊದಲೇ ಹೇಳಿರುವಂತೆ ಪಾತ್ರೆಯಲ್ಲಿರುವ ಹಂದಿ ಮಾಂಸಕ್ಕೆ, ದಾಲ್ಚಿನ್ನಿ ಹಾಗೂ ಹುಣಸೆ ಹಣ್ಣಿನ ನೀರನ್ನು ಸೇರಿಸಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ಲಿಂಬೆ ರಸ, ಕರಿಬೇವು, ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ.
5. ಈ ಎಲ್ಲಾ ವಿಧಾನದ ನಂತರ, ಪಾತ್ರೆಯನ್ನು ಒಲೆ ಅಥವಾ ಗ್ಯಾಸ್ ಮೇಲೆ ಇಟ್ಟು ಕಡಿಮೆ ಶಾಖದಿಂದ ಬೇಯಿಸಿ. ಮಾಂಸ ಚೆನ್ನಾಗಿ ಬೆಂದನಂತರ, ತೆಂಗಿನ ಹಾಲನ್ನು ಬೆರೆಸಿ ತದನಂತರ 10 ನಿಮಿಷಗಳ ಕಾಲ ಹಾಗೆಯೇ ಇಡಿ.
6. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪದಿಂದ ಕತ್ತರಿಸಲಾಗಿರುವ ನೀರುಳ್ಳಿ, ಹಾಗೂ ಉಳಿದ ಕರಿಬೇವು ಸೊಪ್ಪು ಮತ್ತು ಮೆಂತ್ಯಕಾಳುಗಳನ್ನು ಚೆನ್ನಾಗಿ ಹುರಿಯಿರಿ.
7. ನೀರುಳ್ಳಿ ಕೆಂಪು ಬಣ್ಣಕ್ಕೆ ಬಂದ ನಂತರ, ಬೇಯುತ್ತಿರುವ ಹಂದಿ ಮಾಂಸವನ್ನು ನಿಲ್ಲಿಸಿ ಹಾಗೂ ಅದಕ್ಕೆ ನಿಂಬೆ ರಸ, ತಾಜಾ ಹಸಿಮೆಣಸುಗಳನ್ನು ಸೇರಿಸಿ ಹಾಗೂ 5 ನಿಮಿಷಗಳ ಕಾಲ ಕಡಿಮೆ ಶಾಖದಿಂದ ಮುಗುಚಿಸಿ.
8. ಅನ್ನದ ಜೊತೆ ರುಚಿಕರವಾದ ಹಂದಿ ಮಾಂಸವನ್ನು ಸವಿಯಿರಿ.



Click it and Unblock the Notifications











