Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿಯಾಗಿರುತ್ತೆ ಈ ಸ್ವೀಟ್ ಅಂಡ್ ಸೋರ್ ಚಿಕನ್
ಚಿಕನ್ ಸಾರನ್ನು ಸಿಹಿಯಾಗಿ ಮಾಡಿದರೆ ಇಷ್ಟ ಪಡುವಿರಾ? ಇಲ್ಲ ಅನ್ನುವವರು ಕೂಡ ಈ ಸ್ವೀಟ್ ಅಂಡ್ ಸೋರ್ ಚಿಕನ್ ತಿಂದರೆ ಖಂಡಿತ ಇಷ್ಟಪಡುವಿರಿ, ಎಷ್ಟೆಂದರೂ ಇದು ಚೈನೀಸ್ ಶೈಲಿಯ ಅಡುಗೆಯಲ್ಲವೇ? ಮಕ್ಕಳಿಗಂತೂ ತುಂಬಾ ಇಷ್ಟವಾಗುವುದು.
ಇದನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.
ಸ್ವೀಟ್ ಅಂಡ್ ಸೋರ್ ಚಿಕನ್
ಬೇಕಾಗುವ ಸಾಮಾಗ್ರಿಗಳು
ಚಿಕನ್ ಅರ್ಧ ಕೆಜಿ (ಬೋನ್ ಲೆಸ್)
ಮೊಟ್ಟೆ 2
ಜೋಳದ ಹಿಟ್ಟು 2 ಚಮಚ
ಈರುಳ್ಳಿ 1
ಗಾರ್ಲಿಕ್ 6-7 ಎಸಳು
ಕ್ಯಾಪ್ಸಿಕಂ 1
ಪೈನಾಪಲ್ 100 ಗ್ರಾಂ
ಸೋಯಾ ಸಾಸ್ 1 ಚಮಚ
ಆಪಲ್ ಸೈಡರ್ 1 ಚಮಚ
ಸಕ್ಕರೆ 1 ಚಮಚ
ಕರಿ ಮೆಣಸಿನ ಪುಡಿ ಒಂದು ಚಮಚ
ಟೊಮೆಟೊ ಕೆಚಪ್ 3 ಚಮಚ
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಚಿಕನ್ ಅನ್ನು ಶುದ್ಧ ಮಾಡಿ ಅದರಲ್ಲಿ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಇಡಿ.
* 1 ಚಮಚ ಜೋಳದ ಹಿಟ್ಟಿಗೆ 2 ಚಮಚ ನೀರು ಹಾಕಿ ಮಿಕ್ಸ್ ಮಾಡಿ, ನಂತರ ಎರಡು ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಚಿಕನ್ ಪೀಸ್ ಹಾಕಿ ಅದಕ್ಕೆ ಮೊಟ್ಟೆ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ.
* ನಂತರ ಚಿಕನ್ ಪೀಸ್ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಅದೇ ಪಾತ್ರೆಗೆ ಪಾತ್ರೆಗೆ ಸಕ್ಕರೆ ಸೇರಿಸಿ ನಂತರ ಈರುಳ್ಳಿ , ಬೆಳ್ಳುಳ್ಳಿ ಸೇರಿಸಿ 2-3 ನಿಮಿಷ ಹುರಿಯಿರಿ (ಬೇಕಿದ್ದರೆ ಒಂದು ಚಮಚ ಎಣ್ಣೆ ಸೇರಿಸಿ). ನಂತರ ಕ್ಯಾಪ್ಸಿಕಂ ಮತ್ತು ಪೈನಾಪಲ್ ಪೀಸ್ ಸೇರಿಸಿ, 2 ನಿಮಿಷ ಬಿಸಿ ಮಾಡಿ.
* ಈಗ ಸೋಯಾ ಸಾಸ್ ಮತ್ತು ಆಪಲ್ ಸೈಡರ್ ವಿನೆಗರ್ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ 3-4 ನಿಮಿಷ ಬೇಯಿಸಿ ನಂತರ ಟೊಮೆಟೊ ಕೆಚಪ್ ಸೇರಿಸಿ ಮಿಕ್ಸ್ ಮಾಡಿ ಮತ್ತೆ ಎರಡು ನಿಮಿಷ ಬೇಯಿಸಿ.
* ನಂತರ ಫ್ರೈ ಮಾಡಿಟ್ಟ ಚಿಕನ್ ಪೀಸ್ ಸೇರಿಸಿ, ಅರ್ಧ ಕಪ್ ನೀರು ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 15-20 ನಿಮಿಷ ಬೇಯಿಸಿ. ಇಷ್ಟು ಮಾಡಿದರೆ ಸ್ವೀಟ್ ಅಂಡ್ ಸೋರ್ ಚಿಕನ್ ರೆಡಿ.



Click it and Unblock the Notifications

