Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫಟಾಫಟ್ ರೆಡಿ ಮಾಡಿ ಮಟನ್ ಮಸಾಲಾ ಗ್ರೇವಿ....
ಮಾಂಸದ ಅಡುಗೆ ಪ್ರಿಯರಿಗೆ ಮಸಾಲೆ ಹಾಗೂ ಕೊಂಚ ಖಾರವಾದ ಖಾದ್ಯಗಳೇ ಇಷ್ಟ. ಆದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಹೆಚ್ಚಿನ ಮನೆಗಳಲ್ಲಿ ಇದರ ಅಡುಗೆ ಮಾಡಲು ಕೊಂಚ ಹಿಂದೇಟು ಹಾಕುತ್ತಾರೆ. ಆದರೆ ಇಂದು ಪ್ರಸ್ತುತಪಡಿಸುತ್ತಿರುವ ವಿಧಾನ ಅಲ್ಪ ಸಮಯ ಮತ್ತು ಸುಲಭ ವಿಧಾನವನ್ನು ಅನುಸರಿಸುತ್ತಿದ್ದರೂ ರುಚಿಯಲ್ಲಿ ಮಾತ್ರ ಯಾವುದೇ ಮಸಾಲೆಗೆ ಕಡಿಮೆಯಿಲ್ಲದ ಸ್ವಾದ ನೀಡುತ್ತದೆ.
ವಾಸ್ತವವಾಗಿ ಕುರಿಮಾಂಸದ ಅಡುಗೆಯಲ್ಲಿಯೇ ಅತ್ಯಂತ ಕಡಿಮೆ ಸಮಯ ಬಳಸಿ ಮಾಡಬಹುದಾದ ಈ ಮಟನ್ ಗ್ರೇವಿಯನ್ನು ತಯಾರಿಸಲು ಹೆಚ್ಚಿನ ಸಾಮಾಗ್ರಿಗಳೇನೂ ಬೇಕಾಗಿಲ್ಲ, ಅಡುಗೆಮನೆಯಲ್ಲಿ ಸಾಮಾನ್ಯವಾಗಿರುವ ಸಾಮಾಗ್ರಿಗಳೇ ಸಾಕು. ಆದರೆ ಇದನ್ನು ತಯಾರಿಸಿ ಬಡಿಸಿದ ಬಳಿಕ ಮಾತ್ರ ಎಷ್ಟು ಬೇಗನೇ ಖಾಲಿಯಾಗುತ್ತದೆ ಎಂದರೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ...! ಈ ಗ್ರೇವಿಯನ್ನು ಅನ್ನದೊಡನೆಯೂ, ಚಪಾತಿ ಪೂರಿ, ಕುಲ್ಛಾ, ಆಲು ಪರೋಟ ಒಟ್ಟಾರೆ ಗ್ರೇವಿ ಬಳಸಿ ತಿನ್ನಬಹುದಾದ ಯಾವುದೇ ರೊಟ್ಟಿ ಬಳಸಿ ತಿನ್ನಬಹುದು. ಇನ್ನೇಕೆ ತಡ, ಈ ರುಚಿಕರ ಗ್ರೇವಿ ಮಾಡುವ ಬಗೆಯನ್ನು ಈಗ ತಿಳಿದುಕೊಳ್ಳೋಣ: ಡಾಬಾ ಶೈಲಿಯಲ್ಲಿ ಮಟನ್ ಸಾರು

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ನಲವತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.
ಸಾಮಾಗ್ರಿಗಳು:
*ಕುರಿಮಾಂಸ: ಅರ್ಧ ಕೇಜಿ (ಚಿಕ್ಕ ತುಂಡುಗಳನ್ನಾಗಿಸಿ, ಚೆನ್ನಾಗಿ ತೊಳೆದು ನೀರು ಬಸಿದಿರುವುದು)
*ಬೆಣ್ಣೆ : ಅರ್ಧ ಕಪ್ (ಉಪ್ಪಿಲ್ಲದ ಬೆಣ್ಣೆ ಉತ್ತಮ)
*ಗರಂ ಮಸಾಲಾ ಪುಡಿ: ಒಂದು ಚಿಕ್ಕ ಚಮಚ
*ಧನಿಯ ಪುಡಿ - ಒಂದು ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ - ಒಂದು ಚಿಕ್ಕ ಚಮಚ (ಬ್ಯಾಡಗಿ ಮೆಣಸು ಅತ್ಯುತ್ತಮ. ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಿಕ್ಕ ಚಮಚ ಬಳಸಿ)
*ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ
*ಹಸಿಮೆಣಸು - 5 ರಿಂದ 6
*ಹೆಚ್ಚಿದ ಈರುಳ್ಳಿ- 1 ಕಪ್
*ಲಿಂಬೆ ರಸ- ಒಂದು ಚಿಕ್ಕ ಚಮಚ
*ಎಣ್ಣೆ ಅಗತ್ಯಕ್ಕೆ ತಕ್ಕಂತೆ
*ಉಪ್ಪು: ರುಚಿಗನುಸಾರ
*ಕೊತ್ತಂಬರಿ ಸೊಪ್ಪು: ಅಲಂಕರಿಸಲು ಅನ್ನದ ಜೊತೆ ತಿನ್ನಲು ಬೆಸ್ಟ್ ಈ ಮಟನ್ ಸಾರು
ವಿಧಾನ:
1) ಒಂದು ಪಾತ್ರೆಯಲ್ಲಿ ಗರಂ ಮಸಾಲಾ ಪುಡಿ, ಧನಿಯ ಪುಡಿ, ಮೆಣಸಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
2) ಪ್ರೆಶರ್ ಕುಕ್ಕರ್ ಅನ್ನು ಕೊಂಚ ಬಿಸಿ ಮಾಡಿ ಇದರಲ್ಲಿ ಬೆಣ್ಣೆ ಹಾಕಿ.
3) ಬೆಣ್ಣೆ ಕರಗಿದ ಬಳಿಕ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ತಿರುವಿ. ಬಳಿಕ ಹಸಿಮೆಣಸು ಹಾಕಿ ಕೊಂಚ ಹುರಿಯಿರಿ
4) ಈರುಳ್ಳಿ ಬೆಂದು ಎಣ್ಣೆ ಬಿಡುವ ವೇಳೆಗೆ ಕುರಿಮಾಂಸ ಹಾಕಿ ನಿಧಾನವಾಗಿ ತಿರುವುತ್ತಾ ಹುರಿಯಿರಿ.
5) ಮಸಾಲೆ ಕುರಿಮಾಂಸಕ್ಕೆ ಅಂಟಿದೆ ಎಂದು ಖಚಿತವಾದ ಬಳಿಕ ಪಾತ್ರೆಯಲ್ಲಿ ಮಿಶ್ರಣ ಮಾಡಿದ್ದ ಮಸಾಲೆಯನ್ನು ಹಾಕಿ ತಿರುವಿ.
6) ಕುರಿಮಾಂಸ ಸರಿಸುಮಾರು ಮುಕ್ಕಾಲು ಪಾಲು ಬೆಂದಿದೆ ಅನ್ನಿಸಿದ ಬಳಿಕ ಕೊಂಚ ಉಪ್ಪು, ಲಿಂಬೆರಸ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಕುದಿಯಲು ಪ್ರಾರಂಭಿಸಿದ ಬಳಿಕ ಕುಕ್ಕರಿನ ಮುಚ್ಚಳ ಮುಚ್ಚಿ ಐದರಿಂದ ಆರು ಸೀಟಿ ಬರುವವರೆಗೆ ಬೇಯಿಸಿ. (ಕುರಿಮಾಂಸ ಎಳೆಯದಾಗಿದ್ದರೆ ಮಾತ್ರ, ಕೊಂಚ ಬಲಿತದ್ದು ಅನ್ನಿಸಿದರೆ ಹತ್ತು ಸೀಟಿಗಳಾದರೂ ಬೇಕು)
7) ಬಳಿಕ ಉರಿ ನಂದಿಸಿ ಕುಕ್ಕರನ್ನು ಹಾಗೇ ತಣಿಯಲು ಬಿಡಿ. ಕೊಂಚ ತಣಿದ ಬಳಿಕ ಕುಕ್ಕರ್ ಸೀಟ್ ಮೇಲೆ ತಣ್ಣೀರು ಸುರಿದು ತಣಿಸಿ ಮುಚ್ಚಳ ತೆಗೆದು ಈ ಗ್ರೇವಿಯನ್ನು ಕೊಂಚ ಎಣ್ಣೆ ಸವರಿದ ಇನ್ನೊಂದು ಪಾತ್ರೆಗೆ ಸುರಿಯಿರಿ. (ಎಣ್ಣೆ ಸವರದಿದ್ದರೆ ರುಚಿಯಲ್ಲಿ ಕೊಂಚ ಕಹಿ ಬರುತ್ತದೆ)
8) ಕೊತ್ತಂಬರಿ ಸೊಪ್ಪಿನಿಂದ ಈ ಪಾತ್ರೆಯನ್ನು ಅಲಂಕರಿಸಿ. ಬಿಸಿಬಿಸಿಯಾಗಿದ್ದಂತೆಯೇ ಅನ್ನ ಅಥವಾ ರೊಟ್ಟಿ,ಚಪಾತಿಗಳೊಂದಿಗೆ ಬಡಿಸಿ, ಮೆಚ್ಚುಗೆ ಗಳಿಸಿ. ಈ ವಿಧಾನ ಹೇಗಿನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.



Click it and Unblock the Notifications
