Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅನ್ನದ ಜೊತೆ ತಿನ್ನಲು ಮೊಟ್ಟೆ ಸಾರು
ಈಗಾಗಲೇ ಅನೇಕ ಮೊಟ್ಟೆ ಸಾರಿನ ರೆಸಿಪಿ ನೀಡಿದ್ದೇವೆ. ಮೊಟ್ಟೆ ಸಾರನ್ನು ನೂರಕ್ಕೂ ಹೆಚ್ಚಿನ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಕೊಟ್ಟಿರುವುದು ತುಂಬಾ ಸರಳವಾದ ರೆಸಿಪಿಯಾಗಿದೆ. ಈ ರೊಟ್ಟಿ, ಚಪಾತಿಗಿಂತ ಅನ್ನದ ಜೊತೆ ತಿನ್ನಲು ಹೆಚ್ಚು ಸ್ವಾದಿಷ್ಟಕರವಾಗಿರುತ್ತದೆ.
ಬನ್ನಿ ಇದನ್ನು ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ 6
ತೆಂಗಿನ ತುರಿ 1 ಕಪ್
ಈರುಳ್ಳಿ 1
ಟೊಮೆಟೊ 1
ಬೆಳ್ಳುಳ್ಳಿ ಎಸಳು 4-5
ಹಸಿ ಮೆಣಸಿನಕಾಯಿ 2
ಕೊತ್ತಂಬರಿ ಪುಡಿ1 ಚಮಚ
ಖಾರಕ್ಕೆ ತಕ್ಕ ಮೆಣಸಿನ ಪುಡಿ
ಅರಿಶಿಣ ಪುಡಿ ಅರ್ಧ ಚಮಚ
ಸಾಸಿವೆ
ಜೀರಿಗೆ
ಚಕ್ಕೆ, ಲವಂಗ
ಕರಿ ಬೇವಿನ ಎಲೆ
ಸ್ವಲ್ಪ ಹುಣಸೆ ಹಣ್ಣು
ಎಣ್ಣೆ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ತೆಂಗಿನ ತುರಿಗೆ ಬೆಳ್ಳುಳ್ಳಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಹಾಕಿ ನುಣ್ಣನೆ ರುಬ್ಬಿ.
* ಈಗ ಪಾತ್ರೆಯನ್ನು ಉರಿ ಮೇಲೆ ಇಟ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಕರಿ ಬೇವಿನ ಎಲೆ ಹಾಕಿ. ಚಕ್ಕೆ, ಲವಂಗ ಹಾಕಿ. ಹಸಿ ಮೆಣಸಿನಕಾಯಿ ಹಾಕಿ. ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
* ಈಗ ರುಬ್ಬಿದ ಮಸಾಲೆ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ಮಿಶ್ರಣ ಕುದಿ ಬರುವಾಗ ಸ್ವಲ್ಪ ಹುಣಸೆ ಹಣ್ಣಿನ ರಸ ಹಾಕಿ ಕುದಿಸಿ. ಈಗ ಬೆಂದ ಬೆಂದ ಮೊಟ್ಟೆಯನ್ನು ಸಮ ಅರ್ಧ ಭಾಗವಾಗಿ ಕತ್ತರಿಸಿ ಹಾಕಿ 2-3 ನಿಮಿಷ ಕುದಿಸಿದರೆ ರುಚಿಕರವಾದ ಮೊಟ್ಟೆ ಸಾರು ರೆಡಿ.
ಇದನ್ನು ಅನ್ನದ ಜೊತೆ ತಿನ್ನಲು ರುಚಿಯಾಗಿರುತ್ತದೆ.



Click it and Unblock the Notifications
