Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಸುಲಭವಾಗಿ ತಯಾರಿಸಿ ಆಂಧ್ರ ಶೈಲಿಯ ಮೊಟ್ಟೆ ಕರಿ ರೆಸಿಪಿ
ಆಂಧ್ರ ರೆಸಿಪಿ ತಮ್ಮ ಖಾರ ಮತ್ತು ಮಸಾಲೆಗಳಿಗೆ ಭಾರೀ ಜನಪ್ರಿಯವಾಗಿವೆ. ಒಂದು ವೇಳೆ ನೀವು ಮಸಾಲೆ, ಖಾರ ಪ್ರಿಯರಾಗಿದ್ದಲ್ಲಿ, ಈ ತೆಲುಗು ಶೈಲಿಯ ರೆಸಿಪಿಗಳನ್ನು ಖಂಡಿತ ಇಷ್ಟಪಡುತ್ತೀರಿ. ಆಂಧ್ರ ರೆಸಿಪಿಗಳು ತಮ್ಮದೇ ಆದ ಅನುಪಮವಾದ ಸ್ವಾದಕ್ಕೆ ಹೆಸರಾಗಿವೆ. ಇಂದು ನಾವು ವಿಶೇಷವಾದ ಆಂಧ್ರ ಶೈಲಿಯ ಮೊಟ್ಟೆ ಕರಿಯನ್ನು ಮಾಡುವುದನ್ನು ತಿಳಿಸಿಕೊಡುತ್ತೇವೆ. ಇದನ್ನು ಸ್ಥಳೀಯವಾಗಿ ಕೋಡಿ ಗುಡ್ಡು ಪುಲುಸು ಎಂದು ತೆಲುಗಿನಲ್ಲಿ ಕರೆಯುತ್ತಾರೆ.
ಈ ರೆಸಿಪಿಯು ಮಾಡುವುದು ಸುಲಭ ಮತ್ತು ಇದನ್ನು ಶೀಘ್ರವಾಗಿ ಮಾಡಬಹುದು. ಕೆಲಸ ಮಾಡುತ್ತ ಒಂಟಿಯಾಗಿರುವವರಿಗೆ ಈ ಖಾದ್ಯವು ಹೇಳಿ ಮಾಡಿಸಿದ ಆಯ್ಕೆಯಾಗಿರುತ್ತದೆ. ಇದಕ್ಕೆ ಬೇಕಾಗಿರುವ ಮುಖ್ಯ ಪದಾರ್ಥದಲ್ಲಿ ಹುಣಸೆಕಾಯಿ ಸಹ ಸೇರಿರುತ್ತದೆ. ಇದು ಮೊಟ್ಟೆ ಕರ್ರಿಗೆ ಒಂದು ಬಗೆಯ ಹುಳಿಯ ಸ್ವಾದವನ್ನು ನೀಡುತ್ತದೆ. ಇದರ ಜೊತೆಗೆ ಮಸಾಲೆಗಳು ಇರುತ್ತವೆ. ಬನ್ನಿ ತಡಮಾಡದೆ ಕೋಡಿ ಗುಡ್ಡು ಪುಲುಸು ಮಾಡುವುದನ್ನು ತಿಳಿದುಕೊಳ್ಳೋಣ. ಮನಸ್ಸಿಗೆ ಮುದವನ್ನು ನೀಡುವ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ!

*ಪ್ರಮಾಣ: 3 ಜನರಿಗೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು
ಪದಾರ್ಥಗಳು
*ಬೇಯಿಸಿದ ಮೊಟ್ಟೆ- 3
*ಈರುಳ್ಳಿ - 1 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 5-6 ತುಂಡು (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಟೊಮೇಟೊ - 2 (ಕತ್ತರಿಸಿದಂತಹುದು)
*ಅರಿಶಿಣ ಪುಡಿ - 1 ಟೀ . ಚಮಚ
*ಖಾರದ ಪುಡಿ - 2 ಟೀ. ಚಮಚ
*ಕೊತ್ತೊಂಬರಿ ಪುಡಿ - 1 ಟೀ. ಚಮಚ
*ಹುಣಸೆ - 1/2 ಕಪ್
*ಬೆಲ್ಲ - 1 ಟೀ. ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಸಾಸಿವೆ - 1 ಟೀ.ಚಮಚ
*ಜೀರಿಗೆ - 1 ಟೀ. ಚಮಚ
*ಕರಿ ಬೇವು - 1 ಕಟ್ಟು
*ಎಣ್ಣೆ - 2 ಟೀ. ಚಮಚ
*ಕೊತ್ತಂಬರಿ ಸೊಪ್ಪು - 2 ಟೀ. ಚಮಚ (ಕತ್ತರಿಸಿದಂತಹುದು)
ವಿಧಾನ
1. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಸಾಸಿವೆ ಬೀಜಗಳನ್ನು ,ಜೀರಿಗೆ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಕೆಲವು ಸೆಕೆಂಡ್‍ಗಳ ಕಾಲ ಉರಿಯಿರಿ.
2. ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿ 4-5 ನಿಮಿಷಗಳ ಕಾಲ ಉರಿಯಿರಿ.
3. ನಂತರ ಇದಕ್ಕೆ ಹಸಿ ಮೆಣಸು, ಅರಿಶಿಣ ಪುಡಿ, ಖಾರದ ಪುಡಿ ಮತ್ತು ಧನಿಯಾ ಪುಡಿಗಳನ್ನು ಹಾಕಿ. 2-3 ನಿಮಿಷಗಳ ಕಾಲ ಬೇಯಿಸಿ.
4. ನಂತರ ಇದಕ್ಕೆ ಕತ್ತರಿಸಿದ ಟೊಮೇಟೊ ಮತ್ತು ಹುಣಸೆಯನ್ನು ಹಾಕಿ. 3-4 ನಿಮಿಷಗಳ ಕಾಲ ಬೇಯಿಸಿ.
5. ಆಮೇಲೆ ಬೆಲ್ಲ ಮತ್ತು ಉಪ್ಪನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, ಮತ್ತೆ 4-5 ನಿಮಿಷಗಳ ಕಾಲ ಬೇಯಿಸಿ.
6. ಈಗ ಇದಕ್ಕೆ ಬೇಯಿಸಿದ ಮೊಟ್ಟೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
7. ಇದೆಲ್ಲ ಮುಗಿದ ಮೇಲೆ, ಉರಿಯನ್ನು ಆರಿಸಿ. ಕರಿಯ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಈಗ ನಿಮ್ಮ ಮುಂದೆ ಕೋಡಿ ಗುಡ್ಡು ಪುಲುಸು ಅಥವಾ ಆಂಧ್ರ ಮೊಟ್ಟೆ ಕರಿ ಸಿದ್ಧವಾಗಿದೆ. ಇದನ್ನು ಅನ್ನದ ಜೊತೆಗೆ ಬಡಿಸಿ, ಕುಟುಂಬದವರ ಜೊತೆಗೆ ಸೇವಿಸುತ್ತ ಆನಂದಿಸಿ.
ಪೋಷಕಾಂಶಗಳ ಪ್ರಮಾಣ
*ಮೊಟ್ಟೆ ಕರಿಯು ಇತರೆ ಮಾಂಸಾಹಾರಿ ಖಾದ್ಯಗಳಿಗೆ ಹೋಲಿಸಿದರೆ, ಹೆಚ್ಚಿನ ಆರೋಗ್ಯಕಾರಿಯಾಗಿರುತ್ತದೆ. ಈ ಖಾದ್ಯದಲ್ಲಿ ಆದಷ್ಟು ಕಡಿಮೆ ಕ್ಯಾಲೊರಿಗಳು ಇರುತ್ತವೆ ಮತ್ತು ಒಳ್ಳೆಯ ಪ್ರೋಟೀನ್‍ಗಳು ಇರುತ್ತವೆ. ಇದಕ್ಕೆ ಆದಷ್ಟು ಕಡಿಮೆ ಎಣ್ಣೆಯನ್ನು ಹಾಕಿ, ಅಧಿಕ ಕ್ಯಾಲೋರಿಗಳನ್ನು ನಿಮ್ಮದಾಗಿಸಿಕೊಳ್ಳಿ.
ಸಲಹೆಗಳು
ಆದಷ್ಟು ಬೆಂದ ಮೊಟ್ಟೆಗಳನ್ನು ಕತ್ತರಿಸಿ ಈ ಗ್ರೇವಿಗೆ ಹಾಕಿ. ಇದರಿಂದ ಮೊಟ್ಟೆಯು ಸಹ ಗ್ರೇವಿಯನ್ನು ಹೀರಿಕೊಳ್ಳಲು ಸಹಕಾರಿಯಾಗಿ ಗ್ರೇವಿ ಮತ್ತಷ್ಟು ರುಚಿಕರವಾಗಿರುತ್ತದೆ.



Click it and Unblock the Notifications






