Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸ್ವಾದಿಷ್ಟಕರ ಸೀಗಡಿ ಮೀನಿನ ಕರಿ
ಸೀಗಡಿ ಮೀನು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ನಾನಾ ರುಚಿಯಲ್ಲಿ, ನಾನಾ ಬಗೆಯಲ್ಲಿ ಖಾದ್ಯಗಳನ್ನು ತಯಾರಿಸಬಹುದು. ಅಂತಹ ಖಾದ್ಯಗಳಲ್ಲೊಂದು ಸೀಗಡಿ ಮೀನು ಕರಿ ಅಥವಾ ಸಾರು. ಇದನ್ನು ಕೂಡ ನಾನಾ ರುಚಿಯಲ್ಲಿ ತಯಾರಿಸಬಹುದು. ಇವತ್ತು ತೆಂಗಿನ ಹಾಲು ಬಳಸಿ ತಯಾರಿಸುವ ಸೀಗಡಿ ಮೀನು ಕರಿ ಮಾಡುವ ವಿಧಾನದ ಬಗ್ಗೆ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
1. ಶುದ್ಧ ಮಾಡಿದ ಸೀಗಡಿ ಮೀನು 20-25 ಅಥವಾ ಅರ್ಧ ಕೆಜಿ
2. ನಿಂಬೆರಸ
3. ಎಣ್ಣೆ 3 ಚಮಚ
4. ಸಾಸಿವೆ ಅರ್ಧ ಚಮಚ
5. ಕರಿ ಬೇವಿನ ಎಲೆ ಸ್ವಲ್ಪ
6. ಕತ್ತರಿಸಿದ ಈರುಳ್ಳಿ
7. ಉದ್ದದ್ದವಾಗಿ ಹಸಿಮೆಣಸಿನ ಕಾಯಿ 7-8
8. ಒಂದು ಇಂಚಿನಷ್ಟು ಉದ್ದದ ಶುಂಠಿ
9. ಕತ್ತರಿಸಿದ ಟೊಮೆಟೊ 1
10. ಅರಿಶಿಣ 1/4 ಚಮಚ
11. ತೆಂಗಿನ ಹಾಲು 1 ಕಪ್
12. ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಸಾರು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಕರಿಬೇವಿನ ಎಲೆ, ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ, ಜಜ್ಜಿದ ಶುಂಠಿ ಹಾಕಿ ಈರುಳ್ಳಿ ಕಂದುಬಣ್ಣ ಬರುವವರೆಗೆ ಹುರಿಯಬೇಕು.
2. ನಂತರ ಸೀಗಡಿ ಮೀನನ್ನು ಅದರಲ್ಲಿ ಹಾಕಿ 2-3 ನಿಮಿಷ ಹರಿಯಬೇಕು.
3. ಈಗ ಕತ್ತರಿಸಿದ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬಿಸಿ ಮಾಡಬೇಕು.ನಂತರ ಅರಿಶಿಣ ಮತ್ತು ರುಚಿಗೆ ತಕ್ಕ ಉಪ್ಪು ಒಂದು ಕಪ್ ತೆಂಗಿನ ಹಾಲು ಹಾಕಿ ಸೀಗಡಿ ಮೀನನ್ನು ಬೇಯಿಸಬೇಕು.
4. ಮೀನು ಬೆಂದ ನಂತರ ರುಚಿಗೆ ತಕ್ಕ ನಿಂಬೆರಸ ಸೇರಿಸಿದರೆ ರುಚಿಕರವಾದ ಸೀಗಡಿ ಮೀನು ರೆಡಿ.



Click it and Unblock the Notifications
