Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರಾನ್ ಪ್ರಿಯರಿಗಾಗಿ ಪ್ರಾನ್ ಚಿಲ್ಲಿ ಫ್ರೈ
ಪ್ರಾನ್ ಫುಡ್ಸ್ ಅಂದರೆ ಕೆಲವರಿಗಂತೂ ಇತರ ಸಮುದ್ರಾಹಾರಗಳಿಗಿಂತ ತುಂಬಾನೆ ಇಷ್ಟ. ಪ್ರಾನ್ ನ ರುಚಿಯೇ ಹಾಗೆ, ಒಮ್ಮೆ ಅದರ ರುಚಿ ನೋಡಿದವರು ಮತ್ತೆ ಅದನ್ನು ದೂರ ಮಾಡುವುದು ತುಂಬಾ ವಿರಳ! ಈ ಪ್ರಾನ್ ನಿಂದ ನಾನಾ ಅಡುಗೆ ಮಾಡಿರುತ್ತಿರಿ. ಆದರೆ ತೆಂಗಿನ ತುರಿ ಹಾಕಿ ಮಾಡುವ ಪ್ರಾನ್ ಚಿಲ್ಲಿ ಫ್ರೈ ಮಾಡಿದ್ದೀರಾ?
ಇದು ತುಂಬಾ ಸರಳವಾದ ರೆಸಿಪಿಯಾದ ಕಾರಣ ನಿಮಗೆ ಈ ಪ್ರಾನ್ ಚಿಲ್ಲಿ ಪ್ರೈ ಮತ್ತಷ್ಟು ಪ್ರಿಯವಾಗುವುದು. ಬನ್ನಿ ಈ ರೆಸಿಪಿಯತ್ತ ಕಣ್ಣಾಡಿಸೋಣವೇ?

ಬೇಕಾಗುವ ಸಾಮಾಗ್ರಿಗಳು
ಪ್ರಾನ್ 200 ಗ್ರಾಂ
ಈರುಳ್ಳಿ 2
ಆಲೂಗಡ್ಡೆ 1
ಹಸಿ ಮೆಣಸಿನಕಾಯಿ 2
ಅರಿಶಿಣ ಪುಡಿ 1 ಚಮಚ
ತೆಂಗಿನ ತುರಿ (ಅರ್ಧ ತೆಂಗಿನಕಾಯಿ)
ಬೆಳ್ಳುಳ್ಳಿ 4 ಎಸಳು
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ತಯಾರಿಸುವ ವಿಧಾನ:
* ಪ್ರಾನ್ ಅನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಆಲೂಗಡ್ಡೆ ಹಾಕಿ, ಹಸಿ ಮೆಣಸಿನಕಾಯಿ ಹಾಕಿ 2-3 ನಿಮಿಷ ಫ್ರೈ ಮಾಡಿ (ಹೆಚ್ಚು ಖಾರ ತಿನ್ನವವರಾದರೆ ಎರಡು ಮೆಣಸು ಹೆಚ್ಚೇ ಹಾಕಬಹುದು).
* ಈಗ ಪ್ರಾನ್ಸ್ (ಸಿಗಡಿ ಹಾಕಿ) ಹಾಕಿ 5-6 ನಿಮಿಷ ಫ್ರೈ ಮಾಡಿ.
* ಈಗ ಅರಿಶಿಣ ಪುಡಿ ಸೇರಿಸಿ, ತೆಂಗಿನ ತುರಿ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಪ್ರಾನ್ಸ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
ಇಷ್ಟು ಮಾಡಿದರೆ ಪ್ರಾನ್ ಚಿಲ್ಲಿ ಫ್ರೈ ರೆಡಿ.



Click it and Unblock the Notifications
