Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರಾನ್ ಕ್ಯಾಪ್ಸಿಕಂ ಸಾರಿನ ರೆಸಿಪಿ
ಪ್ರಾನ್ ಸಾರನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ತೆಂಗಿನಕಾಯಿ ಹಾಕಿ ಮಾಡಬಹುದು, ಹಾಗೇ ಮಾಡಬಹುದು, ಗ್ರೇವಿ ರೀತಿ ಮಾಡಬಹುದು ಹೀಗೆ ನಮಗೆ ಹೇಗೆ ಬೇಕೋ ಆ ರುಚಿಯಲ್ಲಿ ತಯಾರಿಸಬಹುದು.
ಇಲ್ಲಿ ನಾವು ಬರೀ ಮಸಾಲೆ ಸಾಮಾಗ್ರಿ ಬಳಸಿ ಮಾಡುವ ತುಂಬಾ ಸರಳವಾದ ಪ್ರಾನ್ ಕ್ಯಾಪ್ಸಿಕಂ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಸೀಗಡಿ(ಪ್ರಾನ್ಸ್) 500 ಗ್ರಾಂ
ಈರುಳ್ಳಿ 1
ಬೆಳ್ಳುಳ್ಳಿ ಎಸಳು 8-10
ಕ್ಯಾಪ್ಸಿಕಂ 1
ಟೊಮೆಟೊ 1
ಸ್ವಲ್ಪ ಹುಣಸೆ ಹಣ್ಣು
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಅರಿಶಿಣ ಪುಡಿ ಹಾಗೂ ಗರಂ ಮಸಾಲ ಅರ್ಧ ಚಮಚದಷ್ಟು
ಹಸಿ ಮೆಣಸಿನಕಾಯಿ 2
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಪ್ರಾನ್ ಅನ್ನು ಶುಚಿಗೊಳಿಸಿ ಉಪ್ಪು, ಅರಿಶಿಣ ಹಾಕಿ ಮಿಶ್ರ ಮಾಡಿ ಅರ್ಧ ಗಂಟೆ ಕಾಲ ಇಡಿ.
* ಬಾಣಲೆಗೆ ಎಣ್ಣೆ ಹಾಕಿ, ಅದರಲ್ಲಿ ಪ್ರಾನ್ ಹಾಕಿ ಪ್ರಾನ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಫ್ರೈ ಮಾಡಿದ ಪ್ರಾನ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ ನಂತರ ಬೆಳ್ಳುಳ್ಳಿ ಹಾಗೂ ಕರಿ ಬೇವಿನ ಎಲೆ ಹಾಕಿ. ಈಗ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಕತ್ತರಿಸಿದ ದುಂಡು ಮೆಣಸಿನಕಾಯಿ ಹಾಕಿ, ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಿರಿ.
* ಈಗ ಮಸಾಲೆ ಪದಾರ್ಥಗಳನ್ನು ಸೇರಿಸಿ, ಸ್ವಲ್ಪ ಉಪ್ಪು ಹಾಕಿ, 2 ಕಪ್ ನೀರು ಸೇರಿಸಿ ಕುದಿಸಿ. ಸಾರು ಕುದಿ ಬರುವಾಗ ಹುಣಸೆ ಹಣ್ಣಿನ ರಸವನ್ನು ಹ ಹಾಕಿ. ನಂತರ ಪುನಃ 5 ನಿಮಿಷ ಕುದಿಸಿ. ಮಿಶ್ರಣ ಕುದಿ ಬರುವಾಗ ಫ್ರೈ ಮಾಡಿದ ಪ್ರಾನ್ ಹಾಕಿ, 5 ನಿಮಿಷ ಬೇಯಿಸಿ ಉಪ್ಪು ನೋಡಿ ಉರಿಯಿಂದ ಇಳಿಸಿದರೆ ರುಚಿಕರವಾದ ಪ್ರಾನ್ ಕ್ಯಾಪ್ಸಿಕಂ ಸಾರು ರೆಡಿ.



Click it and Unblock the Notifications
