Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕ್ರಿಸ್ಮಸ್ ಹಬ್ಬಕ್ಕೆ ರುಚಿಕರವಾದ ಹಂದಿ ಮಾಂಸದ ಅಡುಗೆ
ಕ್ರಿಸ್ಮಸ್‌ಗೆ ಹಬ್ಬವನ್ನು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಚರಿಸುವುದು ಹೆಚ್ಚು ಮೋಜುದಾಯಕವಾಗಿರುತ್ತದೆ. ಇಂತಹ ಕ್ಷಣವನ್ನು ನಾಲಿಗೆಯ ರುಚಿ ತಣಿಸುವ ರುಚಿಕರ ಹಂದಿ ಮಾಂಸದ ಅಡುಗೆಯೊಂದಿಗೆ ಆಚರಿಸಿದರೆ, ಅದು ಇನ್ನಷ್ಟು ಸ್ವಾದಿಷ್ಟಕರ ಹಾಗೂ ಅರ್ಥಪೂರ್ಣವಾಗುತ್ತದೆ.
ಇನ್ನೇನು ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ, ಇಂತಹ ಸಮಯದಲ್ಲಿ ಎಲ್ಲಾ ಮಾಂಸಹಾರಿ ಪ್ರಿಯರು ಹಂದಿ ಮಾಂಸದ ಅಡುಗೆಯನ್ನು ವಿಭಿನ್ನ ರೀತಿಯಲ್ಲಿ ಮಾಡಲು ಆಲೋಚಿಸುತ್ತಾರೆ. ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮನೆಯ ಡೈನಿಂಗ್ ಟೇಬಲ್‌ನಲ್ಲಿ ಹಂದಿ ಮಾಂಸದ ಅಡುಗೆ ಹೆಚ್ಚಾಗಿ ಕಂಡುಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಇದರೊಂದಿಗೆ ಹೊಸದಾಗಿ ಹಂದಿ ಮಾಂಸದ ಅಡುಗೆ ಮಾಡುವವರು ಮಾಂಸವನ್ನು ಸ್ವಚ್ಛಗೊಳಿಸುವುದನ್ನು ಚೆನ್ನಾಗಿ ಅರಿತಿರಬೇಕು. ಮಾಂಸವನ್ನು ಕೇಸರಿಯಲ್ಲಿ ನೆನೆಸಿಡುವುದು ಅದರ ರುಚಿಯನ್ನು ಹೆಚ್ಚಿಸುತ್ತದೆ. .
ಹಾಗಾಗಿ ನಿಮ್ಮ ಕ್ರಿಸ್ಮಸ್ ಪಾರ್ಟಿಗೆ ಸರಿಹೊಂದುವ ಕೆಲವೊಂದು ಕೆಲವೊಂದು ರುಚಿ ರುಚಿಯಾದ ಹಂದಿ ಮಾಂಸದ ಅಡುಗೆಗಳನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ. ಈ ರೆಸೆಪಿ ನಿಮ್ಮನ್ನು ಹಾಗೂ ನಿಮ್ಮ ಅತಿಥಿಗಳನ್ನು ಖಂಡಿತವಾಗಿ ಸಂತೋಪಪಡಿಸುತ್ತದೆ.
ಹಾಗಾದರೆ ಇನ್ನೇಕೆ ತಡ ? ಬನ್ನಿ ನಿಮ್ಮ ಕ್ರಿಸ್ಮಸ್ ಪಾರ್ಟಿಗೆ ಇಂತಹ ಹಂದಿ ಮಾಂಸ ಅಡುಗೆಗಳನ್ನು ಮಾಡಲು ಪ್ರಯತ್ನಿಸಿ.

ಹಂದಿ ಮಾಂಸದ ವಿನಡಾಲೊ
ಹಂದಿ ಮಾಂಸದ ವಿನಡಾಲೊ ತುಂಬಾ ಖಾರವಾಗಿದ್ದು, ಗೋವಾದಲ್ಲಿ ಹೆಚ್ಚಾಗಿ ಜನಪ್ರಿಯವಾಗಿದೆ. ಪೋರ್ಚುಗೀಸ್ ಮೂಲದ ಅಡುಗೆಯಾದ ಇದನ್ನು ವೈನ್ ಜೊತೆ ಬಳಸುವುದರಿಂದ ಖಾದ್ಯದ ರುಚಿ ಅಧಿಕವಾಗುತ್ತದೆ.

ಅನಾನಸ್ ಹಂದಿ ಮಾಂಸ
ಅನಾನಸ್ ಹಂದಿ ಮಾಂಸವು ಸಿಹಿ ಹಾಗೂ ಹುಳಿಯಿಂದ ಕೂಡಿದ್ದು, ಮಾಂಸಹಾರ ಪ್ರಿಯರಂತೂ ಇಂತಹ ರುಚಿಕರವಾದ ಅಡುಗೆಯನ್ನು ತುಂಬಾ ಇಷ್ಟಪಡುತ್ತಾರೆ. ನಾಲಿಗೆಯ ರುಚಿ ತಣಿಸುವ ಈ ರೆಸೆಪಿಯನ್ನು ನೀವು ಅನ್ನ ಅಥವಾ ಚಪಾತಿ ಜೊತೆ ಕೂಡ ಬಳಸಬಹುದು.

ಹಂದಿ ಮಾಂಸದ ಸೋರ್‌ಪಾಟೆಲ್
ಹದವಾದ ಮಸಾಲೆ, ವಿನೇಗರ್, ಹುಣಸೆಹಣ್ಣು ಬೆರೆತ ಸೋರ್‌ಪಾಟೆಲ್ ಮಾಂಸದಡುಗೆಯ ಭಿನ್ನತೆಯನ್ನು ಹೆಚ್ಚಿಸುತ್ತದೆ. ಇದೆಲ್ಲಾ ಮಿಶ್ರಣವನ್ನು ಚೆನ್ನಾಗಿ ಹೀರಿಕೊಂಡಿರುವ ಹಂದಿ ಮಾಂಸವನ್ನು ಕಡಿಮೆ ಶಾಖದಲ್ಲಿ ಬೇಯಿಸಿ. ಹಂದಿ ಮಾಂಸ ಪ್ರಿಯರು ಪ್ರಯತ್ನಿಸಲೇ ಬೇಕಾಗಿರುವ ಈ ರೆಸಿಪಿಯು ಖಂಡಿತವಾಗಿಯೂ ನಿಮ್ಮ ನಾಲಿಗೆಗೆ ರಸಗವಳವೇ ಹೌದು.

ರುಚಿಕರವಾದ ಹಂದಿ ಮಾಂಸ ಪದಾರ್ಥ
ಭಾರತೀಯ ಶೈಲಿಯಂತೆ ತಯಾರಿಸಿದ ಕೆಂಪು ಬಣ್ಣದಿಂದ ಕೂಡಿರುವ ಹಂದಿ ಮಾಂಸ ಪದಾರ್ಥವನ್ನು, ಒಲೆಯಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಹಿತಕರ ಹಾಗೂ ಪರಿಮಳಯುಕ್ತ ತೆಂಗಿನ ಹಾಲನ್ನು ಸೇರಿಸಿ. ಖಾರದಿಂದ ಕೂಡಿದ ಹಾಗೂ ಸ್ವಾದಿಷ್ಟ ಸುವಾಸನೆಯುಕ್ತ ಹಾಲಿನ ಮಿಶ್ರಣದ ಪಾಕವು ಹಂದಿ ಮಾಂಸ ಪದಾರ್ಥವನ್ನು ನಿಜವಾಗಿಯೂ ರುಚಿಕಟ್ಟಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಹಂದಿ ಮಾಂಸದ ಚಾಪ್ಸ್
ಕ್ರಿಸ್ಮಸ್ ಹಬ್ಬಕ್ಕೆ ಇನ್ನಷ್ಟು ರುಚಿಕರವನ್ನಾಗಿಸುವ ಹಂದಿ ಮಾಂಸದ ಚಾಪ್ಸ್‌ನ ಖಾದ್ಯದ ರುಚಿಯನ್ನು ನೀವು ಸವಿಯಲೇಬೇಕು. ಇದರಲ್ಲಿ ಬೆರೆತಿರುವ ಮಸಾಲೆಯು ಖಾದ್ಯವನ್ನು ಪರಿಪೂರ್ಣಗೊಳಿಸುತ್ತದೆ. ಖಾರ ಹಾಗೂ ಹಣ್ಣಿನ ಮಿಶ್ರಣದೊಂದಿಗೆ ಕೂಡಿರುವ ಈ ಡಿಶ್ ಹಂದಿ ಮಾಂಸ ಪ್ರಿಯರ ಅಚ್ಚುಮೆಚ್ಚಿನದಾಗಿದೆ.

ಟ್ರೋಟರ್ಸ್
ಹಂದಿಯ ಕಾಲುಗಳಿಂದ ಮಾಡಿದ ಮಾಂಸದಡುಗೆಯೇ ಟ್ರೋಟರ್ಸ್. ಟೊಮೆಟೋ. ವಿನೇಗರ್ ಮತ್ತು ಲಿಂಬೆರಸ ಹಾಗೂ ಸಾಸ್‌ನಿಂದ ಇದನ್ನು ತಯಾರಿಸಲಾಗುತ್ತದೆ. ಇವುಗಳು ಈ ಖಾದ್ಯಕ್ಕೆ ರುಚಿ ಸೇರಿಸುವುದರಲ್ಲಿ ಎರಡು ಮಾತಿಲ್ಲ.

ಹ್ಯಾಮ್ ಸ್ಯಾಂಡ್‌ವಿಚ್
ಹಂದಿಮಾಂಸದಿಂದ ತುಂಬಾ ಸರಳವಾಗಿ ಮಾಡುವ ಪಾಕ ಇದಾಗಿದೆ. ಇದಕ್ಕೆ ಬೇಕಾಗುವುದು ಬೇಯಿಸಿದ ಆಲೂಗಡ್ಡೆ ಮತ್ತು ತೆಳುವಾಗಿ ಗೋಲಾಕಾರದಲ್ಲಿ ತುಂಡರಿಸಿದ ಹಂದಿ ಮಾಂಸ.

ಕಾಳುಮೆಣಸಿನ ಹಂದಿಮಾಂಸ.
ಈ ಅಡುಗೆಯಲ್ಲಿ ಕಾಳುಮೆಣಸು ಮುಖ್ಯವಾಗಿರುತ್ತದೆ. ಇತರ ಯಾವುದೇ ಖಾರಕ್ಕೆ ಹೋಲಿಸಿದಾಗ ಕಾಳುಮೆಣಸಿನಿಂದ ಕೂಡಿದ ಹಂದಿ ಖಾದ್ಯವು ನೀಡುವ ಖಾರ ಅದ್ಭುತವಾದುದು. ರುಚಿ ಕೂಡ ನಾಲಗೆಯ ಹಸಿವನ್ನು ಇಂಗಿಸುತ್ತದೆ. ಸರಳವಾಗಿ ಮಾಡುವ ಹಂದಿ ಮಾಂಸದ ಅಡುಗೆಯಲ್ಲಿ ಕಾಳುಮೆಣಸನ್ನು ಸೇರಿಸಿ ಮತ್ತು ಅದರ ರುಚಿ ಸವಿಯಿರಿ.



Click it and Unblock the Notifications
