Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೀನು ಪ್ರಿಯರಿಗಾಗಿ ಪಾಂಫ್ರೆಟ್ ಫಿಶ್ ಫ್ರೈ

ಬೇಕಾಗುವ ಸಾಮಗ್ರಿಗಳು:
* 1 ಕೆ.ಜಿ. ಪಾಂಫ್ರೆಟ್ ಫಿಶ್
* ರುಚಿಗೆ ತಕ್ಕ ಉಪ್ಪು
* 4 ಚಮಚ ಖಾರದ ಪುಡಿ
* 1 ಮೊಟ್ಟೆ
* 1/4 ಚಮಚ ಅರಿಶಿಣ
* 100 ಗ್ರಾಂ ರವೆ,
* ಎಣ್ಣೆ
* ನಿಂಬೆರಸ
ಮಾಡುವ ವಿಧಾನ:
1. ಸ್ವಚ್ಛಗೊಳಿಸಿದ ಪಾಂಫ್ರೆಟ್ ಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅರ್ಧ ಗಂಟೆ ಬಿಡಬೇಕು.
2. ಖಾರದಪುಡಿ, ಸ್ವಲ್ಪ ಉಪ್ಪು, ಅರಿಶಿಣ ಪುಡಿ ಮತ್ತು ಮೊಟ್ಟೆಯನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಮಿಶ್ರಣ ಸ್ವಲ್ಪ ಗಟ್ಟಿಯಾಗಿರಬೇಕು. ನಂತರ ಆ ಮಿಶ್ರಣವನ್ನು ಮೀನಿಗೆ ಚೆನ್ನಾಗಿ ಸವರಿ ಒಂದು ಗಂಟೆ ಇಡಬೇಕು.
3. ನಂತರ ಮೀನನ್ನು ರವೆಯಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ರುಚಿಕರವಾದ ಪಾಂಫ್ರೆಟ್ ಫಿಶ್ ಫ್ರೈ ರೆಡಿ. ಅದಕ್ಕೆ ನಿಂಬೆ ರಸ ಹಿಂಡಿದರೆ ಈ ಮೀನು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಈ ಮೀನನ್ನು ಫ್ರೈ ಮಾಡಿ ಫ್ರಿಜ್ ನಲ್ಲಿ ಎರಡು ದಿನಗಳವರೆಗೆ ಇಟ್ಟು ತಿನ್ನಬಹುದು. ಆದರೆ ಪ್ರತಿ ಬಾರಿ ತಿನ್ನುವಾಗ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೀನನ್ನು ಬಿಸಿ ಮಾಡಿ ತಿನ್ನಿ. ಮನೆಗೆ ನೆಂಟರಿಷ್ಟರು ಬಂದಾಗ ಪಾಂಫ್ರಟ್ ಫ್ರೈ ಮಾಡುವುದಾದರೆ, ಫ್ರೈಯನ್ನು ತಟ್ಟೆಗೆ ಹಾಕಿ, ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ಹಣ್ಣಿನ ತುಡನ್ನು ತಟ್ಟೆಯಲ್ಲಿ ಇಟ್ಟು ಅನ್ನದ ಜೊತೆ ಸವಿಯಲು ಕೊಡಿ.
ಸಲಹೆ: ಫ್ರಿಜ್ ನಲ್ಲಿ ಇಡುವ ಮೀನಿಗೆ ನಿಂಬೆ ರಸ ಹಿಂಡ ಬೇಡಿ, ತಿನ್ನುವಾಗ ಹಿಂಡಿದರೆ ಸಾಕು.



Click it and Unblock the Notifications
