Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮೊಘಲ್ ಮಟನ್ ಬಿರಿಯಾನಿ ರೆಸಿಪಿ
ಆಂಧ್ರ ಬಿರಿಯಾನಿ, ಕೇರಳ ಬಿರಿಯಾನಿ, ಹೈದರಾಬಾದ್ ಬಿರಿಯಾನಿ ಹೀಗೆ ಅನೇಕ ಬಗೆಯಲ್ಲಿ ಬಿರಿಯಾನಿಯನ್ನು ತಯಾರಿಸಬಹುದು. ಒಂದು ಬಿರಿಯಾನಿಯ ರುಚಿ ಮತ್ತೊಂದು ಬಿರಿಯಾನಿಗಿಂತ ಭಿನ್ನವಾಗಿರುತ್ತದೆ.
ಬಿರಿಯಾನಿಗಳಲ್ಲಿ ಮೊಘಲ್ ಬಿರಿಯಾನಿ ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ಬಿರಿಯಾನಿಯಾಗಿದೆ. ಮೊಘಲ್ ಮಟನ್ ಬಿರಿಯಾನಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಬಿರಿಯಾನಿಯನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
ಅರ್ಧ ಕೆಜಿ ಬಾಸುಮತಿ ಅಕ್ಕಿ
1 ಕೆಜಿ ಮಟನ್ (ಚಿಕ್ಕ ತುಂಡುಗಳು)
2 ಚಮಚ ಗರಂ ಮಸಾಲ
6 ಕೆಂಪು ಮೆಣಸು
ಸ್ವಲ್ಪ ಚಕ್ಕೆ
ಏಲಕ್ಕಿ 2
ಹಸಿ ಮೆಣಸಿನ ಕಾಯಿ 2
ಸ್ವಲ್ಪ ಗೋಡಂಬಿ
ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ 5 ಎಸಳು
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಸೊಪ್ಪು
ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಒಂದೊಂದು ಚಮಚ
1 ಕಪ್ ಮೊಸರು
1 ನಿಂಬೆ ಹಣ್ಣು
4 ಬೇಯಿಸಿದ ಮೊಟ್ಟೆ
ಕೇಸರಿ
ಸ್ವಲ್ಪ ಹಾಲು
ಸ್ವಲ್ಪ ತುಪ್ಪ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕೆಂಪು ಮೆಣಸು ಹಾಗೂ ಗೋಡಂಬಿಯನ್ನು ಅರೆದು ಪೇಸ್ಟ್ ರೀತಿಯಲ್ಲಿ ಮಾಡಬೇಕು.
2. ಮಟನ್ ತುಂಡುಗಳನ್ನು ಶುಚಿ ಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಮೊಸರು ಹಾಕಿ ಬದಿಯಲ್ಲಿ ಇಡಿ.
3. ಈಗ ಕೆಂಪು ಮೆಣಸು ಹಾಗೂ ಗೋಡಂಬಿ ಪೇಸ್ಟ್, ಈರುಳ್ಳಿ ಅನ್ನು ಚೆನ್ನಾಗಿ ಫ್ರೈ ಮಾಡಬೇಕು. ಈ ಪೇಸ್ಟ್ ಗೆ ಮಟನ್, ಗರಂ ಮಸಾಲ ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಬೇಕು. ನಂತರ ಒಂದು ಕಪ್ ಬಿಸಿ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಮಟನ್ ಬೇಯುವವರೆಗೆ ಬೇಯಿಸಿ. ಈ ಮಟನ್ ಡ್ರೈ ರೀತಿಯಲ್ಲಿ ಇರಲಿ.
4. ಈಗ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಚಕ್ಕೆ, ಲವಂಗ, ಏಲಕ್ಕಿ, ಪುದೀನಾ ಹಾಕಬೇಕು. ಈಗ ಹಸಿ ಮೆಣಸಿನ ಕಾಯಿ ಹಾಕಿ, 2 ಕಪ್ ಅಕ್ಕಿಯನ್ನು ಹಾಕಿ 2 ಕಪ್ ಗೆ 4 ಕಪ್ ನೀರು, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಬೇಕು.
5. ನಂತರ ಮತ್ತೊಂದು ಪಾತ್ರೆಯ ಅಡಿಯಲ್ಲಿ ತುಪ್ಪ ಹಾಕಿ ಅದರ ಮೇಲೆ ಬೇಯಿಸಿದ ಅನ್ನ ಹಾಕಿ ನಂತರ ಮಟನ್, ಅದರ ಮೇಲೆ ಸ್ವಲ್ಪ ನಿಂಬೆ ರಸ, ಪುನಃ ಅನ್ನ, ಮಟನ್, ನಿಂಬೆ ರಸ ರೀತಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ 20 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಬೇಕು.
ನಂತರ ತುಪ್ಪ ಹಾಕಿ, ಹಾಲಿನಲ್ಲಿ ಕಲಿಸಿದ ಕೇಸರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಅದರ ಮೇಲೆ ಮೊಟ್ಟೆಯನ್ನು ಕತ್ತರಿಸಿಟ್ಟರೆ ಮೊಘಲ್ ಮಟನ್ ಬಿರಿಯಾನಿ ರೆಡಿ.



Click it and Unblock the Notifications
